ಭಾರತದ ಹೆಸರು ಹೇಳದೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ಹೇಳಿಕೆ !
ಮಾಲೆ (ಮಾಲ್ಡೀವ) – ಮಾಲ್ಡೀವ ಒಂದು ಸಣ್ಣ ದೇಶವಲ್ಲ. ಅದು ತನ್ನ ಸ್ವಂತ ಕ್ಷೇತ್ರದ ಮೇಲೆ ನಿಗಾವಹಿಸಲು ಸುದೃಢವಾಗಿದೆ. ಹಿಂದೂ ಮಹಾಸಾಗರದ ನಮ್ಮ ದೇಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳ ಬಗ್ಗೆ ಯಾವುದೇ ಹೊರಗಿನ ಪಕ್ಷವು ಚಿಂತಿಸುವ ಅಗತ್ಯವಿಲ್ಲ ಎಂದು ಮಾಲ್ಡೀವನ ರಾಷ್ಟ್ರಪತಿ ಮಹಮ್ಮದ ಮುಯಿಜ್ಜೂ ಹೇಳಿದ್ದಾರೆ. ಮಾಲ್ಡೀವ ನ್ಯಾಶನಲ್ ಡಿಫೆನ್ಸ್ ಫೋರ್ಸ್, ಏರ ಕಾರ್ಪ್ಸ ಮತ್ತು ಮಾನವರಹಿತ ವೈಮಾನಿಕ ವಾಹನಗಳ ಉದ್ಘಾಟನೆಗಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಮುಯಿಜ್ಜೂ ಯಾವುದೇ ದೇಶದ ಹೆಸರನ್ನು ಉಲ್ಲೇಖಿಸದೇ ಮಾತನಾಡಿ, ಮಾಲ್ಡೀವ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿದೆ. ಮಾಲ್ಡೀವ ಸ್ವಾವಲಂಬಿಯಾಗುವ ದೃಷ್ಟಿಯಿಂದ ಮುನ್ನಡೆಯುತ್ತಿದ್ದು, ಪ್ರತಿಯೊಂದು ವಿಷಯದಲ್ಲಿಯೂ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿ ಉಳಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ದೇಶದಲ್ಲಿ ವಿಭಿನ್ನ ವಿಚಾರಸರಣಿಗಳನ್ನು ಹೊಂದಿರುವ ಜನರು ವಾಸಿಸುತ್ತಿದ್ದಾರೆ; ಆದರೆ ಎಲ್ಲರ ಹಿತವನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಮಾಲ್ಡೀವ ಎಲ್ಲಾ ದೇಶಗಳೊಂದಿಗಿನ ನಿಕಟ ಸಂಬಂಧಗಳು ಕೆಡುವುದಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಸಧ್ಯ ಚೀನಾಕ್ಕೆ ಹತ್ತಿರ ಮಾಡಿಕೊಂಡ ಮಾಲ್ಡೀವನ ನಿರ್ಧಾರಗಳು ಅದರ ಅವನತಿಗೆ ಕಾರಣವಾಗಲಿದೆ, ಎನ್ನುವುದಂತೂ ಖಚಿತವಾಗಿದೆ. ಇದನ್ನು ಮಾಲ್ಡೀವ್ಸ್ ಜನರು ಗಮನಕ್ಕೆ ತೆಗೆದುಕೊಂಡು ಚಿಂತಿಸಬೇಕು ! |