|
ಭಂಡಾರಾ – ಜಿಲ್ಲೆಯಲ್ಲಿನ ಪವನಿಯಲ್ಲಿನ ಗೋಶಾಲೆಯಲ್ಲಿ ಮೇವು ಇಲ್ಲದೆ ೩೦ ಜಾನುವರಗಳು ಸಾವನ್ನಪ್ಪಿದ್ದಾವೆ. ಈ ಪ್ರಕರಣದಲ್ಲಿ ಪವನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಗಡಚಿರೋಲಿ ಇಲ್ಲಿಯ ಕುರುಖೆಡಾ ಪೊಲೀಸರು ಕಸಾಯಿ ಖಾನೆಗೆ ಓಯ್ಯುವ ಜಾನುವಾರುಗಳನ್ನು ವಶಕ್ಕೆ ಪಡೆದು ಧಾನೋರಿ ಇಲ್ಲಿಯ ಬಳಿರಾಮ ಗೋಶಾಲೆಗೆ ಎರಡು ದಿನಗಳ ಹಿಂದೆ ಕಳುಹಿಸಿದ್ದರು; ಆದರೆ ಅಲ್ಲಿ ಮೇವಿನ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಮಾರ್ಚ್ ೬ ರಂದು ೩೦ ಜಾನುವಾರಗಳು ಸಾವನ್ನಪ್ಪಿದವು. ಈ ಪ್ರಕರಣದಲ್ಲಿ ಪವನಿ ಪೊಲೀಸರು ಗೋಶಾಲೆಯ ಓರ್ವ ಸಂಚಾಲಕರನ್ನು ವಶಕ್ಕೆ ಪಡೆದಿದ್ದಾರೆ. ಗೋಶಾಲೆಯಲ್ಲಿ ಜನವರಗಳಿಗೆ ಇರಿಸುವುದಕ್ಕಾಗಿ ಶೇಡ (ಕೊಟ್ಟಿಗೆ) ನೀರು ಮತ್ತು ಮೇವಿನ ವ್ಯವಸ್ಥೆ ಮಾಡುವುದು ಅವಶ್ಯಕವಾಗಿರುವಾಗ ಗೋಶಾಲೆಯ ಬಳಿ ಸ್ವಂತ ಮಾಲಕೀಯ ಕೊಟ್ಟಿಗೆ ಇರಲಿಲ್ಲ. ಕಳೆದ ವರ್ಷ ಗೋಶಾಲೆಯ ಅಧ್ಯಕ್ಷರ ಸಹಿತ ೧೩ ಸಂಚಾಲಕರ ಮೇಲೆ ಗೋಶಾಲೆಯಲ್ಲಿನ ಜಾನುವಾರ ಮಾರಾಟ ಮಾಡಿರುವ ಪ್ರಕರಣದಲ್ಲಿ ದೂರು ದಾಖಲಿಸಿದ್ದು ಅವರನ್ನು ಬಂಧಿಸಿದ್ದರು.
ಸಂಪಾದಕೀಯ ನಿಲುವುಜಾನವಾರಗಳ ಕಾಳಜಿ ವಹಿಸುವುದು ಇದು ಗೋಶಾಲೆಯ ಸಂಚಾಲಕರ ಕರ್ತವ್ಯ ಆಗಿರುವಾಗ ಅದರ ಕಡೆಗೆ ದುರ್ಲಕ್ಷ ಮಾಡಿರುವ ಪ್ರಕರಣದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! ಜಾನವಾರಗಳ ಸಾವಿಗೆ ಸಂಬಂಧಿತ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಬೇಕು. |