(ದೇವಾಲಯವನ್ನು ಪ್ರವೇಶಿಸುವಾಗ ಧರಿಸಬೇಕಾದ ವಸ್ತ್ರಗಳಿಗೆ ಸಂಬಂಧಿಸಿದ ನಿಯಮವೇ ವಸ್ತ್ರಸಂಹಿತೆ)
ಸತಾರಾ, ಮಾರ್ಚ್ 11 (ಸುದ್ದಿ) – ರಾಜ್ಯ ಸರಕಾರವು 2020 ರಲ್ಲಿ ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಆದರ್ಶ ಡ್ರೆಸ್ ಕೋಡ್ ಅನ್ನು ಜಾರಿಗೆ ತಂದಿದೆ. ಇಷ್ಟು ಮಾತ್ರವಲ್ಲದೆ, ದೇಶದ ಅನೇಕ ದೇವಾಲಯಗಳು, ಗುರುದ್ವಾರಗಳು, ಚರ್ಚ್‌ಗಳು, ಮಸೀದಿಗಳು, ಇತರ ಪ್ರಾರ್ಥನಾ ಸ್ಥಳಗಳು, ಖಾಸಗಿ ಸಂಸ್ಥೆಗಳು, ಶಾಲಾ-ಕಾಲೇಜುಗಳು, ನ್ಯಾಯಾಲಯಗಳು, ಪೊಲೀಸ್ ಇತ್ಯಾದಿಗಳಲ್ಲಿ ಡ್ರೆಸ್ ಕೋಡ್ ಅನ್ವಯಿಸುತ್ತದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳ ಪಾವಿತ್ರ್ಯತೆ, ಆಚಾರ-ವಿಚಾರ, ಸಂಸ್ಕೃತಿ ಕಾಪಾಡುವ ನಿಟ್ಟಿನಲ್ಲಿ ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದಿಂದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲೆಯ 32ಕ್ಕೂ ಹೆಚ್ಚು ದೇವಸ್ಥಾನಗಳ ಧರ್ಮದರ್ಶಿಗಳು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಆದರ್ಶ ವಸ್ತ್ರ ಸಂಹಿತೆ ಅಳವಡಿಸಲು ನಿರ್ಧರಿಸಿದ್ದಾರೆ ಎಂದು ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಸಮನ್ವಯಕ ಶ್ರೀ. ಸುನಿಲ್ ಘನವಟ್ ಇವರು ಮಾಹಿತಿ ನೀಡಿದರು. ರಾಜವಾಡದ ಸಮರ್ಥ ಸದನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವ್ಯಾಸಪೀಠದಲ್ಲಿ ಮಹಾರಾಷ್ಟ್ರ ಮಂದಿರ ಮಹಾಸಂಘದ ಸತಾರಾ ಜಿಲ್ಲಾ ಸಂಚಾಲಕರು ಹಾಗೂ ಪಂಚಪಾಳಿ ಹೌದ್ ದುರ್ಗಾಮಾತಾ ದೇವಸ್ಥಾನದ ಕಾರ್ಯದರ್ಶಿ ಶ್ರೀ. ಶಿವಾಜಿರಾವ ತುಪೆ, ನಾಗಠಾಣೆಯ ಚೌಂಡೇಶ್ವರಿ ದೇವಸ್ಥಾನದ ಟ್ರಸ್ಟಿ ವಕೀಲರಾದ ದತ್ತಾತ್ರೇ ಕುಲಕರ್ಣಿ, ಹಿಂದೂ ಮಹಾಸಭಾದ ಮಹಾರಾಷ್ಟ್ರ ಪ್ರದೇಶಾಧ್ಯಕ್ಷ ವಕೀಲರಾದ ದತ್ತಾತ್ರೆಯ ಸಣಸ, ರಣರಾಗಿಣಿ ಶಾಖೆಯ ಸೌ. ರೂಪಾ ಮಹಾಡಿಕ್, ಹಿಂದೂ ಜನಜಾಗೃತಿ ಸಮಿತಿಯ ಹೇಮಂತ್ ಸೋನಾವಣೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಶ್ರೀ. ಘನವಟ ಇವರು ಮಾತು ಮುಂದುವರೆಸುತ್ತಾ
1. 5 ನೇ ಫೆಬ್ರವರಿ 2023 ರಂದು ‘ಮಹಾರಾಷ್ಟ್ರ ಮಂದಿರ ಮಹಾಸಂಘ’ ಅನ್ನು ಸ್ಥಾಪಿಸಲಾಯಿತು. ಮಹಾಸಂಘದ ಕಾರ್ಯ ಕ್ರಮೇಣವಾಗಿ ಹೆಚ್ಚುತ್ತಿದ್ದು, ಕೇವಲ ಒಂದೇ ವರ್ಷದಲ್ಲಿ ಇಡೀ ರಾಜ್ಯಕ್ಕೆ ತಲುಪಿದೆ. ತುಳಜಾಪುರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ವಿರೋಧವಿತ್ತು; ಆದರೆ ಪ್ರಸ್ತುತ ಮಹಾರಾಷ್ಟ್ರದ 457ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ.
2. ಸಡಿಲವಾದ ಬಟ್ಟೆ ಅಥವಾ ಅಸಾಂಪ್ರದಾಯಿಕ ಉಡುಗೆಯಲ್ಲಿ ದೇವರದರ್ಶನಕ್ಕಾಗಿ ದೇವಸ್ಥಾನಗಳಿಗೆ ಹೋಗುವುದು ‘ವೈಯಕ್ತಿಕ ಸ್ವಾತಂತ್ರ್ಯ’ವಾಗಲಾರದು. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಏನು ಧರಿಸಬೇಕೆಂದು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ; ಆದರೆ ದೇವಾಲಯವು ಧಾರ್ಮಿಕ ಸ್ಥಳವಾಗಿದೆ. ಧಾರ್ಮಿಕಕ್ಕೆ ತಕ್ಕಂತೆ ನಡತೆ ಇರಬೇಕು. ಅಲ್ಲಿ ವ್ಯಕ್ತಿ ಸ್ವಾತಂತ್ರ್ಯವಲ್ಲ, ಧರ್ಮ ಮುಖ್ಯವಾಗಿರುತ್ತದೆ.
ಈ ಸಮಯದಲ್ಲಿ ಶ್ರೀ. ಶಿವಾಜಿರಾವ್ ತೂಪೆ ಅವರು ಸಾತ್ವಿಕ ಭಾರತೀಯ ಉಡುಗೆಯ ಮಹತ್ವವನ್ನು ವಿವರಿಸಿದರು ಮತ್ತು ದೇವಾಲಯಗಳಲ್ಲಿ ಸಾತ್ವಿಕ ಡ್ರೆಸ್ ಕೋಡ್ ಕುರಿತು ಸೂಚನಾ ಫಲಕಗಳನ್ನು ಹಾಕುವಂತೆ ದೇವಸ್ಥಾನದ ಧರ್ಮದರ್ಶಿಗಳಿಗೆ ಮನವಿ ಮಾಡಿದರು. ಸಾತ್ವಿಕ ವಸ್ತ್ರ ಸಂಹಿತೆಗಾಗಿ ದರ್ಶನಕ್ಕೆ ಬರುವ ಭಕ್ತರಿಗೆ ಜಾಗೃತಿ ಮೂಡಿಸಲು ದೇವಸ್ಥಾನದ ಧರ್ಮದರ್ಶಿಗಳು ಜಾಗೃತಿ ಮೂಡಿಸಬೇಕು ಎಂದು ನ್ಯಾಯವಾದಿ ದತ್ತಾತ್ರಯ ಕುಲಕರ್ಣಿ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ವಕೀಲ ದತ್ತಾತ್ರೇ ಸಣಸ್ ಅವರು ‘ಮಹಾರಾಷ್ಟ್ರ ಮಂದಿರ ಮಹಾಸಂಘ’ಕ್ಕೆ ಸಾಧ್ಯವಿರುವ ಎಲ್ಲ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದರು.