ಮಾಲ್ಡೀವ್ಸ್‌ಗೆ ಕಷ್ಟದ ಸಮಯದಲ್ಲಿ ಭಾರತವು ಯಾವಾಗಲೂ ಸಹಾಯ ಮಾಡಿದೆ ! – ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮಾರಿಯಾ ದೀದಿ

ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮಾರಿಯಾ ದೀದಿ ಇವರ ಹೇಳಿಕೆ

ಮಾಲೆ (ಮಾಲ್ಡೀವ್ಸ್) – ಯಾವಾಗ ಮಾಲ್ಡೀವ್ಸ್‌ಗೆ ಆವಶ್ಯತೆ ಇತ್ತು ಆಗ ನಮ್ಮ ನೆರೆಯ ದೇಶ ಅಂದರೆ ಭಾರತ ನಮಗೆ ಸಹಾಯ ಮಾಡಿದೆ. ಭಾರತವು ಯಾವಾಗಲೂ ಮಾಲ್ಡೀವ್ಸ್‌ನ ಸಂಕಷ್ಟದಲ್ಲಿ ನೇತೃತ್ವವನ್ನು ತೆಗೆದುಕೊಳ್ಳುತ್ತದೆ, ಎಂದು ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮಾರಿಯಾದೀದಿ ‘ಫಸ್ಟ್‌ಪೋಸ್ಟ್ ಡಿಫೆನ್ಸ್ ಶೃಂಗಸಭೆ‘ಯಲ್ಲಿ ಹೇಳಿದರು. ಕಳೆದ ೨ ತಿಂಗಳಿನಿಂದ ಭಾರತ ಮತ್ತು ಮಾಲ್ಡೀವ್ಸ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಹಿನ್ನಲೆಯಲ್ಲಿ ಅವರು ಮಾತನಾಡುತ್ತಿದ್ದರು. ಮಾರಿಯಾದೀದಿ ಮಾತು ಮುಂದುವರೆಸುತ್ತಾ, ಭಾರತ ತನ್ನ ಪಕ್ಕದ ದೇಶವಾದ ಶ್ರೀಲಂಕಾಗೂ ಸಹಾಯಮಾಡುತ್ತದೆ. ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳುವುದು ನಮ್ಮ ಪಕ್ಷದ ಸರಕಾರದ ಮೊದಲ ಉದ್ದೇಶವಾಗಿತ್ತು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಸುಧಾರಿಸುತ್ತದೆ ಎಂದು ನಾನು ಆಶಿಸುತ್ತೇನೆ. ಎರಡು ದೇಶಗಳ ನಡುವಿನ ಪರಿಸ್ಥಿತಿಯು ಮೊದಲಿನಂತೆ ಆಗುವುದು ಎಂದಿದ್ದಾರೆ.

ಸಂಪಾದಕೀಯ ನಿಲುವು

ಮಾಲ್ಡೀವ್ಸ್‌ನ ಭಾರತ ವಿರೋಧಿ ಮತ್ತು ಚೀನಾ ಪರ ಇರುವ ಅಧ್ಯಕ್ಷ ಮುಯಿಜ್ಜು ಇವರಿಗೆ ಗಮನಕ್ಕೆ ಬರುತ್ತಿಲ್ಲ, ಇದು ಚಿಂತಾಜನಕವಾಗಿದೆ!