ಭಾರತದೊಂದಿಗೆ ಜಲವಿಜ್ಞಾನದ ಸಮೀಕ್ಷೆ ಒಪ್ಪಂದವನ್ನು ಮಾಲ್ಡೀವ್ಸ್ ನವೀಕರಿಸುವುದಿಲ್ಲ !

  • ರಾಷ್ಟ್ರಾಧ್ಯಕ್ಷ ಮುಹಮ್ಮದ್ ಮುಯಿಜ್ಜು ಇವರ ಆಘಾತಕಾರಿ ಘೋಷಣೆ !

ಮಾಲೆ (ಮಾಲ್ಡೀವ್ಸ್) – ಭಾರತೀಯ ಸೈನಿಕರಿಗೆ ದೇಶ ತೊರೆಯುವಂತೆ ಆದೇಶಿಸಿದ ನಂತರ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರು ಭಾರತದೊಂದಿಗೆ ಜಲವಿಜ್ಞಾನದ ಸಮೀಕ್ಷೆ ಒಪ್ಪಂದವನ್ನು ನವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ. “ನೀರೊಳಗಿನ ವಿವರಗಳು ನಮ್ಮ ಆಸ್ತಿ, ನಮ್ಮ ಪರಂಪರೆ” ಎಂದು ಮುಯಿಝು ಈ ಸಮಯದಲ್ಲಿ ಹೇಳಿದರು.

ಮಾಲ್ಡೀವ್ಸ್ ನೀರಿನಲ್ಲಿ 24 ಗಂಟೆಗಳ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸಲು ಈ ತಿಂಗಳು ಕೆಲಸ ಮಾಡುತ್ತಿದೆ. ಅದರ ಕಾರಣ ಅದರ ದೊಡ್ಡ ಪ್ರದೇಶದ ಹೊರತಾಗಿಯೂ ತನ್ನ ವಿಶೇಷ ಆರ್ಥಿಕ ವಲಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಮುಯಿಝು ಹೇಳಿದರು.

ಸಂಪಾದಕೀಯ ನಿಲುವು

ವಿನಾಶ ಕಾಲೈ ವಿಪರೀತ ಬುದ್ಧಿ ಎಂಬುದಕ್ಕೆ ಉತ್ತಮ ಉದಾಹರಣೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ತೆಗೆದುಕೊಂಡ ನಿರ್ಧಾರ !