ದಕ್ಷಿಣ ಏಷ್ಯಾದ ‘ಅತಿದೊಡ್ಡ’ ರಕ್ಷಣಾ ಕಾರ್ಖಾನೆ !
ಇಸ್ಲಾಮಾಬಾದ್ – ಉತ್ತರ ಪ್ರದೇಶದ ಕಾನ್ಪುರದಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆಯನ್ನು ನಿರ್ಮಿಸಲಾಗಿದೆ. ಇದು ದಕ್ಷಿಣ ಏಷ್ಯಾದ ಅತಿದೊಡ್ಡ ರಕ್ಷಣಾ ಕಾರ್ಖಾನೆಯಾಗಿದೆ ಮತ್ತು ಭಾರತದ ರಕ್ಷಣಾ ಅವಶ್ಯಕತೆಗಳೊಂದಿಗೆ ಜಾಗತಿಕ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ. 500 ಎಕರೆಯಲ್ಲಿ ಹರಡಿರುವ ಈ ಕಾರ್ಖಾನೆಯಲ್ಲಿ ‘ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್’ ಸಂಸ್ಥೆ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇದು ದಕ್ಷಿಣ ಏಷ್ಯಾದ ಅತಿದೊಡ್ಡ ಕಾರ್ಖಾನೆಯಾಗಿದೆ. ಫೆಬ್ರವರಿ 26 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯೋಜನೆಯನ್ನು ಉದ್ಘಾಟಿಸಿದರು. ಇದರಲ್ಲಿ ಕ್ಷಿಪಣಿಗಳೂ ತಯಾರಿಸಲಾಗುವುದು. ಈ ಕಾರ್ಖಾನೆಯಲ್ಲಿ ಸಣ್ಣ ‘ಕ್ಯಾಲಿಬರ್ ಬುಲೆಟ್’ಗಳನ್ನು ಆರಂಭಿಸಲಾಗಿದೆ. ಅದಾನಿ ಗ್ರೂಪ್ ಅಂದಾಜಿನ ಪ್ರಕಾರ, ಇದು ಭಾರತದ ಅವಶ್ಯಕತೆಯ 25 ಪ್ರತಿಶತ ಮಾತ್ರ, ಇದು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ. ಇದನ್ನು ನೋಡಿ ಪಾಕಿಸ್ತಾನದ ತಜ್ಞರು ಬೆಚ್ಚಿಬಿದ್ದಿದ್ದಾರೆ.
ಪಾಕಿಸ್ತಾನಿ ಪತ್ರಕರ್ತ ಕಮರ್ ಚೀಮಾ ಮಾತನಾಡಿ, ಪಾಕಿಸ್ತಾನವು ಭಾರತದ ವಿಮಾನವನ್ನು ಹೊಡೆದುರುಳಿಸಿದ ನಂತರ ಭಾರತವು ತನ್ನ ರಕ್ಷಣೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಭಾರತ ಈಗ ಮನೆಯಲ್ಲಿಯೇ ಡ್ರೋನ್‌ಗಳನ್ನು ತಯಾರಿಸುವುದಿದೆ. ಭಾರತವು ಎರಡು ರಂಗಗಳಲ್ಲಿ ಯುದ್ಧದ ಸಿದ್ಧತೆಯಲ್ಲಿದೆ. ಭಾರತವು ಸ್ವದೇಶಿಯಲ್ಲಿ ಕೆಲಸ ಮಾಡುತ್ತಿದೆ. ತನಗಾಗಿ ಮಾತ್ರವಲ್ಲದೆ ರಫ್ತಿಗೂ ಕೆಲಸ ಮಾಡುತ್ತಿದೆ.