ಭಾರತ ಸರ್ಕಾರದ ಆಕ್ಷೇಪಣೆಯ ಬಳಿಕ ಗೂಗಲ್ ‘ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದ್ದ ಭಾರತೀಯ ಸಂಸ್ಥೆಗಳ 10 ಅಪ್ಲಿಕೇಶನ್‌ಗಳಿಂದ ಪುನಃ ಕಾರ್ಯಾಚರಣೆ.

ನವ ದೆಹಲಿ – ಕೇಂದ್ರ ಸರ್ಕಾರದ ಆಕ್ಷೇಪಣೆಯ ಬಳಿಕ ಗೂಗಲ ಮಾರ್ಚ್ 1 ರಂದು ‘ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದ್ದ ಭಾರತೀಯ ಸಂಸ್ಥೆಗಳ 10 ಅಪ್ಲಿಕೇಶನ್‌ಗಳನ್ನು ಗೂಗಲ್ ಮರಳಿ ಪ್ರಾರಂಭಿಸಿದೆ.

 1. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ.ಅಶ್ವಿನಿ ವೈಷ್ಣವ ಮಾತನಾಡಿ, ‘ಇನ್ ಆಪ್ ಪೇಮೆಂಟ್’ಗೆ ಸಂದರ್ಭದಲ್ಲಿ ಗೂಗಲ ಭಾರತೀಯ ಆಪ್‌ಗಳನ್ನು ತೆಗೆದುಹಾಕಲು ಅನುಮತಿ ನೀಡಲಾಗುವುದಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಗೂಗಲ ಮತ್ತು ಸ್ಟಾರ್ಟ ಅಪ್ (ಹೊಸ ಉದ್ಯಮಗಳನ್ನು ಪ್ರಾರಂಭಿಸುವವರು) ಇವರ ಪ್ರತಿನಿಧಿಗಳನ್ನು `ಪ್ಲೇ ಸ್ಟೋರ’ನಿಂದ ತೆಗೆದುಹಾಕುವ ಅಪ್ಲಿಕೇಶನಗಳಿಗೆ ಸಂಬಂಧಿಸಿದಂತೆ ಮುಂದಿನ ವಾರ ಸಭೆಯನ್ನು ಕರೆಯಲಾಗಿದೆ.

 2. ಅಪ್ಲಿಕೇಶನ್ ಹಣ ಪಾವತಿಸುವ ನೀತಿಯನ್ನು ಉಲ್ಲೇಖಿಸಿ, ಗೂಗಲ್ ಮಾರ್ಚ್ 1 ರಂದು ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿತ್ತು. ಗೂಗಲ್ , ಯಾವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆಯೋ, ಅವರಿಗೆ 3 ವರ್ಷಗಳ ಕಾಲಾವಧಿಯನ್ನು ನೀಡಲಾಗಿತ್ತು. ಆದರೆ ಅವರು ನಮ್ಮ ನಿಲುವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಎಂದು ಹೇಳಿದೆ

3.ಈ ವಿಷಯದಲ್ಲಿ ಕೇಂದ್ರ ಸಚಿವ ವೈಷ್ಣವ್ ಮಾತನಾಡಿ, ಭಾರತದ ನೀತಿ ಅತ್ಯಂತ ಸ್ಪಷ್ಟವಾಗಿದೆ . ನಮ್ಮ ಸ್ಟಾರ್ಟ ಅಪ್ ಗಳಿಗೆ ಆವಶ್ಯಕವಿರುವ ಸಂರಕ್ಷಣೆ ಸಿಗುತ್ತದೆ. ಗೂಗಲ್ ಇದರ ವಿಚಾರ ಮಾಡುತ್ತದೆ ಎನ್ನುವ ನಂಬಿಕೆ ನನಗಿದೆ. ನಮ್ಮ ಬಳಿ ಹೆಚ್ಚುತ್ತಿರುವ ಸ್ಟಾರ್ಟ ಅಪ್ ಯೋಜನೆಗಳಿವೆ ಮತ್ತು ಅವುಗಳ ಹಿತಗಳ ಸಂರಕ್ಷಣೆಯನ್ನು ಮಾಡುವುದು ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

4. ಗೂಗಲ್ ಅಪ್ಲಿಕೇಶನ ಮೇಲೆ ಶೇ. 11 ರಿಂದ ಶೇ. 26 ಶುಲ್ಕವನ್ನು ವಿಧಿಸುತ್ತದೆ, ಇದನ್ನು ಭಾರತೀಯ ಸ್ಟಾರ್ಟ್‌ಅಪ್‌ಗಳು ವಿರೋಧಿಸುತ್ತವೆ. ಶೇ. 15 ರಿಂದ ಶೇ. 30 ರಷ್ಟು ಇರುವ ಹಿಂದಿನ ಶುಲ್ಕ ರಚನೆಯನ್ನು ರದ್ದುಗೊಳಿಸುವ ಪ್ರಾಧಿಕಾರದ ಆದೇಶದ ನಂತರ ಗೂಗಲ್ ಈ ಶುಲ್ಕವನ್ನು ವಿಧಿಸಿದೆ.

5. ಹಲವು ಸಂಸ್ಥೆಗಳು ಗೂಗಲ್ ವಿರುದ್ಧ ಶುಲ್ಕದ ವಿರುದ್ಧ ದೂರು ನೀಡಿದ್ದರು. ಭಾರತೀಯ ಸ್ಪರ್ಧಾತ್ಮಕ ಆಯೋಗ ಕಳೆದ ತಿಂಗಳು ಮೇ ತಿಂಗಳಿನಲ್ಲಿ ಇದರ ವಿರುದ್ಧ ತನಿಖೆಗೆ ಆದೇಶ ನೀಡಿತ್ತು.

6. ಗೂಗಲ್ ಭಾರತ ಮ್ಯಾಟ್ರೊಮೊನಿ, ಶಾದಿ ಡಾಟ್ ಕಾಮ್, ನೌಕರಿ ಡಾಟ್ ಕಾಮ್, 99 ಎಕರ್ಸ ಡಾಟ ಕಾಮ್, ಅಲ್ಟ್, ಸ್ಟೇಜ, ಅಹಾ, ಟುಲಿ ಮಾಡ್ಲಿ, ಕುಕೂ ಎಫ್ ಎಮ್. ಕ್ವಿಕ್ ಮತ್ತು ಎಫ್.ಅಂಡ್ ಎಫ್. ನಂತಹ ಈ ಆಪ್ ಗಳನ್ನು ತೆಗೆದುಹಾಕಿತ್ತು.