Delhi Namaz On Road: ದೇಶಾದ್ಯಂತ ೬ ಲಕ್ಷ ಮಸೀದಿಗಳಿದ್ದರೂ ಕೂಡ ರಸ್ತೆ ತಡೆದು ನಮಾಜ ಪಠಣೆ ಮಾಡುವುದರಲ್ಲಿ ಯಾವ ಬುದ್ಧಿವಂತಿಕೆ ಇದೆ ? – ಭಾಜಪದ ಶಾಸಕ ಟಿ. ರಾಜಾ ಸಿಂಹ

  • ರಾಜಧಾನಿಯಲ್ಲಿ ಪೊಲೀಸ ಅಧಿಕಾರಿ ನಮಾಜ್ ಪಠಣ ಮಾಡುವವರಿಗೆ ಒದ್ದ ಪ್ರಕರಣ

  • ದೆಹಲಿ ಪೊಲೀಸರನ್ನು ಬೆಂಬಲಿಸಿದ ರಾಜಾ ಸಿಂಹ !

  • ದೆಹಲಿ ಪೋರೀಸರ ಕೃತ್ಯ ನಾಚಿಗೇಡು ಕಾಂಗ್ರೆಸ್‌ನಿಂದ ಟೀಕೆ !

ಭಾಗ್ಯನಗರ (ತೆಲಂಗಾಣ) – ಉತ್ತರ ದೆಹಲಿಯ ಇಂದ್ರಲೋಕ ಪರಿಸರದಲ್ಲಿ ಮಾರ್ಚ್ ೮ ರ ಮಧ್ಯಾಹ್ನ ರಸ್ತೆಯಲ್ಲಿ ನಮಾಜ್ ಪಠಣೆ ಮಾಡುವವರಿಗೆ ಪೊಲೀಸ ಅಧಿಕಾರಿ ಮನೋಜ ತೋಮರ ಇವರು ಒದ್ದು ಎಬ್ಬಿಸಿದರು. ಇದರ ವಿಡಿಯೋ ಬೃಹತ್ ಪ್ರಮಾಣದಲ್ಲಿ ಪ್ರಸಾರವಾಗಿದ್ದು ಮುಸಲ್ಮಾನರು ಇದನ್ನು ವಿರೋಧಿಸಿದ್ದಾರೆ. ಆದ್ದರಿಂದ ತೋಮರ್ ಇವರನ್ನು ದೆಹಲಿ ಪೋಲಿಸರು ಅಮಾನತುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಭಾಜಪದ ಭಾಗ್ಯನಗರದ ಪ್ರಖರ ಹಿಂದುತ್ವನಿಷ್ಠ ಸಂಸದ ಟಿ. ರಾಜಾ ಸಿಂಹ ಇವರು ಮನೋಜ ತೋಮರ ಇವರನ್ನು ಬೆಂಬಲಿಸಿದ್ದಾರೆ. ಅವರು, ದೇಶಾದ್ಯಂತ ೬ ಲಕ್ಷ ಮಸಿದಿಗಳಿದ್ದರೂ ರಸ್ತೆ ತಡೆದು ನಮಾಜ ಪಠಣೆ ಮಾಡುವುದರಲ್ಲಿ ಯಾವ ಬುದ್ಧಿವಂತಿಕೆ ಇದೆ ? ಈ ಪ್ರಕರಣದಲ್ಲಿ ದೆಹಲಿ ಪೊಲೀಸರಿಗೆ ನಾನು ಸಂಪೂರ್ಣ ಬೆಂಬಲ ಸೂಚಿಸುತ್ತೇನೆ. ಪೊಲೀಸರು (ಮನೋಜ ತೋಮರ ಇವರು) ಯಾವುದೇ ತಪ್ಪು ಮಾಡಿಲ್ಲ.

ಮಾರ್ಚ್ ೮ ರಂದು ಶುಕ್ರವಾರ ನಮಾಜ ಪಠಣೆಯ ಸಮಯದಲ್ಲಿನ ಘಟನೆಯನ್ನು ವಿರೋಧಿಸಲು ಅಲ್ಲಿಯ ಮುಸಲ್ಮಾನರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಉದ್ವಿಘ್ನತೆ ನಿರ್ಮಾಣವಾಗಿದ್ದರಿಂದ ತೋಮರ್ ಇವರನ್ನು ಅಮಾನತುಗೊಳಿಸಿದರು. ಒಟ್ಟಾರೆ ಈ ಪ್ರಕರಣದಿಂದ ಕಳೆದ ೨೪ ಗಂಟೆಯಲ್ಲಿ ಎಕ್ಸ್ ನಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದೆ.

#StandWithManoj Tomar, ‘ದಿಲ್ಲಿ ಪೊಲೀಸ್’, ‘ರೋಡ್ ಜಾಮ್’, ‘ಮನೋಜ್ ತೋಮರ’ ಇಂತಹ ವಿವಿಧ ‘ಹ್ಯಾಶ್ ಟ್ಯಾಗ್’ ಮತ್ತು ‘ಕೀವರ್ಡ್ಸ್’ ಇಂದ ಸಾವಿರಾರು ಹಿಂದುಗಳು ಮನೋಜ ತೋಮರ್ ಇವರನ್ನು ಬೆಂಬಲಿಸಿದ್ದಾರೆ. ಇನ್ನೊಂದು ಕಡೆ ಕೆಲವು ಮತಾಂಧ ಹಾಗೂ ಕಾಂಗ್ರೆಸ್ ಮತ್ತು ಕಥಿತ ಜಾತ್ಯಾತೀತರು ಮುಸಲ್ಮಾನರನ್ನು ಬೆಂಬಲಿಸುತ್ತಾ ಪೊಲೀಸರ ಕೃತ್ಯ ತಪ್ಪು ಎಂದು ಹೇಳಿದ್ದಾರೆ.

ಮುಸಲ್ಮಾನರ ಓಲೈಕೆ ಮಾಡುವ ಕೆಲವು ಕಾಂಗ್ರೆಸ್ಸಿಗರು !

ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ ಇವರು, ‘ಇದು (ಒದ್ದಿರುವ ಕೃತ್ಯ) ಅಮಿತ ಶಾಹ ಇವರ ದೆಹಲಿ ಪೋಲಿಸರ ಬ್ರಿದ ವಾಕ್ಯವಾಗಿದೆ . ಶಾಂತಿ, ಸೇವೆ, ನ್ಯಾಯ ಇದಕ್ಕಾಗಿ ಅವರು ಸಂಪೂರ್ಣ ತೊಡಗಿಸಿಕೊಂಡು ಕಾರ್ಯ ಮಾಡುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ಸಿನ ನಾಯಕ ಇಮ್ರಾನ್ ಪ್ರತಾಪಗಾಧಿ ಇವರು , ಇದು ದ್ವೇಷವೇ ? ಈ ವ್ಯಕ್ತಿಗೆ ಬಹುಷಃ ಮನುಷ್ಯತ್ವದ ತತ್ವಗಳು ತಿಳಿದಿರಲಿಕ್ಕಿಲ್ಲ ಎಂದು ಹೇಳಿದರು.

ದೆಹಲಿ ಕಾಂಗ್ರೆಸ್, ತುಂಬಾ ನಾಚಿಕೆಗೆಡು ಎಂದು ಹೇಳಿದೆ ! ರಸ್ತೆಯಲ್ಲಿ ನಮಾಜ ಪಠಣೆ ಮಾಡುವ ಜನರಿಗೆ ದೆಹಲಿ ಪೊಲೀಸ್ ಒದೆಯುತ್ತಿದ್ದಾರೆ, ಇದಕ್ಕಿಂತ ನಾಚಿಗೇಡು ಇನ್ನೇನು ಇರಲು ಸಾಧ್ಯ ? ಎಂದು ಹೇಳಿದರು.

ಘಟನೆಯ ಅರ್ಧ ವಿಡಿಯೋ ಪ್ರಸಾರ ಮಾಡಿ ಜನರನ್ನು ಪ್ರಚೋದಿಸಲಾಗುತ್ತಿದೆ ! – ಸಾಮಾಜಿಕ ಜಾಲತಾಣದಿಂದ ಟೀಕೆ

ಸಾಮಾಜಿಕ ಜಾಲತಾಣದಲ್ಲಿ ಓರ್ವ ವ್ಯಕ್ತಿಯು ಈ ಘಟನೆಯ ಒಂದುವರೆ ನಿಮಿಷದ ಒಂದು ವಿಡಿಯೋ ಶೇರ್ ಮಾಡುತ್ತಾ, ಯಾವಾಗ ರಸ್ತೆಯಲ್ಲಿ ನಮಾಜ ಪಠಣೆಗಾಗಿ ಕೆಲವು ಜನರು ಒಟ್ಟುಗೂಡಿದರು ಆಗ ಅವರಿಗೆ ದೂರ ಹೋಗಲು ಹೇಳಿದ್ದರು; ಆದರೆ ಅವರು ಒಟ್ಟು ಗೂಡಿದರು ಮತ್ತು ನಂತರ ಅವರು ಪೊಲೀಸರಿಗೆ ಜೀವ ಬೆದರಿಕೆ ನೀಡಿದರು. ಅರ್ಧ ವಿಡಿಯೋ ಪ್ರಸಾರಗೊಳಿಸಿ ಜನರನ್ನು ಪ್ರಚೋದಿಸಿ ಪೊಲೀಸರನ್ನು ತಪ್ಪಿತಸ್ಥರನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಚಂದನ ಶರ್ಮ ಎಂಬವನು, ಅಧಿಕಾರಿ ಮನೋಜ ತೋಮರ ಇವರಿಗೆ ಗುಂಪಿನಿಂದ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ರಸ್ತೆಯಲ್ಲಿ ನಮಾಜ ಪಠಣೆ ಮಾಡುವುದು ಅಪರಾಧ ಅಲ್ಲವೇ ? – ನ್ಯಾಯವಾದಿ ವಿನೀತ ಜಿಂದಾಲ, ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತ ಜಿಂದಾಲ ಇವರು ಈ ಪ್ರಕರಣದ ಕುರಿತು ತಮ್ಮ ಅಭಿಪ್ರಾಯ ಮಂಡಿಸುವ ವಿಡಿಯೋ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಕೆಲವು ಮಹತ್ವಪೂರ್ಣ ಪ್ರಶ್ನೆಗಳು ಎತ್ತಿದ್ದಾರೆ. ಅದು ಮುಂದಿನಂತೆ ಇವೆ.

೧. ದೆಹಲಿಯಲ್ಲಿ ರಸ್ತೆಯ ಮೇಲೆ ನಮಾಜ ಪಠಣೆ ಮಾಡುವ ಜನರಿಗೆ ಆಸಂವೇದನಾಶೀಲ ರೀತಿಯಲ್ಲಿ ದೂರಸರಿಸುವ ದೆಹಲಿ ಪೋಲಿಸ ಅಧಿಕಾರಿಯ ಮೇಲೆ ಕ್ರಮ ಕೈಗೊಂಡರು, ಆದರೆ ರಸ್ತೆ ತಡೆದು ನಮಾಜ್ ಪಠಣೆ ಮಾಡುವುದು ಯೋಗ್ಯವೇ ?

೨. ರಸ್ತೆಯಲ್ಲಿ ಅಕ್ರಮ ರೀತಿಯಲ್ಲಿ ನಮಾಜ ಪಠಣೆ ಮಾಡುವವರ ಮೇಲೆ ದೂರು ದಾಖಲಿಸಿದ್ದಾರೆಯೆ ?

೩. ರಸ್ತೆ ತಡೆ ನಡೆಸಿ ಜನರ ಜೀವ ಸಂಕಷ್ಟಕ್ಕೆ ಸಿಲುಕಿಸುವುದು, ಇದು ಅಪರಾಧ ಅಲ್ಲವೇ ?

ನ್ಯಾಯವಾದಿ ಜಿಂದಾಲ ಇವರು ಮಾತು ಮುಂದುವರೆಸುತ್ತಾ, ನಾನು ದೆಹಲಿ ಪೋಲಿಸರ ಬಳಿ, ಅವರು ಅಕ್ರಮವಾಗಿ ರಸ್ತೆ ತಡೆದು ವಾಹನ ಸಂಚಾರಕ್ಕೆ ತೊಂದರೆ ನಿರ್ಮಿಸಿದ್ದಾರೆ, ಪೊಲೀಸ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ದೂರು ದಾಖಲಿಸಿ ಎಂದು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

  • ಮುಸಲ್ಮಾನರ ಓಲೈಕೆಗಾಗಿ ಭಾರತವನ್ನು ಹಾಳು ಮಾಡುವಲ್ಲಿ ಕಾಂಗ್ರೆಸ್ಸಿನ ಸಂಪೂರ್ಣ ಆಯುಷ್ಯ ಕಳೆದಿದೆ. ಆದ್ದರಿಂದ ಎಂದಿನಂತೆ ಅದು ಈಗಲು ಕೂಡ ಕಾನೂನು ಉಲ್ಲಂಘಿಸುವ ಮುಸಲ್ಮಾನರಿಗೆ ಬೆಂಬಲ ನೀಡುತ್ತದೆ ಇದರಲ್ಲಿ ಆಶ್ಚರ್ಯ ಏನು ಇಲ್ಲ ?
  • ಕಾಂಗ್ರೆಸ್ ಕೆಲವು ವರ್ಷಗಳ ಹಿಂದೆ, ಪೊಲೀಸರು ಮುಂಬಯಿ ವಿಮಾನ ನಿಲ್ದಾಣದಲ್ಲಿ ಜಗದ್ಗುರು ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜ ಇವರ ಭಕ್ತರ ಮೇಲೆ ಲಾಠಿ ಚಾರ್ಜ್ ನ ಘಟನೆಯ ಸಮಯದಲ್ಲಿ ಟೀಕಿಸಲಿಲ್ಲ ಇದನ್ನು ಗಮನದಲ್ಲಿಡಿ !
  • ಹಿಂದುಗಳಿಗೆ ‘ಧರ್ಮ ಮನೆಯಲ್ಲಿ ನಾಲ್ಕು ಗೋಡೆಯ ಮಧ್ಯದಲ್ಲಿ ಇಡಿ’ ಎಂದು ಯಾವಾಗಲೂ ಉಪದೇಶ ನೀಡುವ ಪ್ರಗತಿ(ಅಧೋ)ಪರರು ರಸ್ತೆಯಲ್ಲಿ ನಮಾಜ ಪಠಣೆ ಮಾಡುವ ಮುಸಲ್ಮಾನರ ಬಗ್ಗೆ ಚಕಾರ ಶಬ್ದವು ತೆಗೆಯುವುದಿಲ್ಲ ಇದನ್ನು ತಿಳಿಯಿರಿ !