ಕಾಶಿ ವಿಶ್ವನಾಥ ದೇವಸ್ಥಾನದ ೨ ಕಿಲೋಮೀಟರ್ ಪರಿಸರದಲ್ಲಿ ಮಾಂಸ ಮತ್ತು ಸಾರಾಯಿ ಅಂಗಡಿ ಮುಂದುವರಿಕೆ !

ಮಹಾನಗರಪಾಲಿಕೆಯ ಕಾರ್ಯಾಚರಣೆ ವಿಫಲ !

ವಾರಣಾಸಿ (ಉತ್ತರಪ್ರದೇಶ) – ಕಾಶಿ ವಿಶ್ವನಾಥ ದೇವಸ್ಥಾನದ 2 ಕಿ.ಮೀ ಪ್ರದೇಶದಲ್ಲಿ ಸಾರಾಯಿ ಮತ್ತು ಮಾಂಸ ಮಾರಾಟವನ್ನು ನಿಷೇಧಿಸುವ ಅಭಿಯಾನ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿತ್ತು; ಆದರೆ ಈ ಅಭಿಯಾನ ದಾಖಲೆಯಲ್ಲೇ ಬಾಕಿ ಇದೆ ಎಂಬುದು ಬೆಳಕಿಗೆ ಬಂದಿದೆ. ಮಹಾನಗರ ಪಾಲಿಕೆಯ ವ್ಯಪ್ತಿಗೆ ಬರುವ ಬೇನಿಯಾಬಾಗ, ನೈಸಡಕ ಮತ್ತು ದಾಲಮಂಡಿ ಈ ಸ್ಥಳಗಳಲ್ಲಿ ಸುಮಾರು ೧೦೦ ಕ್ಕಿಂತಲೂ ಹೆಚ್ಚಿನ ಮಾಂಸ ಮಾರಾಟ ಮಾಡುವ ಅಂಗಡಿಗಳು ಮತ್ತು ಅದರ ಮುಂದೆ ಹಸಿರು ಪರದೆ ಹಾಕಿ ಮಾಂಸ ಮಾರಾಟ ಮುಂದುವರೆಸಿರುವುದು ಬೆಳಕಿಗೆ ಬಂದಿದೆ.

೧. ಮಹಾನಗರ ಪಾಲಿಕೆ ಸಭಾಗೃಹದಲ್ಲಿ ಮಸೂದೆ ಅಂಗೀಕರಿಸಿ ೪೫ ದಿನ ಕಳೆದಿದೆ, ಆದರು ನ್ಯೂರೋಡ್, ದಾಲಮಂಡಿ, ಬೇನಿಯಬಾಗ, ರೇವಾಡಿ ತಾಲಾಭ, ಮದನಪುರ, ತಿಲಬಂಡೇಶ್ವರ, ಆಶಫಾಕನಗರ, ಸೋನಿಯಾ ಮುಂತಾದ ಪ್ರದೇಶದಲ್ಲಿ ಮೊದಲಿನಹಾಗೆ ಬಹಿರಂಗವಾಗಿ ಮಾಂಸ ಮತ್ತು ಸಾರಾಯಿ ಮಾರಾಟ ಮುಂದುವರೆದಿದೆ.

೨. ಮಸೂದೆ ಅಂಗೀಕಾರವಾದ ನಂತರ ಮಹಾನಗರ ಪಾಲಿಕೆ ಆಡಳಿತವು ಎರಡು ದಿನದಲ್ಲಿ ಬೇನಿಯಬಾಗ, ಹಾಡಾಸರಾಯಿ, ನ್ಯುರೊಡ್, ದಾಲಮಂಡಿ ಇಲ್ಲಿಯ ಅಂಗಡಿಗಳು ಮುಚ್ಚಿಸಿದ್ದರು, ಆದರೆ ಮಾರ್ಚ್ ೩ ರಂದು ಈ ಕಾರ್ಯಾಚರಣೆಯ ಪರಿಣಾಮ ಕಾಣಲಿಲ್ಲ. ಇಲ್ಲಿ ಮಧ್ಯಾಹ್ನ ಒಂದರಿಂದ ನ್ಯುರೊಡರಲ್ಲಿ ಲವಕುಶ ಹೋಟೆಲಿನ ಹತ್ತಿರ ಮಾಂಸದ ಅಂಗಡಿಗಳು ತೆರೆದವು. ಅಂಗಡಿಯ ಎದುರಿಗೆ ಬಟ್ಟೆಯ ಪರದೆ ಹಾಕಿದ್ದರು. ಅಂಗಡಿಯ ಹೊರಗೆ ನಿಂತಿರುವ ಅಂಗಡಿದಾರನು ಬರುವ ಪ್ರತಿಯೊಬ್ಬರನ್ನು ನೋಡುತ್ತಿದ್ದನು. ಆ ಸಮಯದಲ್ಲಿ ಅಂಗಡಿಯ ಹತ್ತಿರ ಕೆಲವು ಜನರು ನಿಂತಿದ್ದರು. ಅವರಿಗೆ ಮಾಂಸ ನೀಡುತ್ತಿದ್ದರು. ಮಧ್ಯಾಹ್ನ 1:30 ಗಂಟೆಗೆ ರೆವಾಡಿ ಕೆರೆಯ ರಸ್ತೆಯಲ್ಲಿ ಜನರು ಅಂಗಡಿಗಳಲ್ಲಿ ಮಾಂಸ ಖರೀದಿಸುತ್ತಿರುವುದು ಕಾಣುತಿತ್ತು. ಈ ಸ್ಥಳಗಳಲ್ಲಿ ವಾಹನಗಳು ನಿಲ್ಲಿಸಿರುವುದರಿಂದ ಸಾರಿಗೆಯಲ್ಲಿ ತೊಂದರೆ ನಿರ್ಮಾಣವಾಗಿತ್ತು.

೩. ಸಾರಾಯಿ ಅಂಗಡಿಗೆ ಅನುಮತಿಯನ್ನು ಅಬಕಾರಿ ಇಲಾಖೆಯಿಂದ ನೀಡುತ್ತಾರೆ, ಎಂದು ಮಹಾಪಾಲಿಕೆಯ ಅಧಿಕಾರಿಗಳು ಹೇಳಿದರು. ಈ ಅಂಗಡಿಗಳು ಮುಚ್ಚುವ ಪ್ರಸ್ತಾವ ಮಹಾಪಾಲಿಕೆಯಿಂದ ಸರಕಾರಕ್ಕೆ ಕಳುಹಿಸಿದ್ದಾರೆ. ಈ ಪ್ರಸ್ತಾವ ಅಂಗೀಕರಿಸಿದ ನಂತರ ಮಾಂಸ ಮಾರಾಟದ ಸಹಿತ ದೇವಸ್ಥಾನದ ೨ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರಾಯಿ ಮಾರಾಟದ ಮೇಲೆ ನಿಷೇಧ ಹೇರುವರು.

ಸಭಾಗೃಹದಲ್ಲಿ ಮಸೂದೆ ಅಂಗೀಕರಿಸಿದ ನಂತರ ಮಾಂಸ ಮಾರಾಟದ ಅಂಗಡಿಗಳು ಮುಚ್ಚಿದ್ದರು. ಅವುಗಳು ಮತ್ತೆ ತೆರೆದವರ ಮೇಲೆ ಕ್ರಮ ಕೈಗೊಳ್ಳುವೆವು. ಸಾರಾಯಿ ಮಾರಾಟದ ಅಂಗಡಿಗಳು ಮುಚ್ಚಿಸುವ ಅಧಿಕಾರ ಅಬಕಾರಿ ಇಲಾಖೆಯ ಬಳಿ ಇದೆ – ಡಾ. ಅಜಯ ಪ್ರತಾಪ ಸಿಂಹ , ಪಶು ವೈದ್ಯಕೀಯ ಅಧಿಕಾರಿ, ಮಹಾಪಾಲಿಕೆ

ದೇವಸ್ಥಾನದ ೨ ಕಿಲೋಮೀಟರ್ ಪ್ರದೇಶದಲ್ಲಿನ ಅಂಗಡಿಗಳ ಸಂಖ್ಯೆ

ಮಾಂಸ-ಪೊಲ್ಟ್ರಿ ಅಂಗಡಿಗಳು : ೧೦೫
ಮದ್ಯದ ಅಂಗಡಿಗಳು : ೩೭
ಮಾಂಸ ಮಾರಾಟ ನಡೆಸುವ ಹೋಟೆಲ್ಸ್ ಮತ್ತು ರೆಸ್ಟೋರೆಂಟ್ : ೪೫

ಸಂಪಾದಕೀಯ ನಿಲುವು

ಮಹಾನಗರ ಪಾಲಿಕೆಯಿಂದ ಕೇವಲ ತೋರಿಕೆಗಾಗಿ ಕ್ರಮ ಕೈಗೊಂಡಿದೆಯೇ ? ಸಮಸ್ಯೆಯನ್ನು ಬೇರು ಸಹಿತ ದೂರಗೊಳಿಸುವ ಬದಲು ತೋರಿಕೆಯ ಕ್ರಮ ಕೈಗೊಳ್ಳುವ ಸರಕಾರಕ್ಕೆ ಜನರು ಕಾನೂನು ಮಾರ್ಗದಿಂದ ವಿಚಾರಿಸಬೇಕು !