ದೇವಸ್ಥಾನಗಳನ್ನು ನಿರ್ಮಿಸುವುದೆಂದರೆ ಸಾರ್ವಜನಿಕ ಭೂಮಿಯನ್ನು ಕಬಳಿಸುವ ಮಾರ್ಗ! – ಗುಜರಾತ ಉಚ್ಚ ನ್ಯಾಯಾಲಯ

ನಗರ ಯೋಜನೆಯಡಿ ಪ್ರಸ್ತಾಪಿಸಿರುವ ರಸ್ತೆಗಾಗಿ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಿರುವ ದೇವಸ್ಥಾನಗಳನ್ನು ಕೆಡಹುವ ಸಾಧ್ಯತೆ ಇದೆ.

ನವದೆಹಲಿ – ದೇವಸ್ಥಾನಗಳನ್ನು ನಿರ್ಮಿಸುವುದು ಭಾರತದಲ್ಲಿ ಸಾರ್ವಜನಿಕ ಭೂಮಿಯನ್ನು ಕಬಳಿಸುವ ಮತ್ತೊಂದು ಮಾರ್ಗವಾಗಿದೆಯೆಂದು ಕರ್ಣಾವತಿಯ ಕೆಲವು ಸ್ಥಳೀಯ ಹಿಂದೂಗಳು ಸಲ್ಲಿಸಿದ ಒಂದುಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಗುಜರಾತ ಉಚ್ಚ ನ್ಯಾಯಾಲಯವು ಹೇಳಿದೆ. ಮನವಿಯಲ್ಲಿ ಆಡಳಿತದ ವಿರುದ್ಧ ನಗರ ಯೋಜನೆಯ ಅಡಿಯಲ್ಲಿ ಸಾರ್ವಜನಿಕ ರಸ್ತೆಯನ್ನು ನಿರ್ಮಿಸಲು ದೇವಸ್ಥಾನಗಳನ್ನು ಕೆಡವಲಾಗಿದೆ ಎಂದು ಹೇಳಲಾಗಿತ್ತು.

1. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರವಾಲ ಮಾತನಾಡಿ, ಈ ರೀತಿ ಜನರು ಎಲ್ಲರಿಗೂ ಭಾವನಾತ್ಮಕ ಮಟ್ಟದಲ್ಲಿ ‘ಬ್ಲಾಕ್‌ಮೇಲ್’ ಮಾಡುತ್ತಾರೆ

 2. ಈ ಪ್ರಕರಣದಲ್ಲಿ 93 ಮನೆಗಳ ಜನರು ಈ ಪ್ರದೇಶದಲ್ಲಿ ನಗರ ಯೋಜನೆಯನುಸಾರ ನಡೆಯುತ್ತಿರುವ ರಸ್ತೆಗೆ ವಿರೋಧಿಸಿದ್ದಾರೆ. ಈ ರಸ್ತೆಯ ಕಾರ್ಯಕ್ಕೆ ನೀಡಿರುವ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮಹಾನಗರಪಾಲಿಕೆಯು ನ್ಯಾಯಾಲಯಕ್ಕೆ ಈ ನಗರ ಯೋಜನೆಯಲ್ಲಿ ಒಬ್ಬ ವ್ಯಕ್ತಿಯ ಮನೆಯನ್ನೂ ಕೆಡವಲಾಗುವುದಿಲ್ಲ ಎಂದು ತಿಳಿಸಿದೆ.

3. ಸ್ಥಳೀಯ ನಾಗರಿಕರು ಮಾತ್ರ ಉದ್ದೇಶಿತ ರಸ್ತೆಯ ಮಾರ್ಗದಲ್ಲಿ ಬರುವ ದೇವಸ್ಥಾನದ ರಕ್ಷಣೆಗೆ ಮುಂದೆ ಬಂದಿದ್ದಾರೆ. ಈ ಮಂದಿರವನ್ನು ನಾವು ಹಣವನ್ನು ಸಂಗ್ರಹಿಸಿ ಕಟ್ಟಿದ್ದರಿಂದ ಅದರೊಂದಿಗೆ ನಮ್ಮ ಭಾವನಾಕತ್ಮಕತೆ ಹೆಚ್ಚಿದೆ ಎಂದು ಅವರ ಹೇಳಿಕೆಯಾಗಿದೆ.

 4. ನ್ಯಾಯಮೂರ್ತಿಗಳು ಮಾತನಾಡಿ, ಯಾವ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆಯೋ, ಅದು ದೂರುದಾರರ ಮಾಲೀಕತ್ವದ ಜಾಗೆಯಾಗಿರುವುದಿಲ್ಲ. ನಿಮ್ಮ ಮನೆಯ ಒಂದು ಕೋಣೆಯಲ್ಲಿ ದೇವಸ್ಥಾನವನ್ನು ನಿರ್ಮಿಸಿರಿ. ಇಲ್ಲವಾದರೆ ದೇವಸ್ಥಾನವನ್ನು ಕೆಡವಲಾಗುವುದು ಎಂದು ಅಂತಿಮ ಆದೇಶವನ್ನು ಈ ಸಮಯದಲ್ಲಿ ನೀಡಿದ್ದಾರೆ. (ಅಲ್ಪಸಂಖ್ಯಾತಕರ ಪ್ರಾರ್ಥನಾಸ್ಥಳಗಳ ವಿರುದ್ಧ ಇಂತಹ ಆದೇಶವನ್ನು ನೀಡಿದ್ದರೆ, ಇಲ್ಲಿಯವರೆಗೆ ಸಂಪೂರ್ಣ ಕರ್ಣಾವತಿ ನಗರದಲ್ಲಿ ಏನಾಗುತ್ತಿತ್ತು ಎನ್ನುವ ಪ್ರಶ್ನೆ ಸಾಮಾನ್ಯ ಜನತೆಗೆ ಬೀಳುತ್ತಿತ್ತು- ಸಂಪಾದಕರು) ಈ ಪ್ರಕರಣದಲ್ಲಿ ಈಗ ಮುಂದಿನ ವಿಚಾರಣೆ ಮಾರ್ಚ 14 ರಂದು ನಡೆಯಲಿದೆ.

ಸಂಪಾದಕೀಯ ನಿಲುವು

ಹಿಂದೂಗಳ ದೇವಸ್ಥಾನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ್ದರೆ, ಹಿಂದೂಗಳು ಯಾವಾಗಲೂ ತಿಳುವಳಿಕೆಯಿಂದ ನಡೆದುಕೊಂಡು ಅದನ್ನು ಸ್ಥಳಾಂತರಗೊಳಿಸಲು ಸಿದ್ಧರಾಗಿರುತ್ತಾರೆ. ಮತ್ತೊಂದೆಡೆ, ದೇಶದ ಬಹುತೇಕ ನಗರಗಳಲ್ಲಿ, ಅನೇಕ ಸ್ಥಳಗಳಲ್ಲಿ ರಸ್ತೆಯ ಮಧ್ಯಗಳಲ್ಲಿಯೇ ದುರ್ಗಾಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ ಆಡಳಿತ ಅದನ್ನು ಸಮಯವಿರುವಾಗಲೇ ವಿರೋಧಿಸುವ ಧೈರ್ಯವನ್ನು ತೋರಿಸುವುದಿಲ್ಲ. ಇದು ವಾಸ್ತವಸ್ಥಿತಿಯಾಗಿದೆ. ನ್ಯಾಯಾಲಯವು ಇಂತಹ ಘಟನೆಗಳ ಕಡೆಯೂ ಗಮನ ಹರಿಸಬೇಕು, ಎಂದು ಜನಸಾಮಾನ್ಯರ ಅಪೇಕ್ಷೆಯಾಗಿದೆ.