ಮುಸಲ್ಮಾನರ ಪಾಪಗಳಿಗೆ ಇಸ್ಲಾಂ ಹೊಣೆಯಲ್ಲ ! – ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ 

ನವದೆಹಲಿ – ಮುಸಲ್ಮಾನರ ಪಾಪಗಳಿಗೆ ಇಸ್ಲಾಂ ಧರ್ಮವನ್ನು ದೂಷಿಸಬೇಡಿ. ಅವರು ಮಾಡಿದ ಪಾಪಗಳಿಗೆ ಇಸ್ಲಾಂ ಹೊಣೆಯಲ್ಲ ಎಂದು ಮಾಜಿ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಹಾಗೂ ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ಹೇಳಿದ್ದಾರೆ. ಖುಸ್ರೋ ಫೌಂಡೇಶನ್ ನವ ದೆಹಲಿಯ ‘ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್’ನಲ್ಲಿ ಆಯೋಜಿಸಿದ್ದ ‘ಕ್ಯಾ ಹೈ ಗಝವಾ-ಎ-ಹಿಂದ್ ಕಿ ಹಖೀಕತ್?’ (ಗಝವಾ-ಎ- ಹಿಂದ ಎಂದರೇನು ?) ಈ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಗಝವಾ-ಎ-ಹಿಂದ ಎಂದರೆ ನಾಸ್ತಿಕರನ್ನು ಕೊಂದು ಭಾರತವನ್ನು ಇಸ್ಲಾಂಮೀಸ್ತಾನ ಮಾಡಲು ಕರೆ ನೀಡಿರುವ ಯುದ್ಧವಾಗಿದೆ. ಈ ಪುಸ್ತಕವೆಂದರೆ `ಗಝವಾ-ಎ-ಹಿಂದ್’ ಮೇಲೆ ಬರೆದ ಎಂಟು ಲೇಖನಗಳ ಸಂಗ್ರಹವಾಗಿದೆ. ಈ ಪುಸ್ತಕದ ಸಂಕಲನ ಮತ್ತು ಸಂಪಾದನೆಯನ್ನು ಡಾ. ಹಫೀಜುರ್ ರಹಮಾನ್ ಮಾಡಿದ್ದಾರೆ. ಈ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಅದನ್ನು ಬರೆದಿರುವ ನಾಲ್ಕು ಬರಹಗಾರರು ಉಪಸ್ಥಿತರಿದ್ದರು.

‘ಗಝವಾ-ಎ-ಹಿಂದ್’ ಈ ಸಂಕಲ್ಪನೆ ಮೋಸ ಮತ್ತು ಚೇಷ್ಟೆಯದ್ದಾಗುದೆ ! 

ಎಂ.ಜೆ. ಅಕ್ಬರ್ ಅವರು ಕುರಾನದಲ್ಲಿರುವ ಕೆಲವು ಸಂದರ್ಭಗಳನ್ನು ಉಲ್ಲೇಖಿಸುತ್ತಾ, ಕುರಾನನಲ್ಲಿ ನೀವು ನಿಮ್ಮ ಧರ್ಮವನ್ನು ಪಾಲಿಸಿರಿ ಎಂದು ಇದೆ. ಹೀಗಿರುವಾಗ ಧರ್ಮದ ಹೆಸರಿನಲ್ಲಿ ಯಾವುದೇ ದೇಶದ ಮೇಲೆ ವಿನಾಕಾರಣ ದಾಳಿ ನಡೆಸುವ ಪ್ರಶ್ನೆಯೇ ಎಲ್ಲಿ ಬರುತ್ತದೆ ? ಮಹಮ್ಮದ ಪೈಗಂಬರ ಇವರೂ ಅವರ ಕಠಿಣ ಕಾಲದಲ್ಲಿಯೂ ಎಂದಿಗೂ ಯುದ್ಧಕ್ಕಾಗಿ ಕರೆ ನೀಡಿಲ್ಲ. ಇಸ್ಲಾಂನಲ್ಲಿ ಗಿಡಗಳನ್ನು ಸುಡುವುದನ್ನು ಕೂಡ ನಿಷೇಧಿಸಿದೆ. ಒಂದು ಹದೀಸನಲ್ಲಿ `ಗಝವಾ-ಎ – ಹಿಂದ’ ಕಲ್ಪನೆ ಕೇವಲ ಮೋಸದಷ್ಟೇ ಅಲ್ಲ, ಚೇಷ್ಟೆಯದ್ದೂ ಆಗಿದೆ.

ಸಂಪಾದಕೀಯ ನಿಲುವು

ಜಗತ್ತಿನಾದ್ಯಂತ ಅನೇಕ ಕೆಟ್ಟ ವಿಷಯಗಳಿಗಾಗಿ ಮುಸ್ಲಿಂ ಸಮಾಜವು ಕುಖ್ಯಾತವಾಗಿದೆ. ‘ಹೀಗೇಕೆ?’, ಇದರ ಉತ್ತರವನ್ನು ಮುಸ್ಲಿಂ ವಿಚಾರವಂತರು ಕಂಡು ಹಿಡಿದು, ಅದಕ್ಕೆ ಪರಿಹಾರಗಳನ್ನು ಕಂಡುಹಿಡಿಯುವುದು ಅವಶ್ಯಕ!