ವಿವಾಹಿತೆ ಮುಸ್ಲಿಂ ಮಹಿಳೆಯು ಹಿಂದೂ ವ್ಯಕ್ತಿಯೊಂದಿಗೆ ವಿವಾಹವಾಗದೆ ಜೊತೆಗಿದ್ದರಿಂದ ಭದ್ರತೆ ಇಲ್ಲ ! – ಅಲಾಹಾಬಾದ ಹೈಕೋರ್ಟ್

ಪ್ರಯಾಗರಾಜ್ (ಉತ್ತರ ಪ್ರದೇಶ) – ವಿವಾಹಿತ ಮುಸ್ಲಿಂ ಮಹಿಳೆ ಬೇರೆ ಯಾವುದೇ ವ್ಯಕ್ತಿ ಅಥವಾ ಹಿಂದೂ ವ್ಯಕ್ತಿಯೊಂದಿಗೆ ವಾಸಿಸುವಂತಿಲ್ಲ. ಶರಿಯಾ ಪ್ರಕಾರ, ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿ (ಮದುವೆಯಾಗದೇ ಒಟ್ಟಿಗೆ ಇರುವುದು) ಇರುವುದು ವ್ಯಭಿಚಾರ ಅಥವಾ ‘ಹರಾಂ'(ಇಸ್ಲಾಂ ವಿರೋಧಿ)ಯಾಗಿದೆ, ಎಂದು ಅಲಹಾಬಾದ್ ಹೈಕೋರ್ಟ್ ಹಿಂದೂ ಪುರುಷನೊಂದಿಗೆ ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿ ವಾಸಿಸುವ ಮುಸ್ಲಿಂ ವಿವಾಹಿತ ಮಹಿಳೆಗೆ ರಕ್ಷಣೆ ನೀಡಲು ನಿರಾಕರಿಸಿದೆ, ತನಗೆ ಮತ್ತು ತನ್ನ ಪ್ರಿಯಕರನಿಗೆ ಅಪಾಯವಿದೆ ಎಂದು ಮಹಿಳೆ ಹೇಳಿದ್ದಳು. ತನ್ನ ತಂದೆ ಮತ್ತು ಸಂಬಂಧಿಕರಿಂದ ಜೀವಬೆದರಿಕೆ ಇದೆಯೆಂದು ಅವಳು ಭದ್ರತೆಯನ್ನು ಕೇಳಿದ್ದಳು.

ನ್ಯಾಯಮೂರ್ತಿ ರೆನು ಅಗ್ರವಾಲ ಇವರ ವಿಭಾಗೀಯ ಪೀಠವು, ಮಹಿಳೆಯು ಮತಾಂತರಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಅಥವಾ ಪತಿಯಿಂದ ಬೇರ್ಪಟ್ಟಿಲ್ಲ ಹಾಗಾಗಿ ಅವಳಿಗೆ ಭದ್ರತೆ ನೀಡಲು ಸಾಧ್ಯವಿಲ್ಲ. ಮಹಿಳೆ ತನ್ನ ಪತಿಯಿಂದ ತಲಾಕ ನೀಡಲು ಯಾವುದೇ ಕಾನೂನು ಪುರಾವೆಯನ್ನು ಪಡೆದಿಲ್ಲ. ಆದರೂ ಮಹಿಳೆ ‘ಲಿವ್ ಇನ್ ರಿಲೇಶನ್ ಶಿಪ್’ ನಲ್ಲಿ ಇದ್ದಾರೆ ಎಂದು ಹೇಳಿದೆ.