ಸಿಕ್ಕ ಸಿಕ್ಕವರಿಗೆ ಡಾರ್ಲಿಂಗ್ ಹೇಳಿದರೆ ಕೇಸ್ ಬೀಳುತ್ತದೆ !

ಅಪರಿಚಿತ ಮಹಿಳೆಯನ್ನು ’ಡಾರ್ಲಿಂಗ್’ ಎಂದು ಕರೆದರೆ ಲೈಂಗಿಕ ಕಿರುಕುಳ ! – ಕೊಲಕಾತಾ ಹೈಕೋರ್ಟ್

ಕೊಲಕಾತಾ (ಬಂಗಾಳ) – ಅಪರಿಚಿತ ಮಹಿಳೆಯನ್ನು ’ಡಾರ್ಲಿಂಗ್’ ಎಂದು ಕರೆಯುವುದು ಲೈಂಗಿಕ ಕಿರುಕುಳ ಮತ್ತು ಸೆಕ್ಷನ್ ೩೫೪ (ಎ) ೧ ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೊಲಕಾತಾ ನ್ಯಾಯಾಲಯ ಪೋರ್ಟ್ ಬ್ಲೇರ್ ವಿಭಾಗೀಯ ಪೀಠವು ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಆರೋಪಿ ಜನಕರಾಮ್ ಗುಪ್ತಾ ಈತನು ಮಹಿಳಾ ಪೇದೆಯೊಬ್ಬರಿಗೆ ’ಡಾರ್ಲಿಂಗ್ ಚಲನ್ ನೀಡಲು ಬಂದಿದೆಯಾ ?’ ಎಂದು ಟಿಪ್ಪಣೆ ಮಾಡಿದ್ದ. ಈ ಪ್ರಕರಣ ನ್ಯಾಯಾಲಯಕ್ಕೆ ಹೋಗಿತ್ತು. ಇದು ಯಾವುದೇ ಮಹಿಳಾ ಪೊಲೀಸರಿಗೆ ಮಾತ್ರವಲ್ಲ, ಎಲ್ಲ ಮಹಿಳೆಯ ಲೈಂಗಿಕ ಕಿರುಕುಳವಾಗಿದೆ ಎಂದು ನ್ಯಾಯಾಲಯ ಹೇಳಿದೆ. (ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ನೇರವಾಗಿ ಹೇಳುವ ಧೈರ್ಯ ಮಾಡುವವರಿಗೆ ಪೊಲೀಸರ ಭಯವೇ ಇಲ್ಲ, ಎಂಬುದು ಗಮನಕ್ಕೆ ಬರುತ್ತದೆ ! ಪೊಲೀಸರಿಗೆ ನಾಚಿಗ್ಗೇಡು ! – ಸಂಪಾದಕರು)

ಸಂಪಾದಕೀಯ ನಿಲುವು

ಅಪರಿಚಿತ ಮಹಿಳೆ ಕುರಿತು ಈ ರೀತಿ ಹೇಳಿಕೆ ನೀಡುತ್ತಿರುವುದು ಸಮಾಜದ ನೈತಿಕತೆ ದಿನದಿಂದ ದಿನಕ್ಕೆ ಹದಗೆಡುತ್ತಿರುವುದರ ಸಂಕೇತವಾಗಿದೆ !