ಬೆಂಗಳೂರು : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ೮೧ ವರ್ಷದ ಹಿರಿಯ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ . 17 ವರ್ಷದ ಬಾಲಕಿಯ ತಾಯಿ ಯಡಿಯೂರಪ್ಪ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ ನಂತರ ಈ ಪ್ರಕರಣವನ್ನು ದಾಖಲಿಸಲಾಗಿದೆ . ಮೂಲಗಳ ಪ್ರಕಾರ , ಆಪಾದಿತ ಲೈಂಗಿಕ ದೌರ್ಜನ್ಯವು ಫೆಬ್ರವರಿ 2,2024 ರಂದು ನಡೆದಿತ್ತು.
ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥೆ ! – ಗೃಹಸಚಿವ ಡಾ. ಜಿ. ಪರಮೇಶ್ವರ
Former Karnataka CM, #BSYediyurappa booked under #POCSO
Karnataka Home Minister G Parameshwara reacts, says investigation will be made; says there are reports about the complainant (the mother of the minor girl) is mentally unstable.pic.twitter.com/q55v3Ad113
— Sanatan Prabhat (@SanatanPrabhat) March 15, 2024
ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು, ತನಿಖೆಯ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಇದೊಂದು ಸೂಕ್ಷ್ಮ ವಿಚಾರ. ಇದು ಹಿರಿಯ ರಾಜಕಾರಣಿಯಾಗಿರುವ ಮಾಜಿ ಸಿಎಂಗೆ ಸಂಬಂಧಿಸಿದ್ದು. ಪೊಲೀಸರು ದೂರು ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ, ತನಿಖೆ ಪೂರ್ಣಗೊಳ್ಳುವವರೆಗೆ, ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ ಎಂದರು. ಮಹಿಳೆ ಮತ್ತು ಅವರ ಮಗಳಿಗೆ ಪೊಲೀಸರು ರಕ್ಷಣೆ ನೀಡುತ್ತಾರೆಯೇ ಎಂದು ಕೇಳಿದಾಗ, ಗೃಹ ಸಚಿವರು ಈಗ ಅದು ಅಗತ್ಯವಿಲ್ಲ ಎಂದು ಹೇಳಿದರು. ಅಗತ್ಯವಿದ್ದರೆ, ಪೊಲೀಸರು ಮಹಿಳೆಗೆ ರಕ್ಷಣೆ ನೀಡುತ್ತಾರೆ, ಕೇಸು ದಾಖಲು ಹಿಂದೆ ಯಾವುದೇ ರಾಜಕೀಯ ಪ್ರೇರಣೆ ಕೃತ್ಯಗಳಿಲ್ಲ ಎಂದರು.