ಮಥೂರಾದ ಶ್ರೀಕೃಷ್ಣ ಮಂದಿರದಲ್ಲಿನ ಭಗವಾನ್ ಶ್ರೀ ಕೃಷ್ಣನ ಮೂರ್ತಿ ಹುಡುಕುವುದಕ್ಕಾಗಿ ಸಮೀಕ್ಷೆ ನಡೆಸಿ !

ನಿರೂಪಕ ಕೌಶಲ್ ಕಿಶೋರ್ ಠಾಕೂರ್ ಅವರಿಂದ ಭಾರತೀಯ ಪುರಾತತ್ವ ಇಲಾಖೆಗೆ ಪತ್ರ

ಮಥುರಾ (ಉತ್ತರಪ್ರದೇಶ) – ಅಲ್ಲಿನ ಖ್ಯಾತ ಪ್ರವಚನಕಾರರಾದ ಕೌಶಲ ಕಿಶೋರ ಠಾಕೂರ ಅವರು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಗೆ ಪತ್ರ ಬರೆಡಿದ್ದು, ಆಗ್ರಾ ಮಸೀದಿಯ ಮೆಟ್ಟಲುಗಳ ಸಮೀಕ್ಷೆ ನಡೆಸಬೇಕೆಂದು ವಿನಂತಿ ಮಾಡಿದ್ದಾರೆ. ಈ ಮಸೀದಿಯ ಮೆಟ್ಟಲುಗಳ ಕೆಳಗೆ ಭಗವಾನ್ ಶ್ರೀ ಕೃಷ್ಣನ ಮೂರ್ತಿ ಹುಗಿದಿದ್ದಾರೆ ಎಂದು ಹೇಳಿದರು. ಶ್ರೀ ಕೃಷ್ಣ ಜನ್ಮಸ್ಥಳದ ಮಂದಿರದ ಮೂಲ ಗರ್ಭಗೃಹದಲ್ಲಿ ಸ್ಥಾಪಿಸಿದ್ದ ಮೂರ್ತಿಯೇ ಇದಾಗಿದೆ ಎಂದು ಠಾಕೂರ ಅವರು ಸ್ಪಷ್ಟವಾಗಿ ನುಡಿದಿದ್ದಾರೆ. .

೧. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ರೀನಾ ಎನ್ ಸಿಂಹ ಅವರು ಕೌಶಲ ಕಿಶೋರ ಠಾಕೂರ ಅವರ ಪರವಾಗಿ ಬರೆದಿರುವ ಈ ಪತ್ರದಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಯೋಗ್ಯ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು ಮತ್ತು ಭಗವಾನ್ ಶ್ರೀ ಕೃಷ್ಣನ ಮೂರ್ತಿ ಎಲ್ಲಿ ಹುಗಿದ್ದಿದ್ದಾರೆ? ಎಂಬುದನ್ನೂ ಕೂಡ ಹುಡುಕಬೇಕು ಎಂದು ಮನವಿ ಮಾಡಿದ್ದಾರೆ.

ನನ್ನ ಗಮನಕ್ಕೆ ಬಂದಂತೆ, ಐತಿಹಾಸಿಕ ದಾಖಲೆಗಳು, ಸಾಹಿತ್ಯ ಮತ್ತು ಸ್ಥಳೀಯ ದಂತ ಕಥೆಗಳಲ್ಲಿ ಭಗವಾನ್ ಕೃಷ್ಣನ ಪವಿತ್ರ ಮೂರ್ತಿಯ ಉಪಸ್ಥಿತಿಯ ಕುರಿತಾದ ಮಾಹಿತಿಗಳಿವೆ. ಶ್ರೀಷ್ಣನ ಮೂರ್ತಿಯನ್ನು ‘ಭಗವಾನ ಕೇಶವದೇವ’ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಈ ಮೂರ್ತಿ ಭಗವಾನ್ ಕೃಷ್ಣನ ಮರಿಮೊಮ್ಮಗರಾದ ಮಹಾರಾಜ ವಜ್ರಭಾನ ಅವರು ಭಗವಂತನ ಮೂಲ ಜನ್ಮಸ್ಥಾನದಲ್ಲಿ ಸ್ಥಾಪಿಸಿದ್ದರು.

೨. ರಾಧಾರಾಣಿ ಮತ್ತು ಇತರೆ ಹಿಂದೂ ದೇವತೆಗಳ ಮೂರ್ತಿಯ ಸಹಿತ ಈ ಮೂರ್ತಿಯನ್ನೂ ಸಹ ಹುಗಿದಿದ್ದಾರೆ ಎಂದು ಸಂತ ಕೌಶಲ ಕಿಶೋರ ಠಾಕೂರ ಇವರ ದಾವೆಯಾಗಿದೆ. ಈ ಸಮೀಕ್ಷೆಯ ಫಲಿತಾಂಶದ ಬಳಿಕ ಹಿಂದೂ ಜನಾಂಗಕ್ಕೆ ಭಗವಾನ್ ಶ್ರೀ ಕೃಷ್ಣನ ಮೂರ್ತಿ ಹಿಂತಿರುಗಿ ಸಿಗುವುದರ ಜೊತೆಗೆ, ದೇವತೆಗಳ ಮೂರ್ತಿ ಹುಗಿದಿರುವ ಐತಿಹಾಸಿಕ ಕಾರಣಗಳ ಮೇಲೆ ಕೂಡ ಬೆಳಕು ಚೆಲ್ಲಬಹುದು.

೩. ಈ ಹಿಂದೆ ಸೆಪ್ಟೆಂಬರ್ ೨೦೨೨ ರಂದು ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಅವರು ಮಥುರಾ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆಗ್ರಾ ಮಸೀದಿಯ ಮೆಟ್ಟಲಡಿ ಶ್ರೀ ಕೃಷ್ಣನ ಮೂರ್ತಿ ಹುಗಿದಿದ್ದು, ಅದನ್ನು ಅಗೆದು ಹೊರತೆಗೆಯಬೇಕೆಂದು ಸಿಂಹ ಅವರು ಆಗ್ರಹಿಸಿದ್ದರು .

ಸಂಪಾದಕೀಯ ನಿಲುವು

ಭಾರತದಲ್ಲಿನ ಹಿಂದೂಗಳ ಅನೇಕ ಮಂದಿರಗಳನ್ನು ಮುಸಲ್ಮಾನ ಆಕ್ರಮಣಕಾರರು ಧ್ವಂಸಗೊಳಿಸಿ ಅಲ್ಲಿ ಮಸೀದಿಗಳನ್ನು ಕಟ್ಟಿದ್ದಾರೆ. ಈಗ ಹಿಂದುಗಳು ಜಾಗೃತವಾಗಿರುವುದರಿಂದ ಈ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯಲು ನಾವು ಆಗ್ರಹಿಸುತ್ತಿದ್ದೇವೆ. ಆದ್ದರಿಂದ ಈಗ ಸರಕಾರವೇ ಖುದ್ದಾಗಿ ಭಾರತಾದ್ಯಂತ ಇರುವ ಇಂತಹ ಎಲ್ಲಾ ಮಂದಿರಗಳ ಪಟ್ಟಿ ತಯಾರಿಸಿ ಅದರ ಸಮೀಕ್ಷೆ ನಡೆಸುವ ಆದೇಶ ನೀಡಬೇಕು !