Indian Navy : ಹಿಂದೂ ಮಹಾಸಾಗರದಲ್ಲಿ ಭಯೋತ್ಪಾದಕರು ಮತ್ತು ಕಡಲ್ಗಳ್ಳರ ವಿರುದ್ಧ ಭಾರತೀಯ ನೌಕಾಪಡೆಯ ಹೋರಾಟ !

ಯುರೋಪಿಯನ್ ದೇಶ ಮಾಲ್ಟಾದ ಹಡಗನ್ನು ರಕ್ಷಿಸಲು ಭಾರತೀಯ ನೌಕಾಪಡೆಯ ಅಭಿಯಾನ !

ನವ ದೆಹಲಿ – ಹಿಂದೂ ಮಹಾಸಾಗರ ಮತ್ತು ಅರೇಬಿಯನ ಸಮುದ್ರದಲ್ಲಿ ಭಾರತೀಯ ನೌಕಾಪಡೆಯು ತನ್ನ ಪರಾಕ್ರಮವನ್ನು ತೋರಿಸುತ್ತಿದೆ. ಭಾರತೀಯ ನೌಕಾಪಡೆಯು ಈಗ ಸೋಮಾಲಿಯಾಯ ಕಡಲ್ಗಳರಿಂದ ಮಾಲ್ಟಾ ಈ ಯುರೋಪಿಯನ ದೇಶದ `ಎಮ್.ವಿ.ರೌನ’ ಈ ಹಡಗನ್ನು ರಕ್ಷಿಸುವ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಕಡಲ್ಗಳ್ಳರು ಯುದ್ಧನೌಕೆಯ ಮೇಲೆಯೂ ದಾಳಿ ನಡೆಸಿದರು. ನೌಕಾಪಡೆಯು ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿತು. ಕಡಲ್ಗಳ್ಳರು ಡಿಸೆಂಬರ 2023 ರಲ್ಲಿ ಏಡನ ಕೊಲ್ಲಿಯಿಂದ `ಎಮ್.ವಿ.ರೌನ’ ನೌಕೆಯ ಅಪಹರಣ ಮಾಡಿದ್ದರು. ಆ ಸಮಯದಲ್ಲಿಯೂ ನೌಕಾಪಡೆಯು ಆ ನೌಕೆಯ ಓರ್ವ ಸಿಬ್ಬಂದಿಯನ್ನು ರಕ್ಷಿಸಿತ್ತು.

ನೌಕಾಪಡೆಯು ಮಾರ್ಚ್ 15 ರಂದು ಸೊಮಾಲಿಯಾ ಪೂರ್ವ ದಡದಲ್ಲಿ ಎಂವಿ ರೌನ ಈ ನೌಕೆಯನ್ನು ತಡೆದರು. ನೌಕಾಪಡೆಯು ಒಂದು ಮನವಿಯನ್ನು ಪ್ರಸಾರ ಮಾಡಿ, ಅಂತರರಾಷ್ಟ್ರೀಯ ನಿಯಮಾನುಸಾರ ಕಡಲ್ಗಳ್ಳರ ಮೇಲೆ ಕಾರ್ಯಾಚರಣೆಯನ್ನು ಮಾಡಲಾಗುತ್ತದೆಯೆಂದು ಹೇಳಿದರು. ಆದರೆ ಭಾರತೀಯ ನೌಕಾಪಡೆಯ ಯುದ್ಧನೌಕೆಯ ಮೇಲೆ ಕಡಲ್ಗಳ್ಳರು ಗುಂಡಿನ ದಾಳಿ ನಡೆಸಿದರು. ತದನಂತರ ನೌಕೆಯ ಮೇಲೆ ಉಪಸ್ಥಿತರಿದ್ಧ ಕಡಲ್ಗಳ್ಳರಿಗೆ ಶರಣಾಗುವಂತೆ ತಿಳಿಸಲಾಯಿತು. ಆದರೂ ಕಾರ್ಯಾಚರಣೆಯೂ ಮುಂದುವರಿದಿದೆ. ಭಾರತೀಯ ನೌಕಾಪಡೆ ಸಮುದ್ರ ದಡದಲ್ಲಿ ಭದ್ರತೆಗೆ ಬದ್ಧವಾಗಿದೆ.

ಕಡಲ್ಗಳ್ಳರಿಂದ ಬಾಂಗ್ಲಾದೇಶದ ನೌಕೆಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಭಾರತೀಯ ನೌಕಾಪಡೆಯು ಇತ್ತೀಚೆಗೆ ಕಡಲ್ಗಳ್ಳರಿಂದ ಬಾಂಗ್ಲಾದೇಶಿ ನೌಕೆಯನ್ನು ರಕ್ಷಿಸಿದೆ. ಮಾರ್ಚ್ 12 ರಂದು 15 ರಿಂದ ರಿಂದ 20 ಶಸ್ತ್ರಸಜ್ಜಿತ ಕಡಲ್ಗಳ್ಳರು ಮೊಝಾಂಬಿಕನಿಂದ ಸಂಯುಕ್ತ ಅರಬ ಎಮಿರಾಟ್ ಕಡೆಗೆ ಹೋಗುತ್ತಿದ್ದ ಬಾಂಗ್ಲಾದೇಶಿ ವ್ಯಾಪಾರಿ ನೌಕೆಯನ್ನು ಅಪಹರಿಸಲು ಪ್ರಯತ್ನಿಸಿತು. ದಾಳಿಯ ಸಮಯದಲ್ಲಿ ನೌಕೆಯ ಮೇಲೆ ಬಾಂಗ್ಲಾದೇಶವು 23 ಸಿಬ್ಬಂದಿಗಳಿದ್ದರು. ಮಾರ್ಚ 14 ರಂದು ಬೆಳಿಗ್ಗೆ ನೌಕಾಪಡೆಯು ಬಾಂಗ್ಲಾದೇಶದ ನೌಕೆಯನ್ನು ರಕ್ಷಿಸಿತು.