ಚರ್ಚ್ ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ ಪಡೆದಿರುವ ಮಾಲಿಕತ್ವವು ನ್ಯಾಯ ಸಮ್ಮತವಲ್ಲ ! – ಕೇರಳ ಉಚ್ಚ ನ್ಯಾಯಾಲಯ 

  • ಕೇರಳ ರಾಜ್ಯದಲ್ಲಿನ ವಾಯನಾಡ ಜಿಲ್ಲೆಯಲ್ಲಿನ ಪ್ರಕರಣ

  • ಸರಕಾರವು ಚರ್ಚ್ ನಿಂದ ಭೂಮಿಯ ಹಕ್ಕು ಹಿಂಪಡೆಯಬೇಕು ಎಂದು ರಾಜ್ಯ ಸರಕಾರಕ್ಕೆ ಆದೇಶ !

ಕೊಚ್ಚಿ (ಕೇರಳ) – ಚರ್ಚ್ ಸರಕಾರಿ ಭೂಮಿಯ ಮೇಲೆ ದಶಕಗಳಿಂದ ಅತಿಕ್ರಮಣ ಮಾಡಿ ಪಡೆದಿರುವ ಮಾಲಕತ್ವವು ನ್ಯಾಯ ಸಮ್ಮತ ಎಂದು ಹೇಳಲು ಸಾಧ್ಯವಿಲ್ಲ. ಚರ್ಚ್‌ಗೆ ಈ ಆಸ್ತಿ ನೀಡುವುದರ ಹಿಂದೆ ಯಾವುದೇ ಸಾರ್ವಜನಿಕ ಹಿತಕ್ಕಲ್ಲ. ರಾಜ್ಯ ಸರಕಾರವು ಅತಿಕ್ರಮಣ ಆಗಿರುವ ಸರಕಾರಿ ಭೂಮಿಯನ್ನು ವಶಕ್ಕೆ ಪಡೆಯಲು ಹಿಂಪಡೆಯಬೇಕು, ಎಂದು ಕೇರಳ ಉಚ್ಚ ನ್ಯಾಯಾಲಯ ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ಹೇಳಿದ್ದು. ವಾಯನಡ ಜಿಲ್ಲೆಯಲ್ಲಿನ ಭೂಮಿ ಇಲ್ಲದ ಆದಿವಾಸಿ ಜನಾಂಗದಲ್ಲಿನ ಒಂದು ಸಾಮಾಜಿಕ ಕಾರ್ಯಕರ್ತೆಯು ಈ ಅರ್ಜಿ ಸಂಪೂರ್ಣ ಜನಾಂಗದ ವತಿಯಿಂದ ದಾಖಲಿಸಿದ್ದರು. ಈ ಮನವಿಯ ಮೂಲಕ ವಾಯನಾಡಿನ ಆದಿವಾಸಿ ಕುಟುಂಬಗಳಿಗೆ ವಾಸಿಸಲು ಭೂಮಿ ಮತ್ತು ಕೃಷಿ ಭೂಮಿಯ ಹಂಚಿಕೆ ಸುಲಭ ಆಗುವುದಕ್ಕಾಗಿ ಸರಕಾರಕ್ಕೆ ಆದೇಶ ನೀಡಲು ಆಗ್ರಹಿಸಿತ್ತು.

೧. ಸರಕಾರವು ೫.೫೩೫೮ ಹೆಕ್ಟರ್ ಭೂಮಿ ‘ಕಲ್ಲೋಡಿ ಸೇಂಟ್ ಜಾರ್ಜ್ ಫೋರೆನ್ ಚರ್ಚ್’ ಗೆ ಒಂದು ಆದೇಶದ ಮೂಲಕ ೧೦೦ ರೂಪಾಯಿ ಪ್ರತಿ ಎಕರೆ ಈ ಬಿಡಿ ಕಾಸಿನ ಹಣಕ್ಕೆ ಅಕ್ರಮವಾಗಿ ಹಸ್ತಾಂತರಿಸಿರುವ ಆರೋಪ ಕೂಡ ಮಾಡಿದ್ದಾರೆ.

೨. ಚರ್ಚ್ ಗೆ ಭೂಮಿ ನೀಡಿದ ಮಾಲಕತ್ವ ಶಾಶ್ವತವಲ್ಲ ಮತ್ತು ಅದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಇವರ ವಿಭಾಗೀಯಪೀಠ ಹೇಳಿದೆ. ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ ಅದರ ಮೇಲೆ ಅಕ್ರಮ ಕಟ್ಟಡ ಕಟ್ಟಿರುವ ಅತಿಕ್ರಮಣಕಾರಕರಿಗೆ ಯಾವುದೇ ಅಧಿಕಾರ ದೊರೆಯುವುದಿಲ್ಲ. ಸರಕಾರಿ ಭೂಮಿ ದಿನದಲಿತರಿಗೆ ನೀಡಬೇಕು, ಶ್ರೀಮಂತ ಜನರಿಗಲ್ಲ, ಎಂದು ಕೂಡ ನ್ಯಾಯಾಲಯವು ಹೇಳಿದೆ.

೩. ನ್ಯಾಯಾಲಯವು, ವಾಯನಾಡ ಜಿಲ್ಲೆಯಲ್ಲಿ ಸುಮಾರು ಶೇಕಡ ೨೦ ರಷ್ಟು ಜನಸಂಖ್ಯೆ ಆದಿವಾಸಿ ಜನಾಂಗದಾಗಿದೆ. ಇಲ್ಲಿಯ ಆದಿವಾಸಿ ಜನರ ವಾಸ್ತವ್ಯದ ಭೂಮಿ ಮತ್ತು ಕೃಷಿಗಾಗಿ ಭೂಮಿ ದೊರೆಯುವುದು ಎಂದು ಕಾದಿದ್ದಾರೆ. ಅವರ ಮುಖದ ಮೇಲೆ ಸುಂದರ ಹಾಸ್ಯ ಶಾಶ್ವತ ಇರಲು, ಇದನ್ನು ರಾಜವು ದೃಢಪಡಿಸಬೇಕು.

ಸಂಪಾದಕೀಯ ನಿಲುವು

ಇಟಲಿಯ ರಾಜಕುಮಾರನ ಮತದಾನ ಕ್ಷೇತ್ರದ ಪ್ರಕರಣ ಇರುವುದರಿಂದ ನ್ಯಾಯಾಲಯದ ಈ ಆದೇಶದ ಸ್ಥಳೀಯ ಆಡಳಿತ ಅಥವಾ ಸರಕಾರ ಅನುಷ್ಠಾನಗೊಳಿಸುವುದೆಂದು ಅನಿಸುವುದು ಇದು ಹಗಲದನಸು ಆಗಿದೆ ಎಂದು ಯಾರಾದರೂ ಹೇಳಿದರೆ ತಪ್ಪೇನು ಇಲ್ಲ ?