ಶಂಕರಾಚಾರ್ಯ ಸ್ವಾಮಿ ಶ್ರೀನಿಶ್ಚಲಾನಂದ ಸರಸ್ವತಿ ಇವರ ಆಶೀರ್ವಾದ !
(ಘರವಾಪಸಿ ಎಂದರೆ ಹಿಂದೂ ಧರ್ಮದಲ್ಲಿ ಪುನರ್ಪ್ರವೇಶ)
ಅಂಬಿಕಾಪುರ (ಛತ್ತಿಸ್ಗಢ) – ಇಲ್ಲಿ ಇತ್ತೀಚಿಗೆ ‘ಘರವಾಪಾಸಿ’ಯ ಕಾರ್ಯಕ್ರಮ ನೆರವೇರಿತು. ಭಾರತೀಯ ಜನತಾ ಪಕ್ಷದ ನಾಯಕ ಪ್ರಬಲ ಪ್ರತಾಪ ಸಿಂಹ ಜುದೆವ ಇವರ ನೇತೃತ್ವದಲ್ಲಿ ೨೨ ಕುಟುಂಬದ ೧೦೦ ಜನರು ಹಿಂದೂ ಧರ್ಮದಲ್ಲಿ ಪುನರ್ಪ್ರವೇಶ ಮಾಡಿದರು. ‘ಶ್ರೀ ಶಂಕರಾಚಾರ್ಯ ಸ್ವಾಗತ ಸಮಿತಿ’ಯ ನೇತೃತ್ವದಲ್ಲಿ ಆಯೋಜಿಸಿರುವ ೩ ದಿನದ ಹಿಂದೂ ರಾಷ್ಟ್ರಧರ್ಮಸಭೆಯ ಸಮಯದಲ್ಲಿ ಸಪ್ಟೆಂಬರ್ ೨೯, ೨೦೨೪ ರಂದು ಈ ಘರವಾಪಸಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಪುರಿ ಪೀಠದ ಶಂಕರಚಾರ್ಯ ಸ್ವಾಮಿ ಶ್ರೀ ನಿಶ್ಚಲಾನಂದ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದೂ ಧರ್ಮದಲ್ಲಿ ಪುನರ್ಪ್ರವೇಶ ಮಾಡಿರುವವ ಎಲ್ಲರೂ ಶಂಕರಾಚಾರ್ಯರ ಆಶೀರ್ವಾದ ಪಡೆದರು.
“Gharwapsi” of 100 people belonging to 22 families in Chattisgarh’s Ambikapur
They received blessings from Shankaracharya Swami Nishchalanand Saraswati@prabaljudevBJP
घर वापसी#Hindutva
PC – @eOrganiser pic.twitter.com/lRMSpCAy3Y
— Sanatan Prabhat (@SanatanPrabhat) September 30, 2024
ಶಂಕರಾಚಾರ್ಯ ಸ್ವಾಮಿ ಶ್ರೀನಿಶ್ಚಲಾನಂದ ಸರಸ್ವತಿ ಇವರು ಅನೇಕ ವರ್ಷಗಳಿಂದ ಗೋಹತ್ಯೆ ಮತ್ತು ಮತಾಂತರದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ‘ಪ್ರತಿಯೊಂದು ಹಿಂದೂ ಸನಾತನಿ ಆಗಿರಬೇಕು’ ಎಂದು ಅವರ ಅಭಿಪ್ರಾಯವಾಗಿದೆ. ಈ ಸಮಯದಲ್ಲಿ ಮಾರ್ಗದರ್ಶನ ನೀಡುವಾಗ ಅವರು ಕೇಂದ್ರ ಸರಕಾರಕ್ಕೆ ಗೋಹತ್ಯೆ ಮತ್ತು ಮತಾಂತರದ ವಿರುದ್ಧ ಕಠಿಣ ಕಾನೂನು ರೂಪಿಸುವ ಕರೆ ನೀಡಿದರು.