ಸಂದೇಶಖಾಲಿಯ ಅಪರಾಧಿಗಳನ್ನು ರಕ್ಷಿಸಲು ಬಂಗಾಳ ಸರಕಾರದಿಂದ ಬಲಪ್ರಯೋಗ! – ಪ್ರಧಾನಮಂತ್ರಿ ಮೋದಿ 

ಕೋಲಕಾತಾ – ಬಂಗಾಳದಲ್ಲಿ ಬಡ ಬುಡಕಟ್ಟು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸಂದೇಶಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಬಲಾತ್ಕಾರ ನಡೆದಿದೆ. ಈ ಬಲಾತ್ಕಾರ ಮಾಡಿರುವ ಅಪರಾಧಿಗಳನ್ನು ರಕ್ಷಿಸಲು ಬಂಗಾಳ ಸರಕಾರ ಬಲಪ್ರಯೋಗ ಮಾಡುತ್ತಿದೆಯೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಬಂಗಾಳ ಪ್ರವಾಸದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ. ಕೋಲಕಾತಾದಲ್ಲಿ ಅವರು 15 ಸಾವಿರ 400 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳ ಉದ್ಘಾಟನೆ ಮಾಡಿದರು. ತದನಂತರ ಮೋದಿಯವರು ಉತ್ತರ 24 ಪರಗಣಾ ಜಿಲ್ಲೆಯ ಬಾರಾಸಾತನಲ್ಲಿ ಭಾಜಪ ನಾರಿ ಶಕ್ತಿ ಅಭಿನಂದನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ಹೇಳಿರುವುದು,

1. ಸಂದೇಶಖಾಲಿಯ ಮಹಿಳೆಯರು ತೃಣಮೂಲ ಕಾಂಗ್ರೆಸ ನಾಯಕ ಶಾಹಜಹಾನ ಶೇಖ ಮೇಲೆ ಬಲಾತ್ಕಾರ ಮತ್ತು ಭೂಮಿ ಕಬಳಿಸಿರುವ ಆರೋಪ ಮಾಡಿದ್ದಾರೆ.

2. ಬಂಗಾಳದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ಬಿಡುತ್ತಿಲ್ಲ. ರಾಜ್ಯ ಮಹಿಳೆಯರ (?)