ತಪ್ಪು ಪ್ರಶ್ನೆಪತ್ರಿಕೆ ನೀಡಿದ್ದರಿಂದ ವಿದ್ಯಾರ್ಥಿಗಳು ನಾಲ್ಕೂವರೆ ಗಂಟೆಗಳ ಕಾಲ ಕಾಯಬೇಕಾಯಿತು !

ಮುಂಬಯಿ ವಿಶ್ವವಿದ್ಯಾಲಯದ ಎಂ.ಎ ಪರೀಕ್ಷೆಯಲ್ಲಿನ ಘಟನೆ !

ಮುಂಬಯಿ – ಮುಂಬಯಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ದ್ವಿತೀಯ ವರ್ಷದ ಎಂಎ ಪರೀಕ್ಷೆಯ ಮೂರನೇ ಸತ್ರದ ಪರೀಕ್ಷೆಯಲ್ಲಿ ತಪ್ಪು ಪ್ರಶ್ನೆಗಳು ಬಂದಿರುವುದರಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ. ಮಾರ್ಚ್ 1 ರಂದು, ‘ಭಾರತದ ಅಂತರರಾಷ್ಟ್ರೀಯ ನೀತಿ’ ಈ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ` ಭಾರತದ ಪಕ್ಕದಲ್ಲಿರುವ ರಾಷ್ಟ್ರಗಳ ನಿಲುವು’ ಈ ವಿಷಯದ ಪ್ರಶ್ನೆಯನ್ನು ಕೇಳಲಾಗಿತ್ತು. ಪ್ರತ್ಯಕ್ಷದಲ್ಲಿ `ಭಾರತದ ಪಕ್ಕದಲ್ಲಿರುವ ರಾಷ್ಟ್ರಗಳ ನಿಲುವು’ ಈ ವಿಷಯದ ಪರೀಕ್ಷೆ ಫೆಬ್ರುವರಿ 26 ರಂದು ಬಂದಿತ್ತು. ಮಾರ್ಚ 1 ರಂದು ಮಧ್ಯಾಹ್ನ 2.30 ರಿಂದ ಸಾಯಂಕಾಲ 5 ಗಂಟೆಯವರೆಗೆ ಪರೀಕ್ಷೆಯಿತ್ತು. ಆದರೆ ವಿಶ್ವವಿದ್ಯಾಲಯದ ತಪ್ಪಿನಿಂದಾಗಿ ಮಧ್ಯಾಹ್ನ 4.30 ಗಂಟೆಗೆ ವಿದ್ಯಾರ್ಥಿಗಳಿಗೆ ಸರಿಪಡಿಸಿದ ಪ್ರಶ್ನೆಪತ್ರಿಕೆ ವಿಶ್ವವಿದ್ಯಾಲಯವು ನೀಡಿದೆ. ಸಾಯಂಕಾಲ 7 ಗಂಟೆಯ ವರೆಗೆ ಪರೀಕ್ಷೆ ತೆಗೆದುಕೊಳ್ಳಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ನಾಲ್ಕೂವರೆ ಗಂಟೆ ಪರೀಕ್ಷಾ ಕೇಂದ್ರದಲ್ಲಿ ಕಾಯಬೇಕಾಯಿತು.

ಎಲ್ಲಾ ಅಧಿಕಾರಿಗಳು ಮತ್ತು ಶಿಕ್ಷಕರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಾಗ ನಿದ್ರಿಸಿರುತ್ತಾರೆಯೇ?- ಸುಧಾಕರ ತಾಂಬೋಳಿ, ಮನಸೆ

ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾರೆ; ಆದರೆ ಎಲ್ಲಾ ಅಧಿಕಾರಿಗಳು ಮತ್ತು ಶಿಕ್ಷಕರು ನಿದ್ದೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುತ್ತಾರೆಯೇ? ಉಪಕುಲಪತಿಗಳು ಪರೀಕ್ಷೆಯ ಕೆಲಸಗಳನ್ನು ಗಂಭೀರತೆಯಿಂದ ಗಮನ ಹರಿಸಬೇಕಾದ ಸಮಯ ಬಂದಿದೆ.

ಸಂಪಾದಕೀಯ ನಿಲುವು

4 ದಿನಗಳ ಹಿಂದೆ ನಡೆದ ಪರೀಕ್ಷೆಯ ಪ್ರಶ್ನೆಗಳು ಪುನಃ ಹೊಸ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ಹೇಗೆ ಬರುತ್ತವೆ? ಶಿಕ್ಷಣ ಕ್ಷೇತ್ರದಲ್ಲಿ ಇಂತಹ ನಿರ್ಲಕ್ಷತೆ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು.!