ಗಗನಯಾನ ಯಾತ್ರೆಗಾಗಿ 4 ಭಾರತೀಯ ಗಗನಯಾತ್ರಿಗಳ ಹೆಸರುಗಳು ಪ್ರಕಟ !

ಪ್ರಧಾನಿ ಮೋದಿಯಿಂದ ಘೋಷಣೆ !

ತಿರುವನಂತಪುರಂ – ‘ಗಗನಯಾನ’ ಈ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೋ’ ದ ಮುಂಬರುವ ಮಹತ್ವಾಕಾಂಕ್ಷೆಯ ಉದ್ದೇಶವಾಗಿದ್ದು, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ. ರಷ್ಯಾ, ಅಮೆರಿಕಾ ಮತ್ತು ಚೀನಾದ ನಂತರ ಭಾರತವು ತನ್ನದೇ ಬಲದಿಂದ ಮಾಡುವ ನಾಲ್ಕನೇ ದೇಶವಾಗಿದೆ. ಇದರ ಅಡಿಯಲ್ಲಿ 4 ಗಗನಯಾತ್ರಿಗಳನ್ನು ಬಾಹ್ಯಾಕಾಶ ನೌಕೆಯ ಮೂಲಕ ಕಳುಹಿಸಲಾಗುವುದು. ಪ್ರಶಾಂತ್ ಬಾಲಕೃಷ್ಣ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ ಎಂದು ಹೆಸರುಗಳಿದ್ದು ಅವರು ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇರಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಈ ಮಹತ್ವದ ಮಾಹಿತಿ ನೀಡಿದ್ದಾರೆ. ಅಭಿಯಾನದ ಯಶಸ್ಸಿಗಾಗಿ ಅವರು ಈ ನಾಲ್ವರಿಗೆ ಶುಭ ಹಾರೈಸಿದ್ದಾರೆ. ಈ ಅಭಿಯಾನವನ್ನು 2025 ರ ಕೊನೆಯಲ್ಲಿ ಅಥವಾ 2026 ರ ಆರಂಭದಲ್ಲಿ ಕಾರ್ಯಗತಗೊಳಿಸಲಾಗುತ್ತದೆ.

ಈ ಬಾಹ್ಯಾಕಾಶ ನೌಕೆಯ ತೂಕ 6 ಟನ್ ಇರಲಿದೆ. ಬಾಹ್ಯಾಕಾಶ ನೌಕೆಯು ಭೂಮಿಯನ್ನು 3 ದಿನಗಳ ಕಾಲ ಅಂದಾಜು 400 ಕಿಮೀ ದೂರದಲ್ಲಿ ಸುತ್ತುತ್ತದೆ. ಈ ಗಗನಯಾತ್ರಿಗಳ ತರಬೇತಿಗಾಗಿ ಬೆಂಗಳೂರಿನಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ನಾಲ್ವರು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ಕೆಲವು ಕಾಲ ಬಾಹ್ಯಾಕಾಶ ಪ್ರಯಾಣವನ್ನೂ ಪಡೆದಿದ್ದಾರೆ. ಹಾಗೂ ಅಗತ್ಯವಿರುವ ಪ್ರಾರ್ಥಮಿಕ ಪ್ರಶಿಕ್ಷಣವನ್ನೂ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಅಮೇರಿಕಾದ ನಾಸಾ ಕೂಡ ಇಸ್ರೋಗೆ ಸಹಾಯ ಮಾಡಲಿದೆ.

ಹಿಂದಿನ ಏಪ್ರಿಲ್ 1984 ರಲ್ಲಿ, ರಾಕೇಶ್ ಶರ್ಮಾ ಅಂದಿನ ‘ಸೋವಿಯತ್ ರಷ್ಯಾ’ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಮೂಲಕ ಭಾರತದ ಮೊದಲ ಗಗನಯಾತ್ರಿಯಾಗಿದ್ದರು. ಅನಂತರ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಸೇರಿದಂತೆ ಭಾರತೀಯ ಮೂಲದ ಕೆಲವು ನಾಗರಿಕರು ಇತರ ದೇಶಗಳನ್ನು ಪ್ರತಿನಿಧಿಸುವ ಗಗನಯಾತ್ರಿಗಳಾಗಿ ಬಾಹ್ಯಾಕಾಶದಲ್ಲಿ ಪ್ರಯಾಣಿಸಿದ್ದಾರೆ.