NZ Demand Evidence: ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ ಇರುವ ಬಗ್ಗೆ ಏನು ಸಾಕ್ಷಿ ? – ನ್ಯೂಜಿಲ್ಯಾಂಡ್‌ನ ಉಪಪ್ರಧಾನಮಂತ್ರಿ ವಿನ್ಸ್ಟನ್ ಪೀಟರ್

ಕೆನಡಾದ ಆರೋಪಕ್ಕೆ ಪ್ರಶ್ನೆಚಿಹ್ನೆ ಎತ್ತಿದ ನ್ಯೂಜಿಲ್ಯಾಂಡ್‌ನ ಉಪಪ್ರಧಾನಮಂತ್ರಿ ವಿನ್ಸ್ಟನ್ ಪೀಟರ್ !

ಕೆನಡಾದ ಪ್ರಧಾನಮಂತ್ರಿ ಜಸ್ಟೀನ ಟ್ರುಡೋ ಮತ್ತು ನ್ಯೂಜಿಲ್ಯಾಂಡ್ ಉಪಪ್ರಧಾನಮಂತ್ರಿ ವಿನ್ಸ್ಟನ್ ಪೀಟರ್

ನವ ದೆಹಲಿ – ಕೆನಡಾದಲ್ಲಿ ಕಳೆದ ವರ್ಷ ಹರದೀಪ ಸಿಂಹ ನಿಜ್ಜರ್ ಈ ಖಲಿಸ್ತಾನಿ ಭಯೋತ್ಪಾದಕನ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟೀನ ಟ್ರುಡೋ ಇವರು ಭಾರತದ ಮೇಲೆ ಆರೋಪಿಸಿದ್ದರು. ಈ ಪ್ರಕರಣದಲ್ಲಿ ನ್ಯೂಜಿಲ್ಯಾಂಡ್ ಉಪಪ್ರಧಾನಮಂತ್ರಿ ವಿನ್ಸ್ಟನ್ ಪೀಟರ್ ಇವರು ನಿಜ್ಜರ ಹತ್ಯೆಯ ಪ್ರಕಾರಣದಲ್ಲಿ ಭಾರತದ ಕೈವಾಡ ಇರುವುದಕ್ಕೆ ಸಾಕ್ಷಿ ಏನು ? ಎಂದು ಪ್ರಶ್ನೆ ಕೇಳಿದರು. ವಿನ್ಸ್ಟನ್ ಪೀಟರ್ ಇವರು ಪ್ರಸ್ತುತ ಭಾರತದ ಪ್ರವಾಸದಲ್ಲಿದ್ದಾರೆ.

ವಿನ್ಸ್ಟನ್ ಪೀಟರ್ ಇವರ ಸಂದರ್ಶನದಲ್ಲಿ ಈ ಕುರಿತು ಪ್ರಶ್ನೆ ಕೇಳಿದಾಗ ಅವರು, ಯಾವ ಸಮಯದಲ್ಲಿ ಈ ಪ್ರಕರಣ ನಡೆದಿದೆ ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನಾವು ಅಧಿಕಾರದಲ್ಲಿ ಇರಲಿಲ್ಲ. ನಾವು ಈಗ ಅಧಿಕಾರಕ್ಕೆ ಬಂದಿದ್ದೇವೆ; ಆದರೆ ನೀವು ವಿರೋಧಿಗಳಾಗಿದ್ದರೂ ನೀವು ಫೈವ್ ಐಜ್ (ಅಮೇರಿಕಾ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಈ ದೇಶಗಳ ಒಂದು ಗುಂಪು) ದೇಶಗಳ ಜೊತೆಗೆ ಕೊಡುಕೊಳ್ಳುವಿಕೆ ಮಾಡಿರುವ ಮಾಹಿತಿ ಕೇಳುತ್ತಿದ್ದೀರಾ; ಆದರೆ ಆ ಮಾಹಿತಿ ಎಷ್ಟು ಉಪಯೋಗಕ್ಕೆ ಬರುತ್ತದೆ ? ಇದರ ಕಲ್ಪನೆ ನಿಮಗೆ ಇರುವುದಿಲ್ಲ. ಅಧಿಕಾರಕ್ಕೆ ಬಂದ ನಂತರ ಓರ್ವ ನ್ಯಾಯವಾದಿ ಎಂದು ನಾನು ಈ ಪ್ರಕರಣದ ಅಭ್ಯಾಸ ಮಾಡಿದೆ, ಆಗ ನನಗೆ ಈ ಪ್ರಕರಣದಲ್ಲಿ ಯಾವುದೇ ಕೂಡ ದೃಢವಾದ ಸಾಕ್ಷಿ ಕಂಡು ಬಂದಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೆನಡಾದ ಪ್ರಧಾನಮಂತ್ರಿ ಟ್ರುಡೋ ಇವರ ಆರೋಪ ಕೇವಲ ಕೆನಡಾದಲ್ಲಿನ ಖಲಿಸ್ತಾನವಾದಿ ಸಿಕ್ಖರ ಮತಗಳು ಪಡೆಯುವುದು ಮತ್ತು ಸರಕಾರಕ್ಕೆ ಸಿಕ್ಖ ಸಂಸದರ ಬೆಂಬಲ ಖಾಯಂಗೊಳಿಸುವುದಾಗಿದೆ ಆದ್ದರಿಂದ ಅವರು ಈ ಪ್ರಶ್ನೆಯ ಉತ್ತರ ಎಂದು ನೀಡುವುದಿಲ್ಲ !