ಯುರೋಪವು ರಷ್ಯಾಗೆ ಉತ್ತರ ನೀಡಲು ಸಿದ್ದರಿರಬೇಕು ! – ಫ್ರಾನ್ಸಿನ ರಾಷ್ಟ್ರಾಧ್ಯಕ್ಷ ಇಮಾನ್ಯುಯಲ್ ಮೈಕ್ರಾನ್

ಫ್ರಾನ್ಸಿನ ರಾಷ್ಟ್ರಾಧ್ಯಕ್ಷ ಇಮಾನ್ಯುಯಲ್ ಮೈಕ್ರಾನ್ ಇವರ ಕರೆ !

ಫ್ರಾನ್ಸ್ (ರಷ್ಯಾ ) – ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ಯುರೋಪಿನ ಶತ್ರು ಆಗಿದ್ದಾರೆ. ಉಕ್ರೇನಿನ ಮೇಲೆ ವಿಜಯ ಸಾಧಿಸಿದ ನಂತರ ಕೂಡ ಅದು ನಿಲ್ಲುವುದಿಲ್ಲ. ಆದ್ದರಿಂದ ಯುರೋಪಿನ ಜನರು ಧೈರ್ಯಗೆಡದೆ ರಷ್ಯಾಗೆ ಪ್ರತ್ಯುತ್ತರ ನೀಡಲು ಸಿದ್ಧವಾಗಬೇಕು, ಎಂದು ಫ್ರಾನ್ಸಿನ ರಾಷ್ಟ್ರಾಧ್ಯಕ್ಷ ಇಮಾನ್ಯುಯಲ್ ಮೈಕ್ರಾನ್ ಕರೆ ನೀಡಿದರು. ಒಂದು ಸ್ಥಳೀಯ ವಾರ್ತಾವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮೈಕ್ರಾನ್ ಮಾತನಾಡಿ, ‘ರಷ್ಯಾ ಉಕ್ರೇನ ಜೊತೆಗೆ ಯುದ್ಧ ಗೆದ್ದರೆ , ಆಗ ಯುರೋಪಿನ ವಿಶ್ವಾಸಾರ್ಹತೆ ಶೂನ್ಯಕ್ಕೆ ಇಳಿಯುವುದು’ ಎಂದು ಹೇಳಿದ್ದಾರೆ. ಮೈಕ್ರಾನ್ ಹೇಳಿಕೆಯನ್ನು ಫ್ರಾನ್ಸ್ ನ ವಿರೋಧಿ ಪಕ್ಷದ ನಾಯಕರು ಟೀಕಿಸಿದ್ದು, ಮೈಕ್ರಾನ್ ಯುದ್ಧದ ಭಾಷೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿರೋಧಿಗಳ ಟೀಕೆಗೆ ಹೀಗೆ ಉತ್ತರ ನೀಡಿದ ಮೈಕ್ರಾನ್,

೧. ನಾನು ವಿರೋಧಿಗಳ ಅಭಿಪ್ರಾಯಕ್ಕೆ ಸಮ್ಮತವಿಲ್ಲ. ಇಂದು ನಾವು ಉಕ್ರೇನಿಗೆ ಬೆಂಬಲ ನೀಡುವುದರಿಂದ ದೂರ ಉಳಿದು ಅಥವಾ ಉಕ್ರೇನಿಗೆ ಸಹಾಯ ಒದಗಿಸುವ ವಿರುದ್ಧ ಮತದಾನ ಮಾಡುವಂತಹ ನಿರ್ಣಯ ತೆಗೆದುಕೊಂಡು ನಾವು ಶಾಂತಿಯ ಆಯ್ಕೆ ಮಾಡದೆ ಸೋಲನ್ನು ಆಯ್ಕೆ ಮಾಡಿದ್ದೇವೆ. ಯುರೋಪದಲ್ಲಿ ಏನಾದರೂ ಯುದ್ಧದ ಕಿಡಿ ಹತ್ತಿದರೆ ಅದಕ್ಕೆ ರಷ್ಯಾ ಜವಾಬ್ದಾರಿ ಆಗುವುದು.

೨. ಇಂದು ನಾವು ಹಿಂದೆ ಸರಿಯುವ ಅಥವಾ ಹೆದರಿ ಕುಳಿತುಕೊಳ್ಳುವ ನಿರ್ಣಯ ತೆಗೆದುಕೊಂಡರೆ, ನಾವು ಈಗಲೇ ಸೋಲನ್ನು ಒಪ್ಪಿಕೊಂಡಂತೆ ಎಂದು ನಾನು ನಂಬುತ್ತೇನೆ ಮತ್ತು ನನಗೆ ಅದು ಸ್ವೀಕಾರವಿಲ್ಲ. ರಷ್ಯಾ ಈ ಯುದ್ಧವನ್ನು ತಕ್ಷಣ ನಿಲ್ಲಬೇಕು ಮತ್ತು ಶಾಂತಿ ಸ್ಥಾಪಿಸಲು ಸಹಕಾರ ನೀಡಬೇಕೆಂದು ನನಗೆ ಅನಿಸುತ್ತದೆ.

೩. ಫ್ರಾನ್ಸ್ ರಷ್ಯಾ ವಿರುದ್ಧ ಯಾವಾಗಲೂ ಯುದ್ಧಕ್ಕೆ ಹೋಗುವುದಿಲ್ಲ. ಇದಕ್ಕೆ ವಿರುದ್ಧವಾಗಿ , ರಷ್ಯಾ ಫ್ರೆಂಚ್ ಹಿತಾಸಕ್ತಿಗಳ ಮೇಲೆ ಆಕ್ರಮಣ ಮಾಡಿದರೂ ನಾವು ರಷ್ಯಾದ ವಿರುದ್ಧ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿಲ್ಲ.

೪. ಉಕ್ರೇನ್ ಇಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಸ್ನೇಹಪರ ರಾಷ್ಟ್ರಗಳ ಸಹಾಯದ ಅಗತ್ಯವಿದೆ . ಶಾಂತಿ ಎಂದರೆ ಉಕ್ರೇನ್ ಶರಣಾಗಬೇಕು ಎಂದರ್ಥವಲ್ಲ. ಶಾಂತಿ ಗತ್ಯವಾಗಿದ್ದು ಹಾಗಂತ ಸೋಲನ್ನು ಒಪ್ಪಿಕೊಳ್ಳುವುದು ಕೂಡ ಸರಿಯಲ್ಲ. ಶಾಂತಿ ಬೇಕೆಂದರೆ, ಉಕ್ರೇನ್ ಅನ್ನು ನಾವು ಗಾಳಿಗೆ ಬಿಡಲು ಸಾಧ್ಯವಿಲ್ಲ.