ಅಗ್ನಿ-5 ಕ್ಷಿಪಣಿ ಪರೀಕ್ಷೆಯಲ್ಲಿ ಚೀನಾದ ಹಡಗಿನ ನಿಗಾ ಇತ್ತು !

ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳ ಕಡಲತೀರಗಳಲ್ಲಿ ಚೀನಾ ಹಡಗುಗಳ ನಿಗಾ !

ಬೀಜಿಂಗ್/ನವದೆಹಲಿ – ಭಾರತವು ಸ್ವದೇಶಿ ಅಭಿವೃದ್ಧಿಪಡಿಸಿದ ‘ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್’ ತಂತ್ರಜ್ಞಾನ ‘ಅಗ್ನಿ-5’ ಅನ್ನು ಮಾರ್ಚ್ 11 ರಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಒಡಿಶಾದ ಕರಾವಳಿಯಲ್ಲಿ ನಡೆದ ಈ ಪರೀಕ್ಷೆಯನ್ನು ಚೀನಾದ ಬೇಹುಗಾರಿಕಾ ಹಡಗು ನಿಗಾವಹಿಸಿತ್ತು. ಪರೀಕ್ಷೆಗಾಗಿ ಭಾರತ ಕೆಲವು ದಿನಗಳ ಹಿಂದೆ ಹತ್ತಿರದ ದೇಶಗಳಿಗೆ ಎಚ್ಚರಿಕೆಯನ್ನು ಪ್ರಸಾರ ಮಾಡಿತ್ತು. ಇದನ್ನು ‘ನೋಟಮ್’ ಎಂದು ಕರೆಯಲಾಗುತ್ತದೆ ಅಂದರೆ ‘ನೊಟಿಸ್ ಟು ಎರ್ ಮಿಶನ್ಸ್’ ಎಂದು ಹೇಳುತ್ತಾರೆ.
ಇದು ಭಾರತೀಯ ಕರಾವಳಿಯಿಂದ ಸ್ವಲ್ಪ ದೂರದಲ್ಲಿರುವ ಅಂತರಾಷ್ಟ್ರೀಯ ನೀರಿನಲ್ಲಿ ಸಂಶೋಧನಾ ನೌಕೆಯನ್ನು ನಿಯೋಜಿಸಲು ಬೀಜಿಂಗ್ ಅನ್ನು ಪ್ರೇರೇಪಿಸಿತು. ಇದರ ಹೆಸರು ‘ಜಿಯಾಂಗ್ ಯಾಂಗ್ ಹಾಂಗ್-01’ ಮತ್ತು ಇದು ಫೆಬ್ರವರಿ 23 ರಂದು ಚೀನಾದ ಕರಾವಳಿಯನ್ನು ಬಿಟ್ಟಿದೆ. ಇದು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಮಾರ್ಚ್ 10 ರಂದು ಬಂಗಾಳಕೊಲ್ಲಿಯನ್ನು ತಲುಪಿತು. ಚೀನಾದ ಹಡಗು ಈಗ ವಿಶಾಖಪಟ್ಟಣಂ ಕರಾವಳಿಯಿಂದ ಕೇವಲ 480 ಕಿ.ಮೀ ಅಂತರದಲ್ಲಿದೆ. ಇದಲ್ಲದೇ ಚೀನಾದ ಮತ್ತೊಂದು ಹಡಗು ಮಾಲ್ಡೀವ್ಸ್ ನಲ್ಲಿ ಬೀಡುಬಿಟ್ಟಿದೆ. ಈ ಹಿಂದೆಯೂ ಭಾರತದ ಕ್ಷಿಪಣಿ ಪರೀಕ್ಷೆಗಳ ಮೇಲೆ ಕಣ್ಣಿಡಲು ಚೀನಾವು ಹಡಗುಗಳನ್ನು ಕಳುಹಿಸಿತ್ತು.
ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಹಲವಾರು ಕರಾವಳಿಗಳು ಮಾಲ್ಡೀವ್ಸ್ ಮತ್ತು ಶ್ರೀಲಂಕಾ ಬಂದರುಗಳು ಚೀನಾದ ಹಡಗುಗಳಿಂದ ಪ್ರಭಾವಿತವಾಗಿವೆ. ಚೀನಾದ ಬೇಹುಗಾರಿಕಾ ಹಡಗುಗಳು ‘ಹೈಟೆಕ್ ಕದ್ದಾಲಿಕೆ ಉಪಕರಣ’ಗಳನ್ನು ಹೊಂದಿವೆ. ಇದರರ್ಥ ಅವರು ಹತ್ತಿರದ ದೇಶಗಳ ಬಂದರುಗಳಲ್ಲಿ ನಿಂತು ಭಾರತದ ಒಳಭಾಗದವರೆಗೆ ಮಾಹಿತಿಯನ್ನು ಸಂಗ್ರಹಿಸಬಹುದು.

ಭಾರತದ ‘ಅಗ್ನಿ-5’ ಕ್ಷಿಪಣಿಯ ವೈಶಿಷ್ಟ್ಯಗಳು !

1. ಒಂದೇ ಸಮಯದಲ್ಲಿ ಅನೇಕ ಗುರಿಗಳನ್ನು ಸಾಧಿಸುವ ಸಾಮರ್ಥ್ಯ !

2. ಸಂಪೂರ್ಣ ಚೀನಾ ಮತ್ತು ಅರ್ಧ ಯುರೋಪ್ ಈ ಕ್ಷಿಪಣಿಯ ಹಂತದಲ್ಲಿ !

3. ಮಾರಕ ಸಾಮರ್ಥ್ಯ 5 ಸಾವಿರ ಕಿಲೋಮೀಟರ್ !

4. ಒಂದೂವರೆ ಟನ್ ತೂಕದ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ!

5. ವೇಗ : ‘ಮ್ಯಾಕ್ 24’, ಅಂದರೆ ಶಬ್ದದ ವೇಗಕ್ಕಿಂತ 24 ಪಟ್ಟು ಹೆಚ್ಚು (ಗಂಟೆಗೆ 29 ಸಾವಿರ 635 ಕಿಮೀ) !

6. ಎಮ್.ಐ.ಆರ್.ವಿ. ತಂತ್ರಜ್ಞಾನವನ್ನು ಹೊಂದಿರುವ ಅಮೇರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ನಂತರ ಭಾರತವು ಆರನೇ ದೇಶವಾಗಿದೆ !

ಸಂಪಾದಕೀಯ ನಿಲುವು

ಕುತಂತ್ರ ಚೀನಾದ ಮೇಲೆ ಕಣ್ಣಿಡಲು, ಭಾರತವೂ ಈಗ ಅದನ್ನು ಸುತ್ತುವರಿಯಬೇಕು. ಇದಕ್ಕಾಗಿ ಭಾರತವು ಚೀನಾದ ನೆರೆಯ ದೇಶಗಳಾದ ವಿಯೆಟ್ನಾಂ, ಫಿಲಿಪ್ಪೀನ್ಸ್, ಜಪಾನ್, ದಕ್ಷಿಣ ಕೊರಿಯಾದೊಂದಿಗೆ ರಷ್ಯಾದೊಂದಿಗೆ ವ್ಯೂಹಾತ್ಮಕ ಸಂಬಂಧವನ್ನು ಬಲಪಡಿಸಬೇಕಾಗಿದೆ !