ಮಾಲೆ(ಮಾಲ್ಡೀವ್ಸ್) – ಕಳೆದ ವರ್ಷಕ್ಕೆ ಹೋಲಿಸಿದರೆ ಈವರ್ಷ ಮಾರ್ಚ್ ೪ರವರೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ೩೩ ಪ್ರತಿಶತದಷ್ಟು ಇಳಿಕೆಯಾಗಿರುವುದು ಗಮನಕ್ಕೆ ಬಂದಿದೆ. ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಇಲಾಖೆಯು ಪ್ರಸಾರ ಮಾಡಿದ ಮಾಹಿತಿಗನುಸಾರ ,೨೦೨೩ ಮಾರ್ಚ್ ೪ ರ ವರೆಗೆ ೪೧,೦೫೪ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದರು.ಇದಕ್ಕೆ ವ್ಯತಿರಿಕ್ತವಾಗಿ ,ಈವರ್ಷ ೨ ರ ವರೆಗೆ ೨೭,೨೨೪ ಪ್ರವಾಸಿಗರು ಭೇಟಿ ನೀಡಿದ್ದರು ಎಂದು ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ ೩೩ ರಷ್ಟು ಅಂದರೆ ೧೩,೮೩೦ ರಷ್ಟು ಸಂಖ್ಯೆ ಇಳಿಕೆಯಾಗಿದೆ.
(ಸೌಜನ್ಯ – Raj Express)
ಕಳೆದವರ್ಷ ಚುನಾವಣೆಯಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ಅವರು ‘ಇಂಡಿಯಾ ಔಟ್‘ ಅಭಿಯಾನ ನಡೆಸಿದ್ದರು, ಆದಾಗ್ಯೂ ಅಲ್ಲಿಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರತೀಯರ ಪ್ರಮಾಣ ಎರಡನೇಯ ಕ್ರಮಾಂಕದಲ್ಲಿತ್ತು. ಅದಕ್ಕೂ ಮುಂಚೆ ಮಾಲ್ಡೀವ್ಸ್ ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಭಾರತೀಯರೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದರು. ಈ ವರ್ಷ ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಆಗ ಮುಯಿಜ್ಜು ಸರ್ಕಾರದ ಸಚಿವರು, ‘ಮಾಲ್ಡೀವ್ಸ್‌ಗೆ ಹೋಗುವ ಭಾರತೀಯ ಪ್ರವಾಸಿಗರನ್ನು ಭಾರತದಲ್ಲಿನ ಪ್ರವಾಸಿ ತಾಣಗಳಿಗೇ ಭೇಟಿ ನೀಡುವಂತೆ ಮೋದಿಯವರು ಆಕರ್ಷಿಸುತ್ತಿದ್ದಾರೆ‘, ಎಂದು ಮೋದಿಯವರನ್ನು ಟೀಕಿಸಿದ್ದರು. ಇದರಿಂದ ಕೋಟ್ಯಾಂತರ ಭಾರತೀಯರು ಅಸಾಮಾಧಾನಗೊಂಡಿದ್ದರು. ಅಂದಿನಿಂದ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.