ಅಮೇರಿಕಾದ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ 33 ಸಂಸದರಿಂದ ಅಧ್ಯಕ್ಷ ಜೋ ಬೈಡನರಿಗೆ ಪತ್ರದ ಮೂಲಕ ಆಗ್ರಹ !
ವಾಷಿಂಗ್ಟನ (ಅಮೇರಿಕಾ) – ಅಮೇರಿಕೆಯ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ 33 ಸಂಸದರ ಒಂದು ಗುಂಪು ರಾಷ್ಟ್ರಾಧ್ಯಕ್ಷರಾದ ಜೋಬೈಡನ್ ಮತ್ತು ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರಿಗೆ ಪತ್ರ ಬರೆದು, ‘ಪಾಕಿಸ್ತಾನದ ಚುನಾವಣೆಯಲ್ಲಿ ನಡೆದಿರುವ ಅವ್ಯವಹಾರಗಳನ್ನು ನಂಬಲರ್ಹ ಮತ್ತು ಪಾರದರ್ಶಕ ರೀತಿಯಲ್ಲಿ ತನಿಖೆಯಾಗುವವರೆಗೆ ಪಾಕಿಸ್ತಾನದ ಹೊಸ ಸರಕಾರಕ್ಕೆ ಮಾನ್ಯತೆ ನೀಡಬೇಡಿರಿ’, ಎಂದು ಆಗ್ರಹಿಸಿದೆ. ಈ ಸಂಸದರಲ್ಲಿ ಮುಸಲ್ಮಾನ ಸಂಸದ ರಶಿದಾ ತಲೆಬ, ಇಲ್ಹಾನ ಉಮರ ಮತ್ತು ಆಂದ್ರೆ ಕಾರ್ಸನ ಇವರ ಸಮಾವೇಶವಿದೆ. ಹಾಗೆಯೇ ಭಾರತೀಯ ವಂಶದ ಸಂಸದ ಪ್ರಮಿಳಾ ಜಯಪಾಲ ಇವರ ಹಸ್ತಾಕ್ಷರವಿದೆ.
1. ಸಂಸದರ ಗುಂಪು ಮಾತನಾಡಿ, ‘ಈ ರೀತಿಯ ಆವಶ್ಯಕವಾಗಿರುವ ಹೆಜ್ಜೆಯನ್ನಿಡದೇ ಪಾಕಿಸ್ತಾನಿ ಅಧಿಕಾರಿಗಳ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ನಿಲ್ಲುವುದಿಲ್ಲ. ಅವರ ಇಂತಹ ನಡವಳಿಕೆಯಿಂದ ದೇಶದ ನಾಗರಿಕರ ಪ್ರಜಾಸತ್ತಾತ್ಮಕ ಇಚ್ಛಾಶಕ್ತಿ ದುರ್ಬಲಗೊಳ್ಳಬಹುದು’ ಎಂದು ಹೇಳಿದೆ. ಅಲ್ಲದೇ ರಾಜಕೀಯ ಬಂಧನದಲ್ಲಿರುವ ಜನರಿಗೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ.
2. ಪಾಕಿಸ್ತಾನದ ರಾಜಕೀಯ ಪಕ್ಷಗಳು ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ನಡೆದ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಅನೇಕ ದಾಖಲೆಗಳನ್ನು ಸಲ್ಲಿಸಿದೆ. ಇಮ್ರಾನ ಖಾನ ಇವರ `ಪಿಟಿಐ’ ಪಕ್ಷವೂ ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಪತ್ರ ಬರೆದಿದೆ.
US Lawmakers Urge Biden To Withhold Recognition Of Pakistan Govt Until ‘Credible’ Probe Of Poll Interference#US #PakistanElections2024 #JoeBidenhttps://t.co/XYphKPdSb0
— ABP LIVE (@abplive) March 1, 2024
ಸಂಪಾದಕೀಯ ನಿಲುವುಇಂತಹ ಆಗ್ರಹ ಮಾಡುವ ಅಮೇರಿಕೆಯಲ್ಲಿರುವ ಆಡಳಿತಪಕ್ಷದ ಸಂಸದರು ಪಾಕಿಸ್ತಾನದಲ್ಲಿರುವ ಹಿಂದೂಗಳ ಮೇಲಾಗುವ ದೌರ್ಜನ್ಯಗಳ ಪ್ರಕರಣದಲ್ಲಿ ಇಂತಹ ಆಗ್ರಹವನ್ನೇಕೆ ಮಾಡುವುದಿಲ್ಲ? |