S Jaishankar Remarks : ಭಾರತವು ನೆರೆಯ ದೇಶಗಳ ಮೇಲೆ ಗೂಂಡಾಗಿರಿ ಅಲ್ಲ ಸಹಾಯ ಮಾಡುತ್ತದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ನವದೆಹಲಿ – ‘ಭಾರತ ಉಪಖಂಡ ಮತ್ತು ಹಿಂದೂ ಮಹಾಸಾಗರ ಕ್ಷೇತ್ರದಲ್ಲಿರುವ ದೇಶಗಳ ಮೇಲೆ ಗೂಂಡಾಗಿರಿ ಮಾಡುತ್ತಿದೆಯೇ ?’ ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಇವರು, “ನಾವು ಗೂಂಡಾಗಿರಿ ಮಾಡುತ್ತಿದ್ದರೆ ನೆರೆಯ ದೇಶಗಳಿಗೆ ೩೭ ಸಾವಿರದ ೩೦೦ ಕೋಟಿ ರೂಪಾಯಿ ಸಹಾಯ ಮಾಡುತ್ತಿರಲಿಲ್ಲ, ಹಾಗೂ ಕೊರೊನಾ ಲಸಿಕೆ ನೀಡುವ ಮೂಲಕ ನಾವು ಸಹಾಯ ಮಾಡುತ್ತಿರಲಿಲ್ಲ.’ ಜೈಶಂಕರ್ ಅವರಿಗೆ ಮಾಲ್ಡೀವ್ಸ್‌ನಿಂದ ಕೇಳಿದ ಪ್ರಶ್ನೆಗೆ ಉತ್ತರನೀಡಿದರು. ಜೈಶಂಕರ್ ಅವರು ಇಲ್ಲಿ ನಡೆದ ‘ವೈ ಇಂಡಿಯಾ ಮ್ಯಾಟರ್ಸ್’ ಪುಸ್ತಕದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

೧. ಜೈಶಂಕರ್ ಮಾತು ಮುಂದುವರೆಸುತ್ತಾ, ಇತರ ದೇಶಗಳಿಗೆ ಅವರ ಅಗತ್ಯದ ಸಮಯದಲ್ಲಿ ನಾವು ಯಾವಾಗಲೂ ಸಹಾಯ ಮಾಡುತ್ತೇವೆ. ಬಿಕ್ಕಟ್ಟಿನ ಸಮಯದಲ್ಲಿ ಇತರ ದೇಶಗಳಿಗೆ ಸಹಾಯ ಮಾಡಲು ಭಾರತ ಯಾವಾಗಲೂ ಸಿದ್ಧವಾಗಿದೆ. ನಾವು ಪರಿಹಾರ ಸಾಮಗ್ರಿಗಳು, ಔಷಧಗಳು, ರಸಗೊಬ್ಬರಗಳು ಇತ್ಯಾದಿಗಳನ್ನು ಯುದ್ಧ ಪೀಡಿತ ದೇಶಗಳಿಗೆ ತಲುಪಿಸುತ್ತೇವೆ. ಇದಕ್ಕಾಗಿ ಜಗತ್ತು ನಮ್ಮನ್ನು ಹೊಗಳುತ್ತದೆ.

೨. ಕಳೆದ ಕೆಲವು ವರ್ಷಗಳಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ನಂತಹ ದೇಶಗಳಲ್ಲಿ ಭಾರತದ ಹೂಡಿಕೆ ವೇಗವಾಗಿ ಹೆಚ್ಚಾಗಿದೆ ಎಂದು ಜೈಶಂಕರ್ ಹೇಳಿದರು. ಇಂದು ನೆರೆಯ ದೇಶಗಳೊಂದಿಗೆ ಯಾವ ರೀತಿ ವ್ಯಾಪಾರದ ನಡೆಯುತ್ತಿದೆ ಅದು ಮುಖ್ಯವಾಗಿದೆ. ನೆರೆಯ ದೇಶಗಳೊಂದಿಗೆ ನಮ್ಮ ಸಂಬಂಧ ಸುಧಾರಿಸುತ್ತಿದೆ. ನಾವು ವ್ಯಾಪಾರಕ್ಕಾಗಿ ಬಾಂಗ್ಲಾದೇಶದ ಬಂದರುಗಳನ್ನು ಬಳಸುತ್ತಿದ್ದೇವೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳವನ್ನು ನೋಡಿ. ಉತ್ತಮ ಸಂಪರ್ಕಕ್ಕಾಗಿ ಇಲ್ಲಿ ರಸ್ತೆಗಳು ಮತ್ತು ರೈಲ್ವೆಗಳನ್ನು ನಿರ್ಮಿಸಿದ್ದೇವೆ. ೧೦ ವರ್ಷಗಳ ಹಿಂದೆ ಹೀಗಿರಲಿಲ್ಲ ಎಂದು ಹೇಳಿದರು.