ಕೋಪರಗಾಂವ್ (ಅಹಲ್ಯಾನಗರ) ಇಲ್ಲಿನ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಂದ ನಮಾಜ ಮಾಡಿಸಿದರು !

  • ಹಿಂದೂಗಳಲ್ಲಿ ಆಕ್ರೋಶ

  • ಅಪರಾಧ ದಾಖಲು

 

ಕೋಪರಗಾಂವ (ಅಹಲ್ಯಾನಗರ) – ರಾಷ್ಟ್ರಸಂತ ಜನಾರ್ದನಸ್ವಾಮಿ ಆಸ್ಪತ್ರೆಯ ವ್ಯಪ್ತಿಗೆ ಬರುವ ರಾಷ್ಟ್ರಸಂತ ಜನಾರ್ದನಸ್ವಾಮಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಇತರ ವಿದ್ಯಾರ್ಥಿಗಳಿಗೆ ನಮಾಜಪಠಣ ಮಾಡಲು ಹೇಳಿದ ಪ್ರಕರಣ ಬಹಿರಂಗವಾಗಿದೆ. ಕೇರಳದಿಂದ ಓರ್ವ ಮುಸ್ಲಿಂ ಅಧ್ಯಯನಕಾರ ಕಾರ್ಯಾಗಾರವನ್ನು ತೆಗೆದುಕೊಳ್ಳುವ ಹೆಸರಿನಡಿಯಲ್ಲಿ ಕಾಲೇಜಿಗೆ ಬಂದಿದ್ದನು. ಕಾಲೇಜಿನ ಓರ್ವ ಮುಸಲ್ಮಾನ ಶಿಕ್ಷಕಿಯ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದನು.

ಕಾಲೇಜಿನ ಒಂದು ಸಭಾಂಗಣದಲ್ಲಿ ಈ ಪ್ರಕರಣ ನಡೆಯಿತು; ಆದರೆ ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತವು, ಅವರಿಗೆ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. (ಪ್ರಾಂಶುಪಾಲರು ಕಾರ್ಯಕ್ರಮಕ್ಕೆ ಸ್ವತಃ ಹಾಜರಾಗಿರುವಾಗ ಆಡಳಿತ ಮಂಡಳಿಯಿಂದ ಇಂತಹ ಸ್ಪಷ್ಟೀಕರಣವನ್ನು ನೀಡುವುದು ಹಾಸ್ಯಾಸ್ಪದವಾಗಿದೆ ! – ಸಂಪಾದಕರು)

ಫೆಬ್ರವರಿ 26 ರ ರಾತ್ರಿ, ಹಿಂದುತ್ವನಿಷ್ಠರು ಆಕ್ರೋಶವನ್ನು ವ್ಯಕ್ತಪಡಿಸಿ, ಈ ಘಟನೆಯನ್ನು ಬಲವಾಗಿ ನಿಷೇಧಿಸಿದರು. ಸಕಲ ಹಿಂದೂ ಸಮಾಜ ಮತ್ತು ಸ್ಥಳೀಯ ಹಿಂದುತ್ವ ಸಂಘಟನೆಗಳು ಪೊಲೀಸ್ ಠಾಣೆಗೆ ಹೋಗಿ ಈ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಕಾಲೇಜು ಆಡಳಿತ ಮಂಡಳಿ ಮತ್ತು ಸಕಲ ಹಿಂದೂ ಸಮಾಜ ದೂರು ನೀಡಿದ ಬಳಿಕ ಸಂಬಂಧಪಟ್ಟವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರಸಂತ ಜನಾರ್ದನಸ್ವಾಮಿಯವರ ಪುಣ್ಯತಿಥಿಯ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಪಟ್ಟವರು ಸರ್ವಧರ್ಮಗಳ ಸಮಾನತೆಗಾಗಿ ನಮಾಜಪಠಣ ಮಾಡಲಾಗಿದೆಯೆಂದು ಸ್ಪಷ್ಟೀಕರಣವನ್ನು ನೀಡಿದರು. (ಹಾಗಿದ್ದರೆ ಹಿಂದೂಗಳ ಪ್ರಾರ್ಥನೆಗಳನ್ನು ತೆಗೆದುಕೊಳ್ಳುವುದು ಅಪೇಕ್ಷಿತವಾಗಿತ್ತು. ಅದನ್ನೇಕೆ ತೆಗೆದುಕೊಳ್ಳಲಿಲ್ಲ ? – ಸಂಪಾದಕರು)

ಸಂಪಾದಕೀಯ ನಿಲುವು

ಯಾವುದಾದರೂ ಶಾಲೆಯಲ್ಲಿ ಭಗವದ್ಗೀತೆ ಮತ್ತು ಯೋಗವನ್ನು ಕಲಿಸಲು ನಿರ್ಧರಿಸಿದೆ ಪ್ರಗತಿ(ಅಧೋ) ಪರ ಸಮುದಾಯವು ‘ಶಿಕ್ಷಣವನ್ನು ಕೇಸರಿಕರಣ’ ಗೊಳಿಸಲಾಗುತ್ತಿದೆಯೆಂದು ಕೂಗಾಡುತ್ತಾರೆ. ಈಗ ಮಾತ್ರ ಇವರಲ್ಲಿ ಯಾರೂ ಚಕಾರ ಶಬ್ದವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನದಲ್ಲಿಡಿ !

ಈ ಪ್ರಕರಣದಲ್ಲಿ ಹಿಂದೂಗಳು ಜಾತ್ಯತೀತತೆಗೆ ಮಸಿಬಳಿಯುವ ಇಂತಹ ಪ್ರಾಂಶುಪಾಲರನ್ನು ವಜಾಗೊಳಿಸುವಂತೆ ಹಿಂದೂಗಳು ಒತ್ತಾಯಿಸಬೇಕು !

ಒಬ್ಬನೇ ವಿದ್ಯಾರ್ಥಿಯೂ ನಮಾಜಪಠಣಕ್ಕೆ ವಿರೋಧಿಸದಿರುವುದು ಇದು ವಿದ್ಯಾರ್ಥಿಗಳಿಗೆ ಹಿಂದೂ ಧರ್ಮ ಶಿಕ್ಷಣ ಆವಶ್ಯಕತೆಯೆಷ್ಟು ಎನ್ನುವುದು ಗಮನಕ್ಕೆ ಬರುತ್ತದೆ !