ರಾಷ್ಟ್ರಪತಿ ಹುದ್ದೆಯ ಚುನಾವಣೆ
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ಈ ವರ್ಷ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಪಕ್ಷದಿಂದ ಅಭ್ಯರ್ಥಿ ಸಿಗಬೇಕು; ಎಂದು ಎರಡೂ ಪಕ್ಷಗಳ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ಸಧ್ಯದ ಆಡಳಿತಾರೂಢ ಡೆಮೊಕ್ರಟಿಕ್ ಪಕ್ಷವು ಅಮೇರಿಕಾದಲ್ಲಿರುವ ಹಿಂದೂ ಮತದಾರರನ್ನು ಸೆಳೆಯಲು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದೂಗಳಿಗೆ ಒಂದು ಪುಟವನ್ನು ಇಡಲಿದೆ. ಈ ಪುಟದಲ್ಲಿ ಹಿಂದೂಗಳಿಗಾಗಿ ಮಾಡಿರುವ ಘೋಷಣೆಗಳ ಪ್ರಸ್ತಾಪವಿರಲಿದೆ. ಅಮೇರಿಕಾದ ಇತಿಹಾಸದಲ್ಲಿ ಇದು ಮೊದಲಬಾರಿಗೆ ಸಂಭವಿಸಲಿದೆ. ಇಲ್ಲಿಯವರೆಗೆ, ಡೆಮೊಕ್ರಟಿಕ್ ಪಕ್ಷದ ಪ್ರಣಾಳಿಕೆಗಳಲ್ಲಿ ಮುಸಲ್ಮಾನರು ಮತ್ತು ಯಹೂದಿಗಳಂತಹ ಧಾರ್ಮಿಕ ಸಮುದಾಯಗಳಿಗೆ ಸ್ವತಂತ್ರ ಪುಟಗಳಿದ್ದವು. ಅಮೇರಿಕಾದಲ್ಲಿ ಸರಿಸುಮಾರು 30 ಲಕ್ಷ ಹಿಂದೂ ಮತದಾರರಿದ್ದಾರೆ. ವಿಶೇಷವೆಂದರೆ ಅಮೇರಿಕಾದಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವುದು ಕಾನೂನಿನ ಪ್ರಕಾರ ಆವಶ್ಯಕವಿರುತ್ತದೆ. (ಭಾರತದಲ್ಲಿ, ವರ್ಷಗಟ್ಟಲೆ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಒಂದೇ ಒಂದು ರಾಜಕೀಯ ಪಕ್ಷವು ಎಂದಿಗೂ ಪೂರ್ಣಗೊಳಿಸುವುದಿಲ್ಲ. ಇದು ಇತಿಹಾಸವಿದೆ. ಈಗ ಭಾರತದಲ್ಲಿಯೂ ರಾಜಕೀಯ ಪಕ್ಷಗಳಿಗೆ ಕಾನೂನಿನ ಮೂಲಕ ಭರವಸೆಗಳನ್ನು ಪೂರ್ಣಗೊಳಿಸುವುದು ಅನಿವಾರ್ಯಗೊಳಿಸುವುದು ಆವಶ್ಯಕವಾಗಿದೆ ! – ಸಂಪಾದಕರು)
‘ಹಮಾಸ ಯುದ್ಧದಲ್ಲಿ ಅಮೇರಿಕೆಯು ಇಸ್ರೇಲ್ ಗೆ ನೀಡಿದ ಬೆಂಬಲದಿಂದಾಗಿ ಇಲ್ಲಿಯ ಮುಸಲ್ಮಾನರು ಡೆಮೊಕ್ರಟಿಕ್ ಪಕ್ಷದೆಡೆಗೆ ವಾಲುವ ಸಾಧ್ಯತೆ ಕಡಿಮೆಯಾಗಿದೆ. ಇಂತಹ ಸ್ಥಿತಿಯಲ್ಲಿ ಡೆಮೊಕ್ರಟಿಕ್ ಪಕ್ಷ ಹಿಂದೂ ಮತದಾರರನ್ನು ಸೆಳೆಯಬಹುದು. – ಶ್ರೀ. ಭವಾನಿ ಪಟೇಲ್, ಪೆನ್ಸಿಲ್ವೇನಿಯಾದ ಡೆಮಾಕ್ರಟಿಕ್ ಅಭ್ಯರ್ಥಿ
‘ಇದುವರೆಗೆ, ಅಮೇರಿಕಾದಲ್ಲಿ ರಾಜಕೀಯ ಪಕ್ಷಗಳಿಂದ ಹಿಂದೂ ಮತದಾರರಿಗೆ ಸಾರ್ವಜನಿಕ ಮನ್ನಣೆ ಇರಲಿಲ್ಲ; ಆದರೆ ಇತ್ತೀಚಿನ ಕಾಲದಲ್ಲಿ ಅಮೇರಿಕಾದ ಸಮಾಜದಲ್ಲಿ ಹಿಂದೂಗಳ ಹೆಚ್ಚುತ್ತಿರುವ ಪ್ರಭಾವವನ್ನು ನೋಡಿದರೆ, ಈಗ ಯಾವುದೇ ಪಕ್ಷಕ್ಕೆ ಹಿಂದೂ ಮತದಾರರನ್ನು ನಿರ್ಲಕ್ಷಿಸುವುದು ಕಠಿಣವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಣಾಳಿಕೆಯಲ್ಲಿ ಹಿಂದೂಗಳಿಗಾಗಿ ಪ್ರತ್ಯೇಕ ಪುಟವನ್ನು ಇಡುವುದು ಸೂಕ್ತವಾಗಿದೆ.’ – ರಮೇಶ್ ಕಪುರ್, ಡೆಮೊಕ್ರಟಿಕ್ ಪಕ್ಷದ ದೇಣಿಗೆದಾರ.
ಅಮೇರಿಕಾದ 50 ರಾಜ್ಯಗಳ ಪೈಕಿ 16 ರಾಜ್ಯಗಳಲ್ಲಿ ಹಿಂದೂ ಮತದಾರರು ನಿರ್ಣಾಯಕರಾಗಿದ್ದಾರೆ. ವ್ಹಿಸ್ಕಾನ್ಸಿನ್, ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಮತದಾರರು ಸಮಾನರಾಗಿದ್ದಾರೆ.
ಸಂಪಾದಕೀಯ ನಿಲುವುಅಮೇರಿಕಾ ತಥಾಕಥಿತ ಜಾತ್ಯತೀತ ರಾಷ್ಟ್ರವಾಗಿದ್ದರೂ, ಅದು ಕ್ರೈಸ್ತ ಧರ್ಮಕ್ಕೆ ಆದ್ಯತೆ ನೀಡುತ್ತದೆ ಎನ್ನುವುದು ಜಗಜ್ಜಾಹೀರಾಗಿರುವ ವಿಷಯವಾಗಿದೆ; ಕಾರಣ ಅಲ್ಲಿ ಕ್ರೈಸ್ತರು ಬಹುಸಂಖ್ಯಾತರಾಗಿದ್ದಾರೆ. ಭಾರತವು ಇದಕ್ಕೆ ತದ್ವಿರುದ್ಧವಾಗಿದೆ, ಅಂದರೆ ಬಹುಸಂಖ್ಯಾತ ಹಿಂದೂಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಈಗ ಹಿಂದೂಗಳ ಮತಗಳನ್ನು ಪಡೆಯಲು ಹಿಂದೂಗಳ ಓಲೈಕೆ ಮಾಡುವ ಪ್ರಯತ್ನವನ್ನು ಡೆಮೊಕ್ರೆಟಿಕ್ ಪಕ್ಷ ಮಾಡುತ್ತಿದೆ. ಈ ಹಿಂದೆ ಅವರಿಗೆ ಹಿಂದೂಗಳ ನೆನಪೂ ಇರಲಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ! |