ತಮಿಳುನಾಡಿನ ದ್ರಮುಕ ಸರಕಾರದಿಂದ ಇಸ್ರೋದ ಹೊಸ ಉಡಾವಣಾ ಕೇಂದ್ರದ ಜಾಹೀರಾತಿನಲ್ಲಿ ಚೀನಾ ಧ್ವಜದ ಬಳಕೆ !

ಭಾಜಪದಿಂದ ಟೀಕೆ

ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರವಿಡ ಮುನ್ನೇತ್ರ ಕಳಘಮ್ (ದ್ರವಿಡ ಪ್ರಗತಿ ಸಂಘ) ಪಕ್ಷವು ರಾಜ್ಯದ ತಮಿಳು ಭಾಷೆಯ ವಾರ್ತಾಪತ್ರಿಕೆಗಳಲ್ಲಿ ಇಸ್ರೋ ಉಡಾವಣಾ ಕೇಂದ್ರದ ಸಂದರ್ಭದಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದೆ. ಇದರಲ್ಲಿ ನೌಕೆಯ ತುದಿಯಲ್ಲಿ ಚೀನಾ ಧ್ವಜವನ್ನು ತೋರಿಸಲಾಗಿದೆ. ಈ ಜಾಹೀರಾತಿನ ಕುರಿತು ತಮಿಳುನಾಡು ಭಾಜಪ ಅಧ್ಯಕ್ಷರಾದ ಕೆ. ಅಣ್ಣಾಮಲೈ ರವರು ಟೀಕಿಸಿದ್ದಾರೆ.

(ಸೌಜನ್ಯ – IndiaToday)

ಅಣ್ಣಾಮಲೈ ರವರು ಮಾತನಾಡುತ್ತ,

1. ದ್ರಮುಕದ ಮಂತ್ರಿಯಾಗಿರುವ ತಿರು ಅನಿತಾ ರಾಧಾಕೃಷ್ಣನರವರು ಪ್ರಮುಖ ತಮಿಳು ದಿನಪತ್ರಿಕೆಗಳಲ್ಲಿ ನೀಡಿರುವ ಈ ಜಾಹೀರಾತು ದ್ರಮುಖದ ಚೀನಾದೊಂದಿಗಿನ ಸ್ನೇಹ ಮತ್ತು ನಮ್ಮ ದೇಶದ ಸಾರ್ವಭೌಮತೆಯ ಸಂಪೂರ್ಣ ಅವಹೇಳನವನ್ನು ದರ್ಶಿಸುತ್ತದೆ.

2. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (‘ಇಸ್ರೋ’) ಕುಲಸೇಕರಪಟ್ಟಿನಮ್ ನಲ್ಲಿ ಎರಡನೇ ಉಡಾವಣಾ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ ನಂತರ, ಭ್ರಷ್ಟಾಚಾರದ ಆರೋಪವಿರುವ ದ್ರಮುಕವು ಅಲ್ಲಿ ಭಿತ್ತಿಪತ್ರಿಕೆಗಳನ್ನು ಅಂಟಿಸಲು ಉತ್ಸುಕವಾಗಿದೆ. ದ್ರಮುಕದ ಗಡಿಬಿಡಿಯು ತನ್ನ ಹಿಂದಿನ ದುಷ್ಕೃತ್ಯಗಳನ್ನು ಮುಚ್ಚಿಡುವ ಪ್ರಯತ್ನವನ್ನು ದರ್ಶಿಸುತ್ತದೆ. ಆದರೆ ದ್ರಮುಕದಿಂದಾಗಿಯೇ ಇಂದು ‘ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ’ವು ತಮಿಳುನಾಡಿನಲ್ಲಿ ಇರದೇ ಆಂಧ್ರಪ್ರದೇಶದಲ್ಲಿದೆ, ಎಂಬುದನ್ನು ನಾವು ಅವರಿಗೆ ನೆನಪಿಸಿಕೊಡಬೇಕಾಗಿದೆ,

3. ಇಸ್ರೋದ ಮೊದಲನೇ ಉಡಾವಣಾ ಕೇಂದ್ರದ ಆಯೋಜನೆಯ ಸಮಯದಲ್ಲಿ ತಮಿಳುನಾಡು ಇಸ್ರೋದ ಮೊದಲ ಆಯ್ಕೆಯಾಗಿತ್ತು. ರಾಜ್ಯದ ಅಂದಿನ ಮುಖ್ಯಮಂತ್ರಿಯಾಗಿದ್ದ ತಿರು ಅಣ್ಣಾದೊರೈ ರವರು ತೀವ್ರ ಭುಜದ ನೋವಿನಿಂದಾಗಿ ಆ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಅವರು ತಮ್ಮ ಪರವಾಗಿ ತಮ್ಮ ಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಥಿಯಾಝಗನರನ್ನು ನೇಮಿಸಿದರು. ಇಸ್ರೋ ಅಧಿಕಾರಿಗಳು ಸಭೆಗೆ ಅವರ ಬರುವಿಕೆಗಾಗಿ ಬಹಳ ಹೊತ್ತು ಕಾಯುತ್ತಿದ್ದರು. ಕೊನೆಗೆ ಮಥಿಯಾಝಗನ ಅಮಲೇರಿದ ಸ್ಥಿತಿಯಲ್ಲಿ ಬಂದರು. ಇದರಿಂದಾಗಿ ಆ ಸಮಯದಲ್ಲಿ ತಮಿಳುನಾಡಿನಲ್ಲಿ ಉಡಾವಣಾ ಕೇಂದ್ರವಾಗಲು ಸಾಧ್ಯವಾಗಲಿಲ್ಲ. ದ್ರಮುಕದಿಂದ ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ 60 ವರ್ಷದ ಹಿಂದೆ ಇಂತಹ ವರ್ತನೆಯಿತ್ತು. ಈಗಲೂ ದ್ರಮುಕದಲ್ಲಿ ಬಹಳಷ್ಟು ಬದಲಾವಣೆಯಾಗಿಲ್ಲ, ಬದಲಾಗಿ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿದೆ.

ಡಿಎಂಕೆ ಕ್ಷಮೆ ಕೇಳಬೇಕು ! – ಪ್ರಧಾನಿ ಮೋದಿ

ಡಿಎಂಕೆಯ ಜಾಹೀರಾತು ಭಯಾನಕವಾಗಿದೆ. ನಿಮ್ಮ ತೆರಿಗೆಯಿಂದ ಸಂಗ್ರಹಿಸಿದ ಹಣದಿಂದ ಡಿಎಂಕೆ ಸರಕಾರ ಈ ಜಾಹೀರಾತನ್ನು ನೀಡಿದೆ. ಡಿಎಂಕೆ ಈ ಮೂಲಕ ಭಾರತೀಯ ವಿಜ್ಞಾನ ಮತ್ತು ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಅವಮಾನಿಸಿದೆ, ನಿಮ್ಮನ್ನು ಅವಮಾನಿಸಿದೆ, ಇದಕ್ಕಾಗಿ ಸರಕಾರ ಕ್ಷಮೆಯಾಚಿಸಬೇಕು ಎಂದು ಇಸ್ರೋದ ಹೊಸ ಉಡಾವಣಾ ಕೇಂದ್ರದ ಶಂಕುಸ್ಥಾಪನಾ ಸಮಾರಂಭದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಒತ್ತಾಯಿಸಿದರು.

ಸಂಪಾದಕೀಯ ನಿಲುವು

ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕರು ಈ ಬಗ್ಗೆ ದ್ರಮುಕವನ್ನು ಪ್ರಶ್ನಿಸುವುದು ಆವಶ್ಯಕವಾಗಿದೆ ! ಹಾಗೆಯೇ ಇದರ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಬೇಕು !