|
(ಜೆಎನ್‌ಯು ಎಂದರೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ)
ನವ ದೆಹಲಿ – ನಿರ್ಮಾಪಕ ವಿಪುಲ ಅಮೃತಲಾಲ ಶಾ ಮತ್ತು ನಟಿ ಅದಾ ಶರ್ಮಾ ಅವರ ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರಕ್ಕೆ ದೇಶದಲ್ಲಿ ಭಾರಿ ಪ್ರತಿಕ್ರಿಯೆ ಸಿಕ್ಕಿತ್ತು. ಇದಾದ ಬಳಿಕ ನಕ್ಸಲವಾದಿಗಳ ಕುರಿತಾದ ಇವರು ನಿರ್ಮಿಸಿದ ‘ಬಸ್ತರ್ ದಿ ನಕ್ಸಲ್ ಸ್ಟೋರಿ’ ಹೆಸರಿನ ಚಲನಚಿತ್ರ ಮಾರ್ಚ 15 ರಂದು ಪ್ರದರ್ಶಿತಗೊಳ್ಳಲಿದೆ. ಚಲನಚಿತ್ರದ ಪ್ರದರ್ಶನಕ್ಕೂ ಮುನ್ನ ಜವಾಹರಲಾಲ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿಶೇಷ ಪ್ರಯೋಗವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸುದೀಪ್ತೊ ಸೇನ ಮಾತನಾಡಿ, ಬೆರಳೆಣಿಕೆಯಷ್ಟಿರುವ ಕಮ್ಯುನಿಸ್ಟರಿಂದ ಜೆ.ಎನ್.ಯು.ನಲ್ಲಿರುವ ಬುದ್ಧಿವಂತ ವಿದ್ಯಾರ್ಥಿಗಳಿಗೆ ಅಪಖ್ಯಾತಿಯಾಗುತ್ತಿದೆ. ಕೇವಲ ಜೆ.ಎನ್.ಯು.ನ ಬುದ್ಧಿವಂತ ವಿದ್ಯಾರ್ಥಿಗಳು ಮಾತ್ರ ಅವರನ್ನು ಸೋಲಿಸಬಹುದು ಮತ್ತು ಬುದ್ಧಿವಂತ ವಿದ್ಯಾರ್ಥಿಗಳ ಉತ್ತಮ ಕಾರ್ಯಗಳಿಂದ ಜೆಎನ್‌ಯು ಗೌರವವನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ. ಈಗ ಜೆಎನ್‌ಯು ಉದಯೋನ್ಮುಖ ರಾಷ್ಟ್ರೀಯವಾದಿಗಳನ್ನು ಮತ್ತು ರಾಷ್ಟ್ರ ನಿರ್ಮಾಣವನ್ನು ನೀಡಿದೆ. ಅವರು ಈಗ ದೇಶವನ್ನು ಮಹಾನ್ ಶಕ್ತಿ ಆಗಿ ಸಿದ್ಧಗೊಳಿಸುತ್ತಿದೆ.
ಸ್ಟುಡೆಂಟ್ಸ ಫೆಡರೇಶನ ಆಫ್ ಇಂಡಿಯಾದ (ಎಸ್.ಎಫ್.ಐ’ನ) ವಿದ್ಯಾರ್ಥಿಗಳು ಜೆ.ಎನ್.ಯು.ನಲ್ಲಿ ಚಲನಚಿತ್ರ ಪ್ರದರ್ಶನವನ್ನು ವಿರೋಧಿಸಿದರು. ಎಡಪಂಥೀಯ ವಿದ್ಯಾರ್ಥಿ ಗುಂಪಿನ ವಿದ್ಯಾರ್ಥಿಗಳು ಗದ್ದಲ ಎಬ್ಬಿಸಿದರು. ‘ಎಸ್.ಎಫ್.ಐ.’ನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಲನಚಿತ್ರ ಪ್ರದರ್ಶನಕ್ಕೆ ವಿರೋಧಿಸಿದರು. ಆಂದೋಲನಕಾರರು ಕಾರ್ಯಕ್ರಮಸ್ಥಳಕ್ಕೆ ಪ್ರವೇಶವನ್ನು ತಡೆದರು. ಒಟ್ಟಾರೆ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲು ‘ಎಸ್‌ಎಫ್‌ಐ’ ವಿದ್ಯಾರ್ಥಿಗಳು ಎರಡು ಸಲ ಸಭಾಂಗಣದ ದೀಪಗಳನ್ನು ಒಡೆದರು.
#SudiptoSen the #Director of the movie #bastarthenaxalstoryfilm appeals to the students of #JNU !
‘JNU’ is currently being slandered by a handful of communists, hence intellectual students can certainly defeat them!
The Students Federation of India, a #Communist organisation… pic.twitter.com/sOB8BnNWWv
— Sanatan Prabhat (@SanatanPrabhat) March 13, 2024
ಸಂಪಾದಕೀಯ ನಿಲುವುಹಿಂಸಾತ್ಮಕ ಕಮ್ಯುನಿಸ್ಟ್ ಸಂಘಟನೆಗಳು, ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಮೇಲೆ ಸಮಾಜವಿರೋಧಿ ಕಾರ್ಯಾಚರಣೆ ಮಾಡಿದ್ದರಿಂದ ನಿಷೇಧವನ್ನು ಹೇರಬೇಕು ಮತ್ತು ಅವರ ನಾಯಕರು, ಕಾರ್ಯಕರ್ತರು ಮತ್ತು ಸದಸ್ಯರನ್ನು ಜೈಲಿಗೆ ಅಟ್ಟಬೇಕು ! |