Backlash on CAA Implementation : ‘ಸಿಎಎ ಕಾನೂನು ಶ್ರದ್ಧೆಯ ಆಧಾರದಲ್ಲಿ ಜನರಲ್ಲಿ ತಾರತಮ್ಯ ಮಾಡುತ್ತದೆಯಂತೆ !’ 

ಕಿಡಿಕಾರಿದ ಪಾಕಿಸ್ತಾನ !

ಮುಮತಾಜ ಝಹರಾ ಬಲೋಚ

ಇಸ್ಲಾಮಾಬಾದ (ಪಾಕಿಸ್ತಾನ) – ಪೌರತ್ವ ತಿದ್ದುಪಡಿ ಕಾಯ್ದೆಯ (‘ಸಿಎಎ’) ಕಾರ್ಯಾಚರಣೆಯು ಹಿಂದೂ ಸರ್ವಾಧಿಕಾರಿ ದೇಶದ ತಾರತಮ್ಯವನ್ನುಂಟು ಮಾಡುವ ಹೆಜ್ಜೆಯಾಗಿದೆ. ಈ ಕಾನೂನು ಶ್ರದ್ಧೆಯ ಆಧಾರದಲ್ಲಿ ಜನರಲ್ಲಿ ತಾರತಮ್ಯ ಮಾಡುತ್ತದೆ. `ಮುಸ್ಲಿಂ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವಾಗುತ್ತಿದೆ ಮತ್ತು ಭಾರತ ಈ ಅಲ್ಪಸಂಖ್ಯಾತರಿಗೆ ಸುರಕ್ಷಿತ ದೇಶವಾಗಿದೆ’, ಎಂಬ ಭ್ರಮೆಯ ಆಧಾರದಲ್ಲಿ ಈ ಕಾನೂನು ಇದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮತಾಜ ಝಹರಾ ಬಲೋಚ ಇವರು ಟೀಕೆ ಮಾಡಿದ್ದಾರೆ. (ಇದು ಭ್ರಮೆ ಅಲ್ಲ, ವಸ್ತುಸ್ಥಿತಿಯಾಗಿದೆ ! ಇತರ ಧರ್ಮಗಳ ವಿರುದ್ಧ ಯಾವುದೇ ದೌರ್ಜನ್ಯಗಳು ನಡೆಯುತ್ತಿಲ್ಲ ಎಂದು ಜಗತ್ತಿನಲ್ಲಿ ಒಂದೇ ಒಂದು ಇಸ್ಲಾಮಿಕ್ ದೇಶವಾದರೂ ಇದೆಯೇ ? ಇದಕ್ಕೆ ವಿರುದ್ಧವಾಗಿ, ಇಸ್ಲಾಮಿಕ್ ದೇಶಗಳಲ್ಲಿ ಮುಸ್ಲಿಮರ ಮೇಲೆಯೂ ದೌರ್ಜನ್ಯಗಳು ನಡೆಯುತ್ತವೆ, ಇದು ಸಿರಿಯಾ, ಇರಾನ, ಇರಾಕ, ಅಫ್ಘಾನಿಸ್ತಾನ ಇತ್ಯಾದಿ ದೇಶಗಳ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು) 

‘ನಾವು ಪೌರತ್ವ ತಿದ್ದುಪಡಿ ಕಾಯ್ದೆಯ ಅಧಿಸೂಚನೆಯ ಬಗ್ಗೆ ಆತಂಕ ಇದೆ (ಅಂತೆ) !’ – ಅಮೇರಿಕಾ

ಅಮೇರಿಕಾವು ಭಾರತದ ಕಾನೂನು ವಿಷಯದಲ್ಲಿ ಮತ್ತು ಅದರ ಜಾರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೊಟ್ಟು ತೋರಿಸಬಾರದು ! ಅದು ತನ್ನ ದೇಶದಲ್ಲಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು, ಎಂದು ಭಾರತ ಕಿವಿ ಹಿಂಡಬೇಕು !

ಅಮೇರಿಕಾ ಸರಕಾರದ ‘ಯು.ಎಸ್. ಸ್ಟೇಟ’ ವಿಭಾಗದ ವಕ್ತಾರ ಮ್ಯಾಥ್ಯೂ ಮಿಲ್ಲರ ಇವರು ಮಾತನಾಡಿ, ಭಾರತದ ಮಾರ್ಚ್ 11 ರ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆಯ ಬಗ್ಗೆ ನಾವು ಆತಂಕರಾಗಿದ್ದೇವೆ. ಈ ಕಾನೂನನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ ? ಎನ್ನುವುದರ ಮೇಲೆ ನಾವು ಸೂಕ್ಷ್ಮವಾಗಿ ನಿಗಾ ವಹಿಸಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಕಾನೂನಿನ ಪ್ರಕಾರ ಎಲ್ಲಾ ಸಮುದಾಯಗಳಿಗೆ ಸಮಾನವಾದ ಗೌರವವನ್ನು ನೀಡುವುದು ಪ್ರಜಾಪ್ರಭುತ್ವದ ತತ್ವಗಳಾಗಿವೆ. (‘ಹಲವು ಶತಮಾನಗಳಿಂದ, ಕಪ್ಪು ಜನರು ಮತ್ತು ರೆಡ್ ಇಂಡಿಯನ್ ಜನರ ಮೇಲೆ ದೌರ್ಜನ್ಯ ಎಸಗುವ ಅಮೇರಿಕಾ ಈಗ ಭಾರತಕ್ಕೆ ಪ್ರಜಾಪ್ರಭುತ್ವದ ಜ್ಞಾನವನ್ನು ನೀಡಬಾರದು.’ ಎನ್ನುವ ಶಬ್ದಗಳಲ್ಲಿ ಭಾರತವು ಅಮೇರಿಕಾಗೆ ಕಿವಿ ಹಿಂಡಬೇಕು – ಸಂಪಾದಕರು)

ಅಮೇರಿಕ ಭಾರತದ ಆಂತರಿಕ ಕಾನೂನುಗಳ ಹಿಂದೆ ಬರಬಾರದು ! – ಭಾರತದಿಂದ ಛೀಮಾರಿ

ರಣಧೀರ್ ಜೈಸ್ವಾಲ್

ನವದೆಹಲಿ – ಸಿಎಎ ಕಾಯಿದೆಯು ಭಾರತದ ಆಂತರಿಕ ವಿಷಯವಾಗಿದೆ ಮತ್ತು ಅದರ ಅನುಷ್ಠಾನದ ಕುರಿತು ಅಮೇರಿಕಾದ ಹೇಳಿಕೆಯು ತಪ್ಪು ಮತ್ತು ಅನಗತ್ಯವಾಗಿದೆ. ಈ ಕಾಯಿದೆಯ ಮೂಲಕ ಡಿಸೆಂಬರ್ 31, 2014 ಕ್ಕಿಂತ ಮೊದಲು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡಲಾಗುತ್ತದೆ. ಇದರಿಂದ ಯಾರೂ ಭಾರತದ ಪೌರತ್ವದಿಂದ ವಂಚಿತರಾಗುವುದಿಲ್ಲ. ಭಾರತೀಯ ಸಂವಿಧಾನವು ಎಲ್ಲಾ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಅಲ್ಪಸಂಖ್ಯಾತರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಭಾರತದ ಸಂಪ್ರದಾಯ ಮತ್ತು ವಿಭಜನೆಯ ನಂತರದ ಇತಿಹಾಸದ ಬಗ್ಗೆ ಅರಿವಿಲ್ಲದವರು ಈ ಪ್ರಕರಣದಲ್ಲಿ ತಲೆ ಹಾಕಲು ಪ್ರಯತ್ನಿಸಬಾರದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅಮೇರಿಕಾಗೆ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಭಾರತದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸಲು ಪಾಕಿಸ್ತಾನಕ್ಕೆ ಹಕ್ಕಿಲ್ಲ ಎಂದು ಭಾರತವು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಹೇಳಬೇಕು !
  • ಕಳ್ಳನಿಗೊಂದು ಪಿಳ್ಳೆ ನೆವ ಎಂದು ಇದಕ್ಕೆ ಹೇಳೋದು ! ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿರುವುದರಿಂದ ಈ ಜನರು ಭಾರತದಲ್ಲಿ ಕಳೆದ ಅನೇಕ ದಶಕಗಳಿಂದ ಆಶ್ರಯ ಪಡೆಯುತ್ತಿದ್ದಾರೆ. ಈಗ ಅವರಿಗೆ ಭಾರತ ಪೌರತ್ವವನ್ನು ನೀಡುತ್ತಿರುವುದರಿಂದ ಪಾಕಿಸ್ತಾನ ಕೆಂಡಾಮಂಡಲವಾಗಿದೆ.
  • ತನ್ನ ದೇಶದಲ್ಲಿ ಅವರ ಮೇಲಾಗಿರುವ ಮತ್ತು ಈಗಲೂ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತ್ರ ಪಾಕಿಸ್ತಾನ ಸ್ಮಶಾನ ಮೌನವಿದೆ !