ಏಡನ್ ಕೊಲ್ಲಿಯ ವ್ಯಾಪಾರಿ ನೌಕೆಯ ಮೇಲೆ ಡ್ರೋನ ಮೂಲಕ ದಾಳಿ
ನವ ದೆಹಲಿ – ಏಡನ್ ಕೊಲ್ಲಿಯಲ್ಲಿ ಮತ್ತೊಮ್ಮೆ ಒಂದು ವ್ಯಾಪಾರಿ ನೌಕೆಯನ್ನು ಡ್ರೋನ ಮೂಲಕ ದಾಳಿ ನಡೆದಿದೆ.. ಈ ಸಮಯದಲ್ಲಿ ಭಾರತೀಯ ಯುದ್ಧ ನೌಕೆಯು ವ್ಯಾಪಾರಿ ನೌಕೆಗೆ ಸಹಾಯ ಮಾಡಿದೆ. ಈ ದಾಳಿಯನ್ನು ಯಾರು ಮಾಡಿದರು ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ.
1. ಈ ಘಟನೆಯ ಬಗ್ಗೆ ಮಾಹಿತಿ ನೀಡುವಾಗ ಭಾರತೀಯ ಸೇನೆಯ ಅಧಿಕಾರಿ ಮಾತನಾಡಿ, ಪ್ರಶಾಂತ ಮಹಾಸಾಗರದ ದ್ವೀಪ ದೇಶ ಪಲಾವೂ ಧ್ವಜವಿರುವ ‘ಎಂ.ವಿ.ಐಲ್ಯಾಂಡರ’ ಈ ನೌಕೆಯ ಮೇಲೆ ಫೆಬ್ರವರಿ 22 ರಂದು ದಾಳಿ ನಡೆಯಿತು. ಈ ಸಮಯದಲ್ಲಿ ನೌಕೆಯಲ್ಲಿರುವ ನೌಕರರ ಓರ್ವ ಸದಸ್ಯ ಗಾಯಗೊಂಡನು. ಭಾರತೀಯ ನೌಕಾದಳದ ಸಿಬ್ಬಂದಿ ಆ ನೌಕೆಯ ಮೇಲೆ ಹತ್ತಿ, ಅಲ್ಲಿದ್ದ ನೌಕರರನ್ನು ಬಿಡುಗಡೆಗೊಳಿಸಿದರು.
2. ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧವಾಲ ಅವರು ಮಾತನಾಡಿ, ವ್ಯಾಪಾರಿ ನೌಕೆ ಮತ್ತು ನೌಕರರ ರಕ್ಷಣೆಗಾಗಿ ಭಾರತೀಯ ನೌಕಾಪಡೆಯ ಯುದ್ಧ ನೌಕೆಯ ಪ್ರಯತ್ನ ದೃಢವಾದ ವಚನಬದ್ಧತೆಯನ್ನು ದೃಢಪಡಿಸುತ್ತದೆ ಎಂದು ಹೇಳಿದರು. ಕಳೆದ ಕೆಲವು ವಾರಗಳಲ್ಲಿ, ಭಾರತೀಯ ನೌಕಾಪಡೆಯು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ನಡೆದ ದಾಳಿಯ ನಂತರ ಹಲವಾರು ವ್ಯಾಪಾರಿ ದೋಣಿಗಳಿಗೆ ನೆರವು ನೀಡಿದೆ.