ಪಾಕಿಸ್ತಾನದಲ್ಲಿ ನಿತ್ಯ ಪೂಜೆ ಆಗುತ್ತಿದ್ದ ಏಕೈಕ ದೇವಸ್ಥಾನದ ಪಕ್ಕದಲ್ಲಿ ಹೊಸ ದೇವಸ್ಥಾನ ನಿರ್ಮಾಣ !

  • ಸಿಂಧ್ ಪ್ರಾಂತ್ಯದಲ್ಲಿ ರಾಮಮಂದಿರ ನಿರ್ಮಾಣ !

  • ಬಾಬರ್ ಮತ್ತು ಜುಲ್ಫಿಕರ್ ನಿಂದ ಕಟ್ಟಡ ನಿರ್ಮಾಣ !

ಕರಾಚಿ (ಪಾಕಿಸ್ತಾನ) – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಅಬುಧಾಬಿಯಲ್ಲಿ ಸ್ವಾಮಿನಾರಾಯಣ ಮಂದಿರ ನಿರ್ಮಾಣದ ನಂತರ ಮುಸ್ಲಿಂ ಬಾಹುಳ್ಯದ ಪಾಕಿಸ್ತಾನದಲ್ಲಿ ಹೊಸ ರಾಮಮಂದಿರ ನಿರ್ಮಾಣದ ಚರ್ಚೆ ಆರಂಭವಾಗಿದೆ. ಅಂದಹಾಗೆ ಮೂಲ 200 ವರ್ಷಗಳಷ್ಟು ಹಳೆಯದಾದ ರಾಮ ಮಂದಿರ ಇಲ್ಲಿದೆ; ಆದರೆ ಅದರ ದುರಾವಸ್ಥೆ ಆದಕಾರಣ ಅದರ ಪಕ್ಕದಲ್ಲಿಯೇ ಹೊಸ ದೇವಸ್ಥಾನ ನಿರ್ಮಾಣವಾಗುತ್ತಿದೆ. ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯ ಇಸ್ಲಾಂಕೋಟ್‌ನಲ್ಲಿರುವ ಈ 200 ವರ್ಷಗಳಷ್ಟು ಹಳೆಯದಾದ ದೇವಾಲಯವು ಅಷ್ಟು ದೊಡ್ಡದಲ್ಲ, ಆದರೆ ಸ್ಥಳೀಯ ಹಿಂದೂಗಳ ಪ್ರಕಾರ, ಪಾಕಿಸ್ತಾನದಲ್ಲಿ ಪೂಜೆ ಮಾಡುವ ಏಕೈಕ ದೇವಾಲಯವಾಗಿದೆ. ಆದ್ದರಿಂದ, ಅಲ್ಪಸಂಖ್ಯಾತ ಹಿಂದೂಗಳಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸಿಂಧ್ ಪ್ರಾಂತ್ಯದ ಡೇರಾ ರಹೀಮ್ ಯಾರ್ ಖಾನ್ ನಿವಾಸಿ ಮಾಖನ್ ರಾಮ್ ಜೈಪಾಲ್ ಅವರು ಈ ದೇವಾಲಯದ ಒಂದು ವೀಡಿಯೊವನ್ನು ಪ್ರಸಾರ ಮಾಡಿ ಮಾಹಿತಿ ನೀಡಿದ್ದಾರೆ.

(ಸೌಜನ್ಯ – Makhan Ram jaipal Vlogs)

1. ಮಂದಿರ ನಿರ್ಮಾಣದಲ್ಲಿ ತೊಡಗಿರುವ ಕುಶಲಕರ್ಮಿಗಳ ಹೊರತಾಗಿ ಕಾರ್ಮಿಕರೂ ಮುಸ್ಲಿಮರೇ ಎಂದು ಮಾಖಾನ್ ಹೇಳಿದರು. ಮುಂದಿನ 6 ತಿಂಗಳಲ್ಲಿ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣವಾಗಲಿದೆ ಎಂದು ಸ್ಥಳೀಯರು ಆಶಿಸಿದ್ದಾರೆ. ಇದಾದ ನಂತರ ಹಳೆಯ ದೇವಸ್ಥಾನದ ಮೂರ್ತಿಗಳನ್ನು ಹೊಸ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ವೇಳೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಪ್ರಾಣ ಪ್ರತಿಷ್ಠೆ ಮಾಡಲಾಗುವುದು. ಮೂಲ ದೇವಾಲಯದಲ್ಲಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳ ಜೊತೆ ಭಗವಾನ್ ಶಿವನ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.

2. ಮಂದಿರವನ್ನು ನಿರ್ಮಿಸಿದ ಬಾಬರ್, ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ ಅನೇಕ ಮಂದಿರಗಳು ಇವೆ ಎಂದು ಹೇಳಿದರು. ಅಲ್ಲಿನ ಅನೇಕ ಮಂದಿರದ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ. ಜುಲ್ಫಿಕರ್ ಹಾಗೂ ಬಾಬರ್ ಇಬ್ಬರು ಮುಸ್ಲಿಂ ಯುವಕರು ದೇವಸ್ಥಾನದ ಹೊಸ ಕಟ್ಟಡವನ್ನು ನಿರ್ಮಿಸಲಿದ್ದಾರೆ.

ಸಂಪಾದಕೀಯ ನಿಲುವು

ಯಾವ ಬಾಬರ್ ಅಯೋಧ್ಯೆ ಶ್ರೀರಾಮ ಮಂದಿರವನ್ನು ಕೆಡವಿದನೋ, ಅದೇ ಹೆಸರಿನ ಕುಶಲಕರ್ಮಿ ಪಾಕಿಸ್ತಾನದಲ್ಲಿ ಮಂದಿರ ಕಟ್ಟುತ್ತಿದ್ದಾನೆ. ಈ ‘ಬಾಬರ್’ ಅಂತಹ ಜಿಹಾದಿ ಮನೋಭಾವವನ್ನು ಹೊಂದಿಲ್ಲದಿದ್ದರೂ, ‘ಬಾಬರ್’ನ ವಿಧ್ವಂಸಕ ಹಿಂದೂ ದ್ವೇಷದ ಧೋರಣೆಯೊಂದಿಗೆ ಪಾಕಿಸ್ತಾನದಲ್ಲಿರುವ ಅವನ ವಂಶಸ್ಥರು ಈ ದೇವಾಲಯಕ್ಕೆ ಹಾನಿ ಮಾಡುವುದಿಲ್ಲ. ಎಂದು ಹೇಗೆ ಹೇಳುವುದು ?