ಸಂದೇಶಖಾಲಿ ಪ್ರಕರಣದ ಕುರಿತು ಪ್ರತಿಭಟನೆಗೆ ಬಿಜೆಪಿಗೆ ಕೊಲಕಾತಾ ಹೈಕೋರ್ಟ್ ನಿಂದ ಅನುಮತಿ !

ಪ್ರಮುಖ ಆರೋಪಿ ಶಹಜಹಾನ್ ಶೇಖ್‌ಗೆ ಮುಂದಿನ ವಿಚಾರಣೆಗೆ ಹಾಜರಿರಲು ಆದೇಶ !

ಕೊಲಕಾತಾ (ಬಂಗಾಳ) – ಸಂದೇಶಖಾಲಿ ಪ್ರಕರಣದಲ್ಲಿ ಕೋಲಕಾತಾ ಉಚ್ಚ ನ್ಯಾಯಾಲಯವು ಭಾಜಪಗೆ ಕೊಲಕಾತಾದ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದೆ. ಈ ಆಂದೋಲನವು ಫೆಬ್ರವರಿ ೨೮ ಮತ್ತು ೨೯ ರಂದು ಇಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಯ ಕೆಳಗೆ ಈ ಆಂದೋಲನವು ನಡೆಯುತ್ತಿದೆ. ಆಂದೋಲನದ ಸಂದರ್ಭದಲ್ಲಿ ಧ್ವನಿವರ್ಧಕ ವ್ಯವಸ್ಥೆಯನ್ನು ಬಳಸಬಾರದು ಮತ್ತು ೧೫೦ ಕ್ಕಿಂತ ಹೆಚ್ಚು ಜನರು ಸೇರಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಸಂದೇಶಖಾಲಿಯ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಹಿಂದೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು ಹಿಂದೂಗಳ ಭೂಮಿಯನ್ನು ಕಬಳಿಸಿದ್ದಾನೆ. ಈ ವಿಷಯದಲ್ಲಿ ಧ್ವನಿ ಎತ್ತಲು ಭಾಜಪ ಪ್ರತಿಭಟನೆಗೆ ನಿರ್ಧರಿಸಿತ್ತು; ಆದರೆ ತೃಣಮೂಲ ಕಾಂಗ್ರೆಸ್ ಸರಕಾರ ಈ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ ಎಂದು ಭಾಜಪ ಆರೋಪಿಸಿತ್ತು. ಇದರ ಬೆನ್ನಲ್ಲೇ ಭಾಜಪ ಹೈಕೋರ್ಟ್ ಮೆಟ್ಟಿಲೇರಿತ್ತು.

(ಸೌಜನ್ಯ – DD News)

೧. ಸಂದೇಶಖಾಲಿಯಲ್ಲಿ ೪ ವರ್ಷಗಳ ಹಿಂದೆ ಮಹಿಳೆಯರ ಮೇಲಿನ ದೌರ್ಜನ್ಯದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು; ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿದೆ.

೨. ಲೈಂಗಿಕ ಕಿರುಕುಳವನ್ನು ಒಳಗೊಂಡ ೪೨ ಪ್ರಕರಣಗಳಿವೆ; ಆದರೆ ಆರೋಪ ಪಟ್ಟಿ ಸಲ್ಲಿಸಲು ೪ ವರ್ಷ ಬೇಕಾಯಿತು. ಮುಂದಿನ ವಿಚಾರಣೆಯನ್ನು ಮಾರ್ಚ್ ೪ ರಂದು ನಡೆಸಲಾಗುವುದು. ಈ ವೇಳೆ ಸಿಬಿಐ, ಇಡಿ (ಜಾರಿ ನಿರ್ದೇಶನಾಲಯ), ಶಾಹಜಹಾನ್ ಶೇಖ್, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಬಂಗಾಳ ಸರಕಾರದ ಪ್ರತಿನಿಧಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

೩. ನ್ಯಾಯಾಲಯದ ಈ ಆದೇಶದ ಮೇರೆಗೆ ತೃಣಮೂಲ ಕಾಂಗ್ರೆಸ್ ಪ್ರಮುಖ ಆರೋಪಿ ಶಹಜಹಾನ್ ಶೇಖ್‌ನನ್ನು ೭ ದಿನಗಳಲ್ಲಿ ಬಂಧಿಸುವುದಾಗಿ ಭರವಸೆ ನೀಡಿದೆ !

ಸಂಪಾದಕೀಯ ನಿಲುವು

ಈಗ ಆಂದೋಲನದ ಬದಲು ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! ಆದ್ದರಿಂದ ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸಲು ಭಾಜಪ ಆದಷ್ಟು ಬೇಗ ಈ ಕ್ರಮವನ್ನು ತೆಗೆದುಕೊಳ್ಳಬೇಕು !