Charges of Espionage: ಪಾಕಿಸ್ತಾನಿ ಗುಪ್ತಚರರಿಗೆ ಗೌಪ್ಯ ಮಾಹಿತಿ ನೀಡಿದವನ ಬಂಧನ !

ಮಹಾರಾಷ್ಟ್ರ ಉಗ್ರ ನಿಗ್ರಹ ದಳದಿಂದ ಕ್ರಮ !

ಮುಂಬಯಿ – ಪಾಕಿಸ್ತಾನಿ ಗುಪ್ತಚರರಿಗೆ ನಿರ್ಬಂಧಿತ ಪ್ರದೇಶಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು 31 ವರ್ಷದ ‘ಸ್ಟ್ರಕ್ಚರಲ್ ಫ್ಯಾಬ್ರಿಕೆಟರ್’ನನ್ನು ಮಜಗಾಂವ್ ಹಡಗುಕಟ್ಟೆಯಿಂದ ಬಂಧಿಸಿದೆ. ಇದು ಹನಿ ಟ್ರ್ಯಾಪ್‌ನ ಒಂದು ರೂಪವಾಗಿದೆ (‘ಹನಿ ಟ್ರ್ಯಾಪ್’ ಎಂದರೆ ಮಹಿಳೆಯ ಮೂಲಕ ವ್ಯಕ್ತಿಯನ್ನು ಬಲೆಗೆ ಬೀಳಿಸುವುದು) ಮತ್ತು ಈ ಪ್ರಕರಣದಲ್ಲಿ ತಂಡವು ಆರೋಪಿ ಮತ್ತು ಆತನ ಸಂಪರ್ಕದಲ್ಲಿರುವ ಇತರರ ವಿರುದ್ಧ ಗೌಪ್ಯತೆ ಕಾಯಿದೆಯಡಿ ಪ್ರಕರಣ ದಾಖಲಿಸಿದೆ.

ಆರೋಪಿಯು ಹಲವು ತಿಂಗಳುಗಳಿಂದ ಮಹಿಳೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಭಾಷಣೆ ನಡೆಸುತ್ತಿದ್ದ. ಆಕೆಯ ಸೂಚನೆ ಮೇರೆಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಹಣಕ್ಕಾಗಿ ಆರೋಪಿ ಮಹಿಳೆಗೆ ಗೌಪ್ಯ ಮಾಹಿತಿ ನೀಡುತ್ತಿದ್ದ. ಆರೋಪಿ ಮಹಿಳೆಯು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.

2023 ರಲ್ಲಿ, ತಂಡವು ಮುಂಬಯಿನ ಮಜಗಾಂವ್ ಹಡಗುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಗೌರವ್ ಪಾಟೀಲ್ ಎಂಬಾತನನ್ನು ಪಾಕಿಸ್ತಾನ ಮೂಲದ ಏಜೆಂಟ್‌ಗೆ ಗೌಪ್ಯ ಮಾಹಿತಿ ನೀಡಿದ್ದಕ್ಕಾಗಿ ಬಂಧಿಸಿತ್ತು.

ಸಂಪಾದಕೀಯ ನಿಲುವು

ಅಂತಹವರನ್ನು ದೇಶದ್ರೋಹಿಗಳೆಂದು ಘೋಷಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ, ಮಾತ್ರ ಇವು ನಿಲ್ಲುತ್ತವೆ !