‘ಸರ್ಜಿಕಲ್ ಸ್ಟ್ರೈಕ್’ನಲ್ಲಿ 82 ಭಯೋತ್ಪಾದಕರು ಹತ್ಯೆಗೀಡಾಗಿದ್ದರು!

ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜೇಂದ್ರ ರಾಮರಾವ ನಿಂಭೋರಕರ ನೀಡಿದ ಮಾಹಿತಿ

(‘ಸರ್ಜಿಕಲ್ ಸ್ಟ್ರೈಕ್’ ಎಂದರೆ ಶತ್ರುವಿನ ಗಡಿಯೊಳಗೆ ಹಠಾತ್ ನುಗ್ಗಿ ಕೇವಲ ಭಯೋತ್ಪಾದಕರು/ ಸೈನಿಕರ ನೆಲೆಗಳ ಮೇಲೆ ದಾಳಿ ನಡೆಸಿ ಮರಳಿ ಬರುವುದು)

ನವದೆಹಲಿ – ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ 2016 ರಲ್ಲಿ ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕೆಲವು ಸೈನಿಕರು ಹುತಾತ್ಮರಾಗಿದ್ದರು. ಇದರ ಸೇಡು ತೀರಿಸಿಕೊಳ್ಳಲು ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜಿಹಾದಿ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. 29 ಸೆಪ್ಟೆಂಬರ್ 2016 ರಂದು ನಡೆದ ಕಾರ್ಯಾಚರಣೆಯಲ್ಲಿ 82 ಜಿಹಾದಿ ಭಯೋತ್ಪಾದಕರು ಹತ್ಯೆಗೀಡಾಗಿದ್ದರು, ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜೇಂದ್ರ ರಾಮರಾವ್ ನಿಂಭೋರ್ಕರ್ ಅವರು ಒಂದು ಹಿಂದಿ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾರತದ ಒಬ್ಬ ಯೋಧನೂ ಗಾಯಗೊಂಡಿಲ್ಲ. ಈ ಕಾರ್ಯಾಚರಣೆಗಾಗಿ ಅಂದಿನ ಸಂರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅನುಮತಿ ನೀಡಿದ್ದರು ಎಂದು ನಿಂಭೋರ್ಕರ್ ಹೇಳಿದರು.

ನಿಂಭೋರ್ಕರ್ ಅವರು ಕಾರ್ಯಾಚರಣೆಯ ವಿಷಯದಲ್ಲಿ ನೀಡಿರುವ ವಿವರವಾದ ಮಾಹಿತಿ.

1. ಮೊದಲ ನಮಾಜ್‌ಗೂ ಮುನ್ನವೇ ಕ್ರಮ ನಡೆಸಬೇಕಾಗಿತ್ತು!

ನಾವು ಸೆಪ್ಟೆಂಬರ್ 28-29 ರ ದಿನದಂದು ನಿಯೋಜಿಸಿದ್ದೆವು. ಅಮವಾಸ್ಯೆ ರಾತ್ರಿ 2 ರಿಂದ 4 ಗಂಟೆಯ ಸಮಯವನ್ನು ಆಯ್ಕೆ ಮಾಡಲಾಯಿತು. ಪ್ರಮುಖ ವಿಷಯವೆಂದರೆ ನಾವು ಸೈನ್ಯದಲ್ಲಿ ನಿಜವಾಗಿಯೂ ಜಾತ್ಯಾತೀತತೆಯನ್ನು ಪ್ರತ್ಯಕ್ಷದಲ್ಲಿ ಪಾಲಿಸುತ್ತೇವೆ. ಆದರೆ ಯಾವ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವವರಿದ್ದೆವೋ, ಅವರೆಲ್ಲರೂ ಮುಸ್ಲಿಮರೇ ಆಗಿದ್ದರು. ಅವರ ಮೊದಲ ನಮಾಜ್ ಬೆಳಗಿನ ಜಾವ ಸುಮಾರು 4 ಗಂಟೆಗೆ ಆಗುವುದರಲ್ಲಿತ್ತು. ಅದಕ್ಕೂ ಮೊದಲು ನಾವು ನಮ್ಮ ಕಾರ್ಯಾಚರಣೆಯನ್ನು ನಿಯೋಜಿಸಿದೆವು.

2. ಇಂತಹ ಕಾರ್ಯಾಚರಣೆಗೆ ಸರಕಾರದ ಇಚ್ಛಾಶಕ್ತಿಯ ಅಗತ್ಯವಿರುತ್ತದೆ.

ಭಾರತದ ಪ್ರಧಾನಮಂತ್ರಿಯಿಂದ ಹಿಡಿದು ನನ್ನವರೆಗೆ ಕೇವಲ 17 ಮಂದಿಗೆ ಮಾತ್ರ ಇದರ ಮಾಹಿತಿಯಿತ್ತು. ಮೇಜರ ಜನರಲ ಇವರಿಗೂ ತಿಳಿದಿರಲಿಲ್ಲ. ವಿಶೇಷವೆಂದರೆ ನಮಗೆ ಆವಶ್ಯಕವಿರುವ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು 6 ದಿನಗಳಲ್ಲಿ ದೊರಕಿತು. ಉತ್ಕೃಷ್ಟ ರೈಫಲ, ನೈವ್ಹಿಜನ ಕ್ಯಾಮೆರಾ, ಒಳ್ಳೆಯ ರೇಡಿಯೋ ವ್ಯವಸ್ಥೆಗಳನ್ನು ನೀಡಲಾಯಿತು. ನನ್ನ ವೈಯಕ್ತಿಕ ವಿಶ್ವಾಸವೆಂದರೆ ಭಾರತದ ಇತಿಹಾಸದಲ್ಲಿ ಭಾರತಕ್ಕೆ ಸರ್ವೋತ್ತಮ ರಕ್ಷಣಾಸಚಿವರು ದೊರಕಿದ್ದರೆ ಅವರು ಮನೋಹರ ಪರಿಕ್ಕರ ಆಗಿದ್ದರು. ಕಾರಣವೇನೆಂದರೆ, ರಾಜಕೀಯ ಇಚ್ಛಾಶಕ್ತಿಯ ಆವಶ್ಯಕತೆ ಸರಿಯಾದ ಸಮಯಕ್ಕೆ ಅತ್ಯಂತ ಅಗತ್ಯವಾಗಿರುತ್ತದೆ ಅದು ಆ ಸಮಯದಲ್ಲಿತ್ತು. 26/11 ಮುಂಬೈ ದಾಳಿಯ ನಂತರ ನಾವು ನಿರ್ಣಯಗಳನ್ನು ತೆಗೆದುಕೊಂಡಿದ್ದರೆ, ಬಹುಶಃ ಅದರ ಪರಿಣಾಮ ಹೀಗೆಯೇ ಆಗಿರುತ್ತಿತ್ತು ಮತ್ತು ಮುಂದಿನ ದಾಳಿಗಳು ನಡೆಯುತ್ತಿರಲಿಲ್ಲ; ಕಾರಣ ಸರ್ಜಿಕಲ ಸ್ಟ್ರೈಕ ಬಳಿಕ ದಾಳಿಗಳು ಕಡಿಮೆಯಾದವು.

3. ನಮ್ಮ 35 ಸೈನಿಕರು ಈ ಕಾರ್ಯಾಚರಣೆಯಲ್ಲಿದ್ದರು. ಸೈನಿಕ ಹುತಾತ್ಮನಾದರೆ ಅಥವಾ ಗಾಯಗೊಂಡರೆ, ನಾವು ಅವನನ್ನು ಶತ್ರುವಿನ ಪ್ರದೇಶದಲ್ಲಿ ಬಿಡುವುದಿಲ್ಲ ಇದು ಸೇನೆಯ ನಿಯಮವಾಗಿದೆ. ಪಾಕಿಸ್ತಾನಿ ಗಡಿಯ 900 ಮೀಟರ್ ಒಳಗಿನಿಂದ ಈ ಸೈನಿಕರನ್ನು ಮರಳಿ ಕರೆತರಲು ಮನುಷ್ಯರ ಆವಶ್ಯಕತೆಯಿರುತ್ತದೆ. ಇದಕ್ಕಾಗಿ 35 ಜನರನ್ನು ಕಾಯ್ದಿಡಲಾಗಿತ್ತು. ಪ್ರತಿ 100 ಮೀಟರ ಅಂತರವನ್ನು ಕತ್ತರಿಸಲು ನಮಗೆ ಎರಡೂವರೆಯಿಂದ ಮೂರು ಗಂಟೆಗಳು ತಗುಲಿತು. ಕಾರಣ ಇಲ್ಲಿ ಭೂಸುರಂಗಗಳನ್ನು ಹರಡಲಾಗಿರುತ್ತದೆ.

4. 10 ನಿಮಿಷದಲ್ಲಿ ಭಯೋತ್ಪಾದಕರ ಕತ್ತು ಸೀಳಿ ಕೊಲ್ಲಲಾಯಿತು!

ನೆಲೆಗಳನ್ನು ತಲುಪಿದ ಬಳಿಕ ಸೈನಿಕರು ಎಲ್ಲಾ ಭಯೋತ್ಪಾದಕರ ಕತ್ತು ಸೀಳಿದರು. ನಾವು ನಮ್ಮ ಕಾರ್ಯಾಚರಣೆಯನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದೆವು. ಥರ್ಮಲ್ ಕ್ಯಾಮೆರಾ ಬಳಸಿ ಚಿತ್ರೀಕರಿಸಲಾಯಿತು. 12ನೇ ನಿಮಿಷಕ್ಕೆ ಸೈನಿಕರು ಹಿಂತಿರುಗಿ ಹೊರಟರು. ಬೆಳಗಿನ ಜಾವ 5 ಗಂಟೆಗೆ ಮರಳಿದರು. ಇದರಲ್ಲಿ ಒಬ್ಬ ಸೈನಿಕನೂ ಗಾಯಗೊಳ್ಳಲಿಲ್ಲ. ಚಿತ್ರೀಕರಣದಲ್ಲಿ 28ರಿಂದ 30 ಮೃತದೇಹಗಳು ಕಾಣಿಸುತ್ತಿರುವುದು ಬಹಿರಂಗವಾಯಿತು. ನಾವು ಒಟ್ಟು 82 ಭಯೋತ್ಪಾದಕರನ್ನು ಕೊಂದಿದ್ದೆವು. ನಮ್ಮ ಒಬ್ಬನೇ ಒಬ್ಬ ಸೈನಿಕರಿಗೂ ಯಾವುದೇ ಹಾನಿಯಾಗಲಿಲ್ಲ; ಇದು ನಮಗೆ ಬಹಳ ದೊಡ್ಡ ವಿಷಯವಾಗಿತ್ತು.

5. ಭಾರತದ ಆರ್ಥವ್ಯವಸ್ಥೆಯು ಸುದೃಢವಾದರೆ ನಾವು ಚೀನಾಕ್ಕೆ ತಕ್ಕ ಪಾಠ ಕಲಿಸಬಲ್ಲೆವು

ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜೇಂದ್ರ ರಾಮರಾವ್ ನಿಂಭೋರಕರ ಮಾತನಾಡಿ, ಪ್ರಪ್ರಥಮವಾಗಿ ನಮ್ಮ ಶತ್ರು ಯಾರು ಎಂದು ನಾವು ಮೊದಲು ನೋಡೋಣ. ಪಾಕಿಸ್ತಾನಕ್ಕಿಂತ ನಮ್ಮ ಬಹಳ ಹೆಚ್ಚಾಗಿದೆ. ಪಾಕಿಸ್ತಾನಕ್ಕೆ ಹೆದರುವ ಅಗತ್ಯವಿಲ್ಲ. ಉತ್ತರದಲ್ಲಿ ಚೀನಾ ಶತ್ರು ದೇಶವಾಗಿದೆ. ನಾವು ಅದರ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾಗುವುದು. ಡೋಕ್ಲಾಮ್‌ನಲ್ಲಿ ನಾವು 34 ದಿನಗಳ ಕಾಲ ಅವರ ಎದುರಿಗಿದ್ದೆವು. ಚೀನಾಕ್ಕೆ ನಮ್ಮ ಸಾಮರ್ಥ್ಯ ತಿಳಿದಿದೆ. ಚೀನಾದ ಭೌಗೋಳಿಕ ಸ್ಥಿತಿ ಹೇಗಿದೆಯೆಂದರೆ, ಅದಕ್ಕೆ ಟಿಬೆಟ್ ಮೂಲಕ ಭಾರತದ ಗಡಿಯನ್ನು ಪ್ರವೇಶಿಸಬೇಕಾಗುತ್ತಿದೆ. ಅದನ್ನು ತಡೆಯುವ ಸಾಮರ್ಥ್ಯ ನಮಗಿದೆ. ದೊಡ್ಡ ಸೈನ್ಯಕ್ಕೆ ಹಣದ ಆವಶ್ಯಕತೆಯಿರುತ್ತದೆ. ಒಂದು ವೇಳೆ ನಮ್ಮ ಅರ್ಥವ್ಯವಸ್ಥೆ ವೃದ್ಧಿಸಿದೆ, ವಾಯುದಳದಲ್ಲಿ 50 ಸ್ಕ್ವಾಡ್ರನ್ ಇರಬಹುದು. ಈಗ ನಮ್ಮನ್ನು ತಡೆಯುವವರು ಯಾರೂ ಇಲ್ಲ ಎನ್ನುವುದು ಚೀನಾ ತಿಳಿದಿದೆ. ಚೀನಾದೊಂದಿಗೆ ಯುದ್ಧವಾದರೆ, ಅದರ ಹಾನಿ ಎಷ್ಟಾಗುವುದೋ, ಅಷ್ಟೇ ಹಾನಿ ನಮ್ಮದೂ ಆಗುತ್ತದೆ. ಅದಕ್ಕಾಗಿ ನಾವು ಆರ್ಥಿಕ ದೃಷ್ಟಿಯಿಂದ ಹೆಚ್ಚು ಸುದೃಢರಾಗಿರುವುದು ಆವಶ್ಯಕವಿದೆ.