ಉತ್ತರ ಪ್ರದೇಶ ಪೊಲೀಸರಿಂದ ಜಮಿಯತ್ ಉಲೇಮಾ-ಎ-ಹಿಂದ ಅಧ್ಯಕ್ಷ ಮೌಲಾನಾ ಮಹಮೂದ್ ಅಸದ ಮದನಿಯ ವಿಚಾರಣೆ !

ಹಲಾಲ್ ಪ್ರಮಾಣಪತ್ರದ ಪ್ರಕರಣ

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಧ್ಯಯನಕಾರ)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯ ದಳವು ಹಲಾಲ ಪ್ರಮಾಣಪತ್ರಗಳ ವಿತರಣೆಗೆ ಸಂಬಂಧಿಸಿದಂತೆ ‘ಜಮೀಯತ್ ಉಲೇಮಾ-ಎ-ಹಿಂದ್’ ಅಧ್ಯಕ್ಷ ಮತ್ತು ‘ಹಲಾಲ್ ಫೌಂಡೇಶನ್ ಆಫ್ ಇಂಡಿಯಾ’ ಅಧ್ಯಕ್ಷ ಮೌಲಾನಾ ಮಹಮೂದ್ ಅಸಾದ್ ಹುಸೇನ್ ಮದನಿ ಅವರ ವಿಚಾರಣೆ ನಡೆಸಿದ್ದಾರೆ. ಮದನಿ ತಮಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿ 13 ರಂದು, ಲಕ್ಷ್ಮಣಪುರಿ ಪೊಲೀಸರು `ಹಲಾಲ ಕೌನ್ಸಿಲ ಆಫ್ ಇಂಡಿಯಾ’ ದ 4 ಪದಾಧಿಕಾರಿಗಳನ್ನು ಯೋಗ್ಯ ಮಾದರಿಗಳು ಅಥವಾ ಪರೀಕ್ಷೆಗಳನ್ನು ನಡೆಸದೇ ಸಂಸ್ಥೆಗಳಿಗೆ ಹಲಾಲ್ ಪ್ರಮಾಣಪತ್ರಗಳನ್ನು ನೀಡಿದ್ದಕ್ಕಾಗಿ ಬಂಧಿಸಿದ್ದರು.

ಹಲಾಲ್ ಪ್ರಮಾಣಪತ್ರದ ಪ್ರಕರಣದಲ್ಲಿ ಜನವರಿ 25 ರಂದು, ಸರ್ವೋಚ್ಚ ನ್ಯಾಯಾಲಯವು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲೆ ನಿರ್ಬಂಧ ವಿಧಿಸಿರುವ ವಿಷಯದಲ್ಲಿ ಬಂಧಿತರ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಮಹಮೂದ್ ಮದನಿ ಮತ್ತು ಇತರರ ವಿರುದ್ಧ ಯಾವುದೇ ಕ್ರಮ ಜರುಗಿಸುವದರಿಂದ ಸಂರಕ್ಷಣೆ ನೀಡಿತ್ತು. ಉತ್ತರ ಪ್ರದೇಶ ಸರಕಾರವು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆ ಇವುಗಳ ಮೇಲೆ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಮೇಲೆ ನ್ಯಾಯಾಲಯವು ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಈ ದೂರಿನಲ್ಲಿ ಹಲಾಲ ಮೇಲೆ ನಿರ್ಬಂಧ ಹೇರುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗಿದೆ.