ಪೊಲೀಸರು ಬಂಧಿಸಿದರು
ಬೆಂಗಳೂರು – ಕಳೆದ ಆರು ವರ್ಷಗಳಿಂದ ಪಾಕಿಸ್ತಾನಿ ಕುಟುಂಬವೊಂದು ಶರ್ಮಾ ಎನ್ನುವ ಅಡ್ಡಹೆಸರಿನಲ್ಲಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿತ್ತು. ಪೊಲೀಸರು ರಶೀದ ಅಲಿ ಸಿದ್ದಿಕಿ (ವಯಸ್ಸು 48 ವರ್ಷ) ಅವನ ಪತ್ನಿ ಆಯೇಶಾ (ವಯಸ್ಸು 38ವರ್ಷಗಳು) ಮತ್ತು ಅವನ ಅತ್ತೆ- ಮಾವ ಹನೀಫ ಮಹಮದ (ವಯಸ್ಸು 73 ವರ್ಷಗಳು) ರುಬಿನಾ(ವಯಸ್ಸು 61 ವರ್ಷಗಳು) ಇವರನ್ನು ಜಿಗಣಿಯಿಂದ ಬಂಧಿಸಲಾಯಿತು. ಈ ಕುಟುಂಬವು ಕ್ರಮವಾಗಿ ಶಂಕರ್ ಶರ್ಮಾ, ಆಶಾ ರಾಣಿ, ರಾಮ ಬಾಬು ಶರ್ಮಾ ಮತ್ತು ರಾಣಿ ಶರ್ಮಾ ಹೆಸರನ್ನು ಇಟ್ಟುಕೊಂಡಿದ್ದರು.
1. ಇಬ್ಬರು ಪಾಕಿಸ್ತಾನಿ ಪ್ರಜೆಗಳು ಬಾಂಗ್ಲಾದೇಶ ಮಾರ್ಗವಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಈ ಸಮಯದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅನುಮಾನ ಬಂದು, ಅವರ ತನಿಖೆ ನಡೆಸಿದಾಗ ಪಾಸ್‌ಪೋರ್ಟ್ ನಕಲಿ ಎಂದು ತಿಳಿದುಬಂದಿದೆ. ವಿಚಾರಣೆ ನಡೆಸಿದಾಗ, ಸಿದ್ದಿಕಿಯವರ ಸಂಬಂಧಿಯೆಂದು ತಿಳಿಯಿತು.
2. ಬೆಂಗಳೂರು ಪೊಲೀಸರು ಸಿದ್ದಿಕಿ ಮನೆಗೆ ತೆರಳಿ ಅವನ ವಿಚಾರಣೆ ನಡೆಸಿದಾಗ ಆತ 2018 ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೇ ಅವನ ಪಾಸ್‌ಪೋರ್ಟ್‌ಗಳು ಮತ್ತು ಆಧಾರ್ ಕಾರ್ಡ್‌ಗಳ ಮೇಲೆಯೂ ಹಿಂದೂ ಹೆಸರು ಇರುವುದು ಕಂಡು ಬಂದಿದೆ.
3. ಪೋಲೀಸರು ಅವನ ಮನೆಯ ತಪಾಸಣೆ ನಡೆಸಿದಾಗ, ಮನೆಯ ಗೋಡೆಗಳ ಮೇಲೆ ‘ಮೆಹದಿ ಫೌಂಡೇಶನ್ ಇಂಟರ್ ನ್ಯಾಷನಲ್ ಜಶ್ನ್-ಎ-ಯೂನಸ್’ ಎಂದು ಬರೆಯಲಾಗಿತ್ತು. ಅಲ್ಲದೆ, ಗೋಡೆಗಳ ಮೇಲೆ ಕೆಲವು ಮೌಲ್ವಿಗಳ ಛಾಯಾಚಿತ್ರಗಳು ಇದ್ದವು.
4. ಪೊಲೀಸರು ಬಿಗಿಯಾಗಿ ತನಿಖೆ ನಡೆಸಿದಾಗ ಸಿದ್ದಿಕಿ ತಾನು ಪಾಕಿಸ್ತಾನಿ ಪ್ರಜೆ ಎಂದು ಒಪ್ಪಿಕೊಂಡನು. ಅವನು ಸ್ವತಃ ಕರಾಚಿಯ ಹತ್ತಿರದ ಲಿಯಾಕತಾಬಾದನ ನಿವಾಸಿಯಾಗಿದ್ದು, ಅವನ ಕುಟುಂಬ ಲಾಹೋರನಲ್ಲಿ ವಾಸಿಸುತ್ತಿತ್ತು. 2011 ರಲ್ಲಿ ಅವನು ಆಯೇಶಾಳೊಂದಿಗೆ ಆನ್ ಲೈನ ವಿವಾಹ ಮಾಡಿಕೊಂಡಿದ್ದನು. ಆಗ ಆಯೇಶಾ ಅವಳ ಪೋಷಕರೊಂದಿಗೆ ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದಳು. ಪಾಕಿಸ್ತಾನದಲ್ಲಿ ಮೆಹದಿ ಫೌಂಡೇಶನ್‌ನ ಧಾರ್ಮಿಕ ಚಟುವಟಿಕೆ ನಡೆಸುತ್ತಿದ್ದುದರಿಂದ ಸಿದ್ಧಕಿಯನ್ನು ದೇಶದಿಂದ ಗಡಿಪಾರು ಮಾಡಲಾಗಿತ್ತು.
5. ಸಿದ್ದಿಕಿ ಬಾಂಗ್ಲಾದೇಶಕ್ಕೆ ಹೋದನು ಮತ್ತು ಅಲ್ಲಿ ಅವನು ಮೆಹದಿ ಫೌಂಡೇಶನ ವೆಚ್ಚದಲ್ಲಿ ಪುನಃ ಧರ್ಮಪ್ರಸಾರ ಪ್ರಾರಂಭಿಸಿದನು. ಆದರೆ 2014 ರಲ್ಲಿ ಬಾಂಗ್ಲಾದೇಶದಲ್ಲಿ ಅವನಿಗೆ ವಿರೋಧ ವ್ಯಕ್ತವಾಯಿತು. ಅದರಿಂದ ಅವನು ಭಾರತದ ಮೆಹದಿ ಫೌಂಡೇಶನ್‌ಗಾಗಿ ಕೆಲಸ ಮಾಡುವ ಪರ್ವೇಜ್ ಹೆಸರಿನ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿ ಭಾರತಕ್ಕೆ ಬಂದನು. ಬಂಗಾಳದ ಮಾಲದಾದಿಂದ ಓರ್ವ ದಲ್ಲಾಳಿಯ ಸಹಾಯದಿಂದ ಸಿದ್ಧಿಕಿ ಮತ್ತು ಅವನ ಪತ್ನಿ, ಅತ್ತೆ-ಮಾವ, ಸಂಬಂಧಿ ಜೈನಾಬಿ ನೂರ ಮತ್ತು ಮಹಮ್ಮದ ಯಾಸಿನ ಇವರು ಅನಧಿಕೃತವಾಗಿ ಭಾರತಕ್ಕೆ ಬಂದರು. ಅವರು ಕೆಲವು ದಿನ ದೆಹಲಿಯಲ್ಲಿ ಉಳಿದರು. ತದನಂತರ ಅವನು ಶರ್ಮಾ ಹೆಸರಿನಿಂದ ನಕಲಿ ಪಾಸಪೋರ್ಟ, ಆಧಾರಕಾರ್ಡ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡನು.
ಸಂಪಾದಕೀಯ ನಿಲುವುಇದು ಭಾರತೀಯ ಭದ್ರತಾ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ! ಇಂತಹ ಇನ್ನೂ ಎಷ್ಟು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ, ಎಂದು ಊಹಿಸಲೂ ಸಾಧ್ಯವಿಲ್ಲ ! ಇಂತಹ ದೇಶ ಎಂದಿಗಾದರೂ ಸುರಕ್ಷಿತವಾಗಿರಬಹುದೇ ? |