Censor Board Against Hinduism: ಚಲನಚಿತ್ರದಿಂದ ‘ಜೈ ಶ್ರೀ ರಾಮ’ ತೆಗೆಯುವಂತೆ ಸೆನ್ಸಾರ್ ಬೋರ್ಡ್ ನಿಂದ ಆದೇಶ !

ನಾನು ಸತ್ತರೂ ಚಲನಚಿತ್ರದಿಂದ ‘ಜೈ ಶ್ರೀ ರಾಮ’ ಶಬ್ದ ತೆಗೆಯುವುದಿಲ್ಲ ನಿರ್ಮಾಪಕ ಬೋಕಾಡಿಯಾ ಇವರ ನಿಲುವು

ಮುಂಬಯಿ – ‘ಸೆನ್ಸಾರ್ ಬೋರ್ಡ್’ ನಿರ್ಮಾಪಕ ನಿರ್ದೇಶಕ ಕೆ.ಸಿ. ಬೋಕಾಡಿಯಾ ಇವರು ತಮ್ಮ ಮುಂಬರುವ ‘ತಿಸರಿ ಬೇಗಂ’ ಈ ಹಿಂದಿ ಚಲನಚಿತ್ರದಲ್ಲಿ ‘ಜೈ ಶ್ರೀ ರಾಮ’ ಈ ಪದ ತೆಗೆಯುವಂತೆ ಹೇಳಿದೆ. ಬೋಕಾಡಿಯಾ ಇವರು ತಮ್ಮ ‘ತಿಸರಿ ಬೇಗಮ್’ ಈ ಹೊಸ ಚಲನಚಿತ್ರಕ್ಕೆ ಪ್ರಮಾಣ ಪತ್ರ ಪಡೆಯಲು ‘ಸೆನ್ಸಾರ್ ಬೋರ್ಡ್’ನಲ್ಲಿ ಅರ್ಜಿ ಸಲ್ಲಿಸಿದ್ದರು. ಚಲನಚಿತ್ರ ನೋಡಿದ ನಂತರ ‘ಸೆನ್ಸಾರ್ ಬೋರ್ಡ’ನ ಪರೀಕ್ಷಕ ಸಮಿತಿಯು ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ; ‘ಈ ಚಲನಚಿತ್ರದಲ್ಲಿ ಪ್ರಚಲಿತ ಇರುವ ಸಾಮಾನ್ಯ ಘಟನೆಯು ಒಂದು ಪರಂಪರೆ ಎಂದು ತೋರಿಸಲಾಗಿದ್ದು ಆದ್ದರಿಂದ ಒಂದು ವಿಶಿಷ್ಟ ಜನಾಂಗದ ವಿರುದ್ಧ ವೈಮನಸ್ಸು ನಿರ್ಮಾಣವಾಗುತ್ತದೆ’, ಎಂದು ‘ಸೆನ್ಸಾರ್ ಬೋರ್ಡ್’ ಹೇಳಿದೆ. ‘ಸೆನ್ಸಾರ್ ಬೋರ್ಡ’ನಿಂದ ಬೊಕಾಡಿಯಾ ಇವರಿಗೆ ಚಲನಚಿತ್ರ ‘ರಿವಿಜನ್ ಕಮಿಟಿ’ಯ ಕಡೆಗೆ ಕಳುಹಿಸಲು ೧೪ ದಿನದ ಕಾಲಾವಕಾಶ ನೀಡಿದೆ. ಬಳಿಕ ಬೊಕಾಡಿಯಾ ಇವರು ಚಲನಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರಕ್ಕಾಗಿ ಪುನಃ ಅರ್ಜಿ ಸಲ್ಲಿಸಿದರು. ನಂತರ ‘ಸೆನ್ಸಾರ್ ಬೋರ್ಡ್’ನಿಂದ ಕೆ.ಸಿ. ಬೋಕಾಡಿಯಾ ಇವರಿಗೆ ಪತ್ರ ಕಳುಹಿಸಿ ‘ತಿಸರಿ ಬೇಗಂ’ ಈ ಚಲನಚಿತ್ರ ‘ಕೇವಲ ಪ್ರೌಢರಿಗಾಗಿ’ ಈ ಪ್ರಮಾಣಪತ್ರ ಸಹಿತ ಪ್ರದರ್ಶನ ಗೊಳಿಸುವ ‘ರಿವಿಜನ್ ಕಮಿಟಿ’ಯಿಂದ ದೊರೆತಿರುವ ಶಿಫಾರಸಿನ ಸಂದರ್ಭ ನೀಡಿ ಚಲನಚಿತ್ರದಲ್ಲಿ ೧೪ ಕಡೆಗಳಲ್ಲಿ ಬದಲಾವಣೆ ಮಾಡಲು ಹೇಳಿದೆ. ಇದರಲ್ಲಿನ ಒಂದು ದೃಶ್ಯದಲ್ಲಿ ‘ಜೈ ಶ್ರೀ ರಾಮ್’ ಈ ಪದ ತೆಗೆಯುವಂತೆ ಹೇಳಿದೆ.

ಬೋಕಾಡಿಯಾ ಇವರಿಂದ ಸುಂದರ ಕಾಂಡದ ಉಲ್ಲೇಖ !

ಬೋಕಾಡಿಯಾ ಇವರು ೧೪ ಅಂಶಗಳಲ್ಲಿನ ‘ಜೈ ಶ್ರೀ ರಾಮ್’ ತೆಗೆದು ಹಾಕುವ ಅಂಶಗಳ ಬಗ್ಗೆ ಎಲ್ಲಕ್ಕಿಂತ ಹೆಚ್ಚು ಆಕ್ಷೇಪ ಇರುವುದಾಗಿ ಹೇಳಿದ್ದಾರೆ. ಶ್ರೀರಾಮ ಇದು ನಮ್ಮ ಶ್ರದ್ಧಾ ಕೇಂದ್ರವಾಗಿದೆ. ಯಾವಾಗ ದಾಳಿಕೋರರು ಓರ್ವ ವ್ಯಕ್ತಿಯನ್ನು ಕೊಲ್ಲುವ ಉದ್ದೇಶದಿಂದ ಅವನ ಮೇಲೆ ದಾಳಿ ಮಾಡುತ್ತಿದ್ದಾನೆ, ಆಗ ಆ ವ್ಯಕ್ತಿ ‘ಜೈ ಶ್ರೀ ರಾಮ’ನ ಆಶ್ರಯ ಪಡೆಯುವುದು ಇದು ಅಯೋಗ್ಯ ಎನ್ನಲು ಸಾಧ್ಯವಿಲ್ಲ.

‘ಶ್ರೀರಾಮಚರಿತ ಮಾನಸ’ದ ಸುಂದರಕಾಂಡದಲ್ಲಿ ವಿಭೀಷಣನು ಆಶ್ರಯಕ್ಕೆ ಬಂದಾಗ ಭಗವಾನ್ ಶ್ರೀ ರಾಮನು ಹೇಳಿದ್ದ ಒಂದು ಶ್ಲೋಕದ ಉದಾಹರಣೆ ನೀಡುತ್ತಾ ಬೋಕಾಡಿಯ ಇವರು, ‘ಒಬ್ಬ ದಾಳಿಕೋರ ಒಬ್ಬ ವ್ಯಕ್ತಿಯ ಜೀವ ತೆಗೆಯುವ ಉದ್ದೇಶದಿಂದ ಬಂದಿದ್ದರೆ ಮತ್ತು ಆ ಸಮಯದಲ್ಲಿ ಶರಣಾಗಿರುವ ವ್ಯಕ್ತಿ ಪ್ರಭು ಶ್ರೀ ರಾಮನ ನಾಮಸ್ಮರಣೆ ಮಾಡುತ್ತಿದ್ದರೇ ಆಗ ಬಹುಷಃ ಯಾರಾದರೂ ಅವನನ್ನು ‘ಜೈ ಶ್ರೀ ರಾಮ’ ಹೇಳಲು ತಡೆಯುವನು. ‘ತಿಸರಿ ಬೇಗಮ್’ ಚಲನಚಿತ್ರದಲ್ಲಿನ ಸಂಬಂಧಪಟ್ಟ ದೃಶ್ಯಗಳ ಕೂಡ ಹಾಗೆ ಇದೆ ಅದರಲ್ಲಿ ಓರ್ವ ಮನುಷ್ಯ ತನ್ನ ಗುರುತು ಮರೆಮಾಚಿ ಮೂರನೆಯ ವಿವಾಹವಾಗುತ್ತಾನೆ ಮತ್ತು ನಂತರ ಅವನು ತಪ್ಪು ಒಪ್ಪಿಕೊಂಡು ತನ್ನ ಜೀವ ಕಾಪಾಡಿಕೊಳ್ಳಲು ಭಗವಾನ್ ಶ್ರೀ ರಾಮನಿಗೆ ಕರೆಯುತ್ತಾನೆ. ಕೆ.ಸಿ. ಬೋಕಾಡಿಯಾ ಇವರು ‘ಸೆನ್ಸಾರ್ ಬೋರ್ಡ್’ ಸೂಚಿಸಿರುವ ಬದಲಾವಣೆ ಸ್ವೀಕರಿಸಲು ನಿರಾಕರಿಸಿದ್ದು ‘ಸೆನ್ಸಾರ್ ಬೋರ್ಡಿ’ನ ಅಧ್ಯಕ್ಷ ಪ್ರಸೂನ್ ಜೋಶಿ ಇವರ ಬಳಿ ಕೂಡ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ‘ನಾನು ಸತ್ತರೂ ಕೂಡ ಚಲನಚಿತ್ರದಿಂದ ‘ಜೈ ಶ್ರೀ ರಾಮ’ ಈ ಪದ ತೆಗೆಯುವುದಿಲ್ಲ’, ಎಂದು ಹೇಳಿದ್ದಾರೆ. ‘ಸೆನ್ಸಾರ್ ಬೋರ್ಡ್’ ನನ್ನ ಚಲನಚಿತ್ರ ಪ್ರದರ್ಶಿತವಾಗಲು ಬಿಡದಿದ್ದರೇ ಅವರ ವಿರುದ್ಧ ನಾನು ಉಚ್ಚ ನ್ಯಾಯಾಲಯಕ್ಕೆ ಹೋಗುತ್ತೆನೆ’, ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.