ದೇಶದಲ್ಲಿ 2017 ರಿಂದ 2022 ರ ಅವಧಿಯಲ್ಲಿ, ಪೊಲೀಸ್ ಕಸ್ಟಡಿಯಲ್ಲಿ 270 ಕ್ಕೂ ಹೆಚ್ಚು ಬಲಾತ್ಕಾರದ ಪ್ರಕರಣಗಳು ನಡೆದಿವೆ. 

ಇದು ಪೊಲೀಸರಿಗೆ ಮತ್ತು ಸರಕಾರಕ್ಕೆ ನಾಚಿಕೆಗೇಡು! 

ನವ ದೆಹಲಿ – ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆ ಪ್ರಕಟಿಸಿದ ಮಾಹಿತಿಯ ಅಂಕಿ – ಅಂಶಗಳ ಪ್ರಕಾರ, ಭಾರತದಲ್ಲಿ 2017 ರಿಂದ 2022 ರ ಅವಧಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ 270 ಕ್ಕೂ ಹೆಚ್ಚು ಬಲಾತ್ಕಾರದ ಪ್ರಕರಣಗಳನ್ನು ದಾಖಲಿಸಲಾಗಿದೆ.ಈ ಬಲಾತ್ಕಾರಗಳ ಆರೋಪಿಗಳಲ್ಲಿ ಪೊಲೀಸ ಸಿಬ್ಬಂದಿ, ಸಮಾಜ ಸೇವಕರು, ಸಶಸ್ತ್ರ ಪಡೆಗಳ ಸಿಬ್ಬಂದಿ, ಜೈಲು ಸಿಬ್ಬಂದಿ, ‘ರಿಮಾಂಡ್ ಹೋಮ್’ (ಸುಧಾರಣಾ ಗೃಹ) ಸಿಬ್ಬಂದಿ, ಬಂಧಿಸಿರುವ ಸ್ಥಳಗಳಲ್ಲಿದ್ದ ಜನರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಸೇರಿದ್ದಾರೆ.