ಮಾಲ್ಡಿವ್ಸ್‌ನ ಮಾಜಿ ಅಧ್ಯಕ್ಷ ನಾಶೀದ ಇವರಿಂದ ಭಾರತೀಯರಲ್ಲಿ ಕ್ಷಮೆಯಾಚಿಸುತ್ತಾ ಮನವಿ !
ನವ ದೆಹಲಿ – ಭಾರತ ಮತ್ತು ಮಾಲ್ಡೀವ್ಸ್‌ನ ಉದ್ವಿಗ್ನತೆ ಮಾಲ್ಡೀವ್ಸ್ ಮೇಲೆ ಪರಿಣಾಮ ಬೀರಿದೆ. ನನಗೆ ಇದರ ಬಗ್ಗೆ ತುಂಬಾ ಯೋಚನೆಯಾಗಿದೆ. ಮಾಲ್ಡಿವ್ಸ್ ನ ಜನರಿಗೆ ಕ್ಷಮಿಸಿರಿ. ನಾವು ಕ್ಷಮೆಯಾಚನೆ ಮಾಡುತ್ತಿದ್ದೇವೆ. ಭಾರತೀಯ ಪ್ರವಾಸಿಗರು ತಮ್ಮ ರಜಾದಿನಗಳಲ್ಲಿ ಮಾಲ್ಡೀವ್ಸ್‌ಗೆ ಬರಬೇಕು, ಎಂದು ನಮ್ಮ ಇಚ್ಛೆಯಾಗಿದೆ. ನಮ್ಮ ಆತಿಥ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಎಂದು ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮಹಮ್ಮದ್ ನಾಶೀದ ಮನವಿ ಮಾಡಿದ್ದಾರೆ. ಅವರು ಸಧ್ಯ ಭಾರತದ ಪ್ರವಾಸದಲ್ಲಿದ್ದಾರೆ. ಅವರು ಈ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಜನತೆಯ ಪರವಾಗಿ ಕ್ಷಮೆಯಾಚಿಸಿದ್ದಾರೆ.
Former Maldivian President Mohamed Nasheed appeals for Indian forgiveness.
‘Indian tourists should visit Maldives.’
Former President Nasheed, known for his positive relations with India, makes this appeal. Indians hold no grudge against him; however, President Muizzu is… pic.twitter.com/xAfjKi7kpb
— Sanatan Prabhat (@SanatanPrabhat) March 9, 2024
ಸಂಪಾದಕೀಯ ನಿಲುವುಮಾಜಿ ಅಧ್ಯಕ್ಷ ನಾಶೀದ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಅವರು ಈ ರೀತಿಯ ಮನವಿಗಳನ್ನು ಮಾಡುತ್ತಿದ್ದಾರೆ. ಭಾರತೀಯರಿಗೆ ಅವರ ಮೇಲೆ ದ್ವೇಶವಿಲ್ಲ; ಆದರೆ ಅಧ್ಯಕ್ಷ ಮುಯಿಜ್ಜು ಇವರು ಭಾರತದ್ವೇಷಿ ಮತ್ತು ಚೀನಾಪ್ರೇಮಿಯಾಗಿದ್ದಾರೆ. ಅವರಲ್ಲಿ ಎಲ್ಲಿಯವರೆಗೆ ಬದಲಾವಣೆ ಆಗುವುದಿಲ್ಲವೋ ಅಲ್ಲಿಯವರೆಗೆ ಭಾರತೀಯರು ಮಾಲ್ಡೀವ್ಸ್‌ಗೆ ಹೋಗುವುದಿಲ್ಲ ! |