Bangladeshi Robber Injured : ದೆಹಲಿಯಲ್ಲಿ ಪೊಲೀಸರೊಂದಿಗೆ ನಡೆದ ಚಿಕಮಕಿಯಲ್ಲಿ ಬಾಂಗ್ಲಾದೇಶಿ ದರೋಡೆಕೋರ ಗಾಯ !

ಬಂದುಕಿನ ಭಯ ತೋರಿಸಿ 3 ಕೋಟಿ ರೂಪಾಯಿ ಲೂಟಿ ಗೈದಿದ್ದ

ಸಾಂದರ್ಭಿಕ ಛಾಯಾಚಿತ್ರ

ನವ ದೆಹಲಿ – ಬಾಂಗ್ಲಾದೇಶದ ಡಾಕು ಮೆಹರಾಜ ದೆಹಲಿ ಇವನು ಪೊಲೀಸರ ಜೊತೆಗೆ ನಡೆದಿರುವ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ. ದೆಹಲಿ ಪೋಲಿಸರು ಅವನನ್ನು ಬಂಧಿಸಿದ್ದಾರೆ. ಈ ಬಾಂಗ್ಲಾದೇಶಿ ದರೋಡೆಕೋರ ಅನೇಕ ಅಪರಾಧದಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕಳೆದ ವರ್ಷ ಅವನು ದೆಹಲಿಯಲ್ಲಿ ದೊಡ್ಡ ದರೊಡೆ ನಡೆಸಿದ್ದನು. ಅವನ ಜೊತೆಗೆ ಇನ್ನೂರ್ವ ಅಪರಾಧಿ ಶಾಯಿದ ನನ್ನು ಕೂಡ ಬಂಧಿಸಿದ್ದಾರೆ.

ಮಾರ್ಚ್ ೧೫, ೨೦೨೪ ರಂದು ಧೂಲಸಿರಸ್ ಪ್ರದೇಶದಲ್ಲಿ ದರೋಡೆಕೋರ ಮತ್ತು ದೆಹಲಿ ಪೊಲೀಸರ ನಡುವೆ ಚಿಕಮಕಿ ನಡೆಯಿತು. ಈ ದರೊಡೇಕಾರರನ್ನು ಹಿಡಿಯುವುದಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಪೊಲೀಸರನ್ನು ನೋಡುತ್ತಲೇ ಅವನು ಗುಂಡಿನ ದಾಳಿ ನಡೆಸಿದನು. ಅದಕ್ಕೆ ಪ್ರತ್ಯುತ್ತರ ಎಂದು ಪೊಲೀಸರು ಕೂಡ ಗುಂಡಿನ ದಾಳಿ ನಡೆಸಿದರು. ಪೊಲೀಸರು ನಡೆಸಿರುವ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶಿ ಅಪರಾಧಿ ಮೇಹರಾಜ ಅಲಿಯಾಸ್ ಮೇರಾಜನ ಕಾಲಿಗೆ ಗುಂಡು ತಾಗಿತು ಎಂದು ಪೊಲೀಸರು ಹೇಳಿದರು. ಮೆರಾಜನು ಹಾರಿಸಿದ್ದ ಗುಂಡು ಪೊಲೀಸ ನಿರೀಕ್ಷಕ ಅಕ್ಷಯ ಇವರಿಗೆ ತಾಕಿದೆ ಎಂದು ಪೊಲೀಸರು ಹೇಳಿದರು. ಮೇಹರಾಜ್ ಇವನು ಬಾಂಗ್ಲಾದೇಶಿ ನಿವಾಸಿಯಾಗಿದ್ದು ಅವನ ವಿರುದ್ಧ ೫ ಅಪರಾಧಗಳು ದಾಖಲಾಗಿವೆ. ಕಳೆದ ವರ್ಷ ಅವನು ದೆಹಲಿಯಲ್ಲಿನ ಅಶೋಕ ವಿಹಾರದಲ್ಲಿ ಓರ್ವ ವ್ಯಾಪಾರಿಯ ಮನೆಯಲ್ಲಿ ದರೋಡೆ ನಡೆಸಿದ್ದನು. ಬಂದುಕಿನ ಭಯ ತೋರಿಸಿ ಮೂರು ಕೋಟಿ ರೂಪಾಯಿ ಲೂಟಿ ಮಾಡಿದ್ದನು. ಪೊಲೀಸರು ಅವನ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಅವನ ಮೇಲೆ ಎರಡು ಲಕ್ಷ ಬಹುಮಾನ ಘೋಷಿಸಿತ್ತು.

ಸಂಪಾದಕೀಯ ನಿಲುವು

‘ಸಿ.ಎ.ಎ ಕಾಯ್ದೆ ಜಾರಿ ಆಗಿದ್ದರಿಂದ ಈಗ ಪಾಕಿಸ್ತಾನದಲ್ಲಿನ ಹಿಂದೂ ಭಾರತಕ್ಕೆ ಬರುವರು ಮತ್ತು ಅದರಿಂದ ಭಾರತದಲ್ಲಿ ಕಳ್ಳತನ ನಡೆಯುವುದು, ಗಲಭೆ ಆಗುವುದು, ನಿರುದ್ಯೋಗ ಹೆಚ್ಚುವುದು’, ಎಂದು ಆರೋಪಿಸುವ ದೆಹಲಿಯ ಹಿಂದೂದ್ವೇಷಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ಈಗ ಬಾಂಗ್ಲಾದೇಶದ ನುಸುಳುಕೋರರ ಬಗ್ಗೆ ಮತ್ತು ಈ ಗಂಭೀರ ಕೃತ್ಯದ ಬಗ್ಗೆ ಚಕಾರ ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !