Indian Ocean Economy : ಮುಂದಿನ 50-60 ವರ್ಷಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶವು ಆರ್ಥಿಕ ಶಕ್ತಿಯ ಕೇಂದ್ರವಾಗಲಿದೆ ! – ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ

ಶ್ರೀಲಂಕಾ ರಾಷ್ಟ್ರಪತಿ ರಾನಿಲ್ ವಿಕ್ರಮಸಿಂಘೆ

ಕೊಲಂಬೊ – ಹಿಂದೂ ಮಹಾಸಾಗರ ಪ್ರದೇಶವು ಅತ್ಯಧಿಕ ಆರ್ಥಿಕ ಬೆಳವಣಿಗೆಯನ್ನು ಅನುಭವಿಸುತ್ತಿದೆ ಮತ್ತು ಮುಂದಿನ 50-60 ವರ್ಷಗಳಲ್ಲಿ ಪ್ರಮುಖ ಆರ್ಥಿಕ ಕೇಂದ್ರವಾಗಲಿದೆ ಎಂದು ಶ್ರೀಲಂಕಾ ರಾಷ್ಟ್ರಪತಿ ರಾನಿಲ್ ವಿಕ್ರಮಸಿಂಘೆ ಅವರು ಭಾರತ ಮತ್ತು ಶ್ರೀಲಂಕಾ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಕುರಿತು ಮಾತನಾಡುತ್ತಾ ಹೇಳಿದರು. ಶ್ರೀಲಂಕಾದ 76 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಭಾರತದ 75 ನೇ ಗಣರಾಜ್ಯೋತ್ಸವವನ್ನು ಆಚರಿಸಲು, ಕೊಲಂಬೊದಲ್ಲಿರುವ ‘ಶ್ರೀಲಂಕಾ-ಇಂಡಿಯಾ ಸೊಸೈಟಿ’ಯಲ್ಲಿ ಮೇಳವನ್ನು ಆಯೋಜಿಸಲಾಗಿತ್ತು. ಇದನ್ನು ಉದ್ದೇಶಿಸಿ ಮಾತನಾಡಿದ ವಿಕ್ರಮಸಿಂಘೆ ಇವರು, ಭಾರತ, ಇಂಡೋನೇಶಿಯಾ, ಇರಾನ ಮತ್ತು ಸೌದಿ ಅರೇಬಿಯಾ ಈ ದೇಶಗಳು ಹಿಂದೂ ಮಹಾಸಾಗರ ಕ್ಷೇತ್ರದ ಅಭಿವೃದ್ಧಿಯಲ್ಲಿ ದೊಡ್ಡ ಪಾಲಿದೆ.

ರಾಷ್ಟ್ರಾಧ್ಯಕ್ಷ ವಿಕ್ರಮಸಿಂಘೆ ಮಾತನಾಡಿ, ಭಾರತ ಮತ್ತು ಶ್ರೀಲಂಕಾ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುವುದು ಅಗತ್ಯವಾಗಿದೆ. ಶ್ರೀಲಂಕಾ ಮತ್ತು ಭಾರತದ ನಡುವೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿವೆ. ಐತಿಹಾಸಿಕ ಗುರುತುಗಳು ಮೊಹೆಂಜೋದಾರೋ ಸಂಸ್ಕೃತಿ ಇರುವಾಗಲೂ ಭಾರತದಿಂದ ಶ್ರೀಲಂಕೆಗೆ ದೋಣಿಗಳು ಸಾಗುತ್ತಿದ್ದವು. ಶ್ರೀಲಂಕೆಯ ಅನುರಾಧಾಪುರಾದ ಪ್ರಾಚೀನ ಗ್ರಾಮದಲ್ಲಿ ಉತ್ಖನನದ ಸಮಯದಲ್ಲಿ ಕೆಲವು ಭಾಗದಲ್ಲಿ ದಕ್ಷಿಣ ಭಾರತದ ನಾಣ್ಯಗಳು ಸಿಕ್ಕಿದ್ದವು ಎಂದು ಹೇಳಿದರು.