ಶಿಯಾ ಮುಸ್ಲಿಮರಿಗೆ ಪಾಕಿಸ್ತಾನ ಅಪಾಯಕಾರಿ ಸ್ಥಳ !

  • ‘ಇಸ್ಲಾಮೋಫೋಬಿಯಾ’ ದಿಂದ (ಇಸ್ಲಾಂ ವಿಷಯದ ದ್ವೇಷದಿಂದ) ಜಗತ್ತಿಗೆ ಉಪದೇಶ ಮಾಡುವ ಪಾಕಿಸ್ತಾನಕ್ಕೆ ಕಾಶ್ಮೀರಿ ಕಾರ್ಯಕರ್ತದಿಂದ ಛೀಮಾರಿ !

  • ಪಾಕಿಸ್ತಾನಕ್ಕೆ ಹೋಲಿಸಿದರೆ ಜಮ್ಮು ಮತ್ತು ಕಾಶ್ಮೀರ ಒಂದು ಉಜ್ವಲ ತಾಣವಾಗಿದೆಯೆಂದೂ ಹೇಳಿಕೆ !

ಜಿನೀವಾ (ಸ್ವಿಟ್ಜರಲ್ಯಾಂಡ) – ಮುಸ್ಲಿಂ ಜಗತ್ತಿನಲ್ಲಿ ತನ್ನ ಪ್ರಾಮುಖ್ಯತೆಯನ್ನು ತೋರಿಸುವ ಪ್ರಯತ್ನ ಮಾಡುವ ಪಾಕಿಸ್ತಾನಕ್ಕೆ ಕಾಶ್ಮೀರಿ ಕಾರ್ಯಕರ್ತರೊಬ್ಬರು ಛೀಮಾರಿ ಹಾಕಿದ್ದಾರೆ. ಕಾಶ್ಮೀರಿ ಕಾರ್ಯಕರ್ತ ಜಾವೇದ ಬೇಗ ಅವರು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ 55 ನೇ ಅಧಿವೇಶನದಲ್ಲಿ ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರ ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲಿದರು. ಅವರು ‘ಪಾಕಿಸ್ತಾನವು ಶಿಯಾ ಜನರಿಗೆ ಅಪಾಯಕಾರಿ ಸ್ಥಳವಾಗಿದೆ’ ಎಂದು ಹೇಳಿದರು. ಬೇಗ್ ಇವರು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಶಿಯಾ ಪಶ್ತೂನಿ ಜನರ ಭೀಕರ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಹಾಗೆಯೇ ಅವರು ಪಾಕಿಸ್ತಾನದ ಪರಿಸ್ಥಿತಿಯನ್ನು ಕಾಶ್ಮೀರದ ಪ್ರಗತಿಯೊಂದಿಗೆ ಹೋಲಿಸಿದರು. ವಿಶೇಷವೆಂದರೆ, ಬೇಗ್ ಅವರು ಈ ಪರಿಸ್ಥಿತಿಯನ್ನು ಬಹಿರಂಗಪಡಿಸುವ ಮೊದಲು, ಹಿಂದಿನ ದಿನ ಪಾಕಿಸ್ತಾನವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಇಸ್ಲಾಮೋಫೋಬಿಯಾ’ ಬಗ್ಗೆ (ಇಸ್ಲಾಂವಿಷಯದ ದ್ವೇಷದ ಬಗ್ಗೆ) ಠರಾವನ್ನು ಮಂಡಿಸಿತ್ತು.

1. ಬೇಗ್ ಇವರು ಭದ್ರತಾ ಪರಿಷತ್ತಿನಲ್ಲಿ ಹೇಳಿದ ಅಂಶವನ್ನು ‘ಎಕ್ಸ್’ನಲ್ಲಿ ಮಾಹಿತಿ ನೀಡುತ್ತಾ, ಪಾಕಿಸ್ತಾನದಲ್ಲಿರುವ ಶಿಯಾ ಜನರ ಶೋಷಣೆ ಎಷ್ಟು ಹೆಚ್ಚಾಗಿದೆಯೆಂದರೆ, ಪಾಕಿಸ್ತಾನಿ ಸಂಸ್ಥೆಗಳು, ನ್ಯಾಯಾಂಗ ವ್ಯವಸ್ಥೆ ಮತ್ತು ಮಾಧ್ಯಮಗಳು ಅವರಿಗೆ ನ್ಯಾಯ ಒದಗಿಸಲು ವಿಫಲವಾಗಿವೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಜಮ್ಮು ಮತ್ತು ಕಾಶ್ಮೀರವು ಒಂದು ಉಜ್ವಲ ಸ್ಥಳವಾಗಿ ನಿರ್ಮಾಣವಾಗಿದೆ. ಅಲ್ಲಿ ಅಂತರ-ಧರ್ಮೀಯ ಸಾಮರಸ್ಯ, ಪ್ರಗತಿ ಮತ್ತು ಎಲ್ಲರೂ ಆರ್ಥಿಕವಾಗಿ ಸುದೃಢರಾಗುತ್ತಿದ್ದಾರೆ. ಇದನ್ನು ಹೇಳಲು ನನಗೆ ಯಾವುದೇ ಸಂಕೋಚವೆನಿಸುವುದಿಲ್ಲ ಎಂದು ಹೇಳಿದರು.

2. ಬೇಗ್ ಇವರು ಪಾರಾಚಿನಾರದಲ್ಲಿರುವ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಸಾಂಪ್ರದಾಯಿಕ ಹಿಂಸಾಚಾರದ ಗಮನ ಸೆಳೆದರು. ಪಾರಾಚಿನಾರದ ಬಹುಸಂಖ್ಯಾತ ಜನಸಂಖ್ಯೆ ತುರಿ ಮತ್ತು ಶಿಯಾ ಬಂಗಶ ಪಶ್ತೂನ ಪಂಗಡವರಾಗಿದ್ದಾರೆ. ದೇವಬಂದಿ ಮತ್ತು ಸಲಾಫಿ ವಿಚಾರ ಸರಣಿಯವರು ಅವರನ್ನು ಕಾಫಿರ(ಮೂರ್ತಿ ಪೂಜಕರು) ಎಂದು ನಂಬುತ್ತಾರೆ. ಕಳೆದ ಮೂರು ದಶಕಗಳಿಂದ ಈ ಶಿಯಾ ಪಂಗಡವು ಈ ವಿಚಾರಸರಣಿಯ ಪಾಲನೆ ಮಾಡುವ ಭಯೋತ್ಪಾದಕ ಸಂಘಟನೆಗಳ ಕೈಯಿಂದ ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಬೇಗ್ ಅವರು 2007 ರ ಯುದ್ಧವನ್ನು ಉಲ್ಲೇಖಿಸಿ ಸುನ್ನಿ ಭಯೋತ್ಪಾದಕರಿಂದ ಸಾವಿರಾರು ಶಿಯಾಗಳ ಹತ್ಯೆಯಾಗಿತ್ತು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಯಾರಾದರೂ ಪಾಕಿಸ್ತಾನ ಪ್ರೇಮಿ ಶಿಯಾ ಮುಸ್ಲಿಮರಿದ್ದರೆ, ಇದರಿಂದ ಅವರ ಕಣ್ಣು ತೆರೆಯುತ್ತದೆ, ಎಂದು ನಿರೀಕ್ಷೆ !