-
ಹಿಂದೂಗಳಿಂದ ಅಲಹಾಬಾದ ಉಚ್ಚನ್ಯಾಯಾಲಯದಲ್ಲಿ ಆಗ್ರಹ
-
ಭಗವಾನ ಶ್ರೀ ಕೃಷ್ಣನ ಮರಿಮೊಮ್ಮಗ ವಜ್ರನಾಭ ಇವರಿಂದ ಈ ಬಾವಿಯ ನಿರ್ಮಾಣ !
ಮಥುರಾ (ಉತ್ತರ ಪ್ರದೇಶ) – ಹೋಳಿಯ ಮುಹೂರ್ತದ ಸಮಯದಲ್ಲಿ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾಹ ಮಸೀದಿಯೊಳಗೆ ನಿರ್ಮಿಸಿರುವ ಬಾವಿಯ ಪೂಜೆಗೆ ಅನುಮತಿ ನೀಡುವಂತೆ ಹಿಂದೂಗಳು ಕೋರಿದ್ದಾರೆ. ಇದಕ್ಕಾಗಿ ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಮುಸಲ್ಮಾನ ಪಕ್ಷದವರು ಇಲ್ಲಿ ಪೂಜೆಗೆ ನಿರಂತರವಾಗಿ ಅಡೆತಡೆಯನ್ನುಂಟು ಮಾಡುತ್ತಿದ್ದಾರೆ. ಇದರಿಂದ ಪೂಜೆ ಸುಗಮವಾಗಿ ನಡೆಸಲು ಸಾಧ್ಯವಾಗುವಂತೆ ಅವಕಾಶ ಮಾಡಿಕೊಡಬೇಕೆಂದು ಈ ಅರ್ಜಿಯಲ್ಲಿ ನಮೂದಿಸಲಾಗಿದೆ.
1. ಹಿಂದೂಗಳಿಗೆ ಈ ಬಾವಿ ಧಾರ್ಮಿಕ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಅದನ್ನು ಭಗವಾನ ಕೃಷ್ಣನ ಮರಿಮೊಮ್ಮಗ ವಜ್ರನಾಭನು ನಿರ್ಮಿಸಿದ್ದಾನೆ. ಈ ಬಾವಿಯ ಮೇಲೆ ಮಹಿಳೆಯರು ಹೋಳಿಯ ಬಳಿಕ ಶ್ರೀ ಶೀತಲಾಮಾತೆಯ ಪೂಜೆಯನ್ನು ಮಾಡುತ್ತಾರೆ. ಇದಕ್ಕೆ `ಬಾಸೋದಾಕಿ ಪೂಜಾ’ ಎಂದು ಕರೆಯುತ್ತಾರೆ. ಈ ಪೂಜೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ; ಆದರೆ ಹಿಂದೂಗಳು ಶ್ರೀಕೃಷ್ಣಜನ್ಮಭೂಮಿಯ ಸಮೀಕ್ಷೆ ಮತ್ತು ಇತರೆ ಬೇಡಿಕೆಗಳನ್ನು ಪ್ರಾರಂಭಿಸಿದಾಗಿನಿಂದ ಮುಸಲ್ಮಾನರಿಂದ ಈ ಪೂಜೆಯಲ್ಲಿ ಅಡೆತಡೆಯನ್ನುಂಟು ಮಾಡಲಾಗುತ್ತಿದೆ. ಈಗ ಪೂಜೆಯನ್ನು ಮಾಡಲು ಆಡಳಿತಕ್ಕೆ ದೊಡ್ಡ ಪೊಲೀಸ ಬಂದೋಬಸ್ತನ್ನು ನಿಯೋಜಿಸಬೇಕಾಗಲಿದೆ. ಕಳೆದ ವರ್ಷವೂ ಇದೇ ರೀತಿ ನಡೆದಿತ್ತು.
2. ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ಪ್ರತಾಪ ಸಿಂಗ ಅವರು ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಈ ಸಂದರ್ಭದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ. ಶಾಹಿ ಈದ್ಗಾ ಮಸೀದಿಯ ಬಾವಿಯನ್ನು ಹಿಂದೂಗಳು ಮೊದಲಿನಂದಲೂ ಪೂಜೆ ಮಾಡುತ್ತಿದ್ದಾರೆ; ಆದರೆ ಈಗ ಮುಸಲ್ಮಾನರು ಅಡೆತಡೆಯನ್ನುಂಟು ಮಾಡುತ್ತಿದ್ದಾರೆ.
3. ಮಹೇಂದ್ರ ಪ್ರತಾಪ ಸಿಂಗ ಅವರು ಮಾತನಾಡಿ, ಈ ಬಾವಿಯ ಪೂಜೆ ಮಾಡುವುದಕ್ಕೆ ಯಾವುದೇ ನಿಷೇಧವಿಲ್ಲದಿರುವಾಗಲೂ ಮುಸಲ್ಮಾನರು ವಿರೋಧಿಸುತ್ತಿದ್ದಾರೆ. ಇಲ್ಲಿ ಹಿಂದೂಗಳು ತಮ್ಮ ಮಕ್ಕಳ ಮುಂಡನವನ್ನು ಮಾಡಿಸುತ್ತಾರೆ. ಹಿಂದೂಗಳಿಗೆ ಇಲ್ಲಿ ನಿಯಮಿತವಾಗಿ ಪೂಜೆಯನ್ನು ಮಾಡುವ ಅಧಿಕಾರ ಸಿಗಬೇಕು ಎಂದು ದಾಖಲಿಸಿರುವ ಅರ್ಜಿಯ ಕುರಿತು ಮಾರ್ಚ 13ರಂದು ವಿಚಾರಣೆ ನಡೆಯಬಹುದು. ಅದೇ ದಿನ ಶಾಹಿ ಈದ್ಗಾ-ಕೃಷ್ಣಜನ್ಮಭೂಮಿ ಪ್ರಕರಣದ ವಿಚಾರಣೆಯೂ ನಡೆಯಲಿದೆ.