ನವ ದೆಹಲಿ – ಚೀನಾ ಗಡಿಯಲ್ಲಿ ಗೂಂಡಾಗಿರಿ ಮಾಡುತ್ತಿದ್ದು ಗಲವಾನನಂತಹ ಪರಿಸ್ಥಿತಿ ಮತ್ತೆ ಉದ್ಭವಿಸಬಹುದು. ಹಾಗಾದರೆ ಆಗ ಭಾರತೀಯ ಸೈನ್ಯ ಧೈರ್ಯದಿಂದ ಚೀನಾ ಸೈನ್ಯವನ್ನು ಎದುರಿಸುತ್ತದೆ, ಎಂದು ಭಾರತದ ರಕ್ಷಣಾ ಸಚಿವ ಗಿರಿಧರ ಅರಮಾನೆ ಇವರು ಹೇಳಿಕೆ ನೀಡಿದರು. ಇಲ್ಲಿ ಭಾರತ ಮತ್ತು ಅಮೆರಿಕ ಇವರಲ್ಲಿ ರಕ್ಷಣಾ ಔದ್ಯೋಗಿಕ ಸಹಕಾರ ಹೆಚ್ಚಿಸಲು ಆಯೋಜಿಸಿರುವ ‘ಇಂಡಸ್ ಎಕ್ಸ್’ ಶೃಂಗ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅಮೆರಿಕಾದ ಇಂಡೋ-ಪ್ಯಾಸಿಫಿಕ್ ಕಮಾಂಡದ ಮುಖ್ಯಸ್ಥ ಅಡ್ಮಿರಲ್ ಜಾನ್ಸಿ ಎಕ್ವಿಲಿನೊ ಉಪಸ್ಥಿತರಿದ್ದರು.
ಅರಮಾನೆ ಮಾತು ಮುಂದುವರೆಸಿ,
೧. ಭಾರತ ಪ್ರಸ್ತುತ ಚೀನಾದ ಜೊತೆಗೆ ಸುಮಾರು ಪ್ರತಿಯೊಂದರಲ್ಲೂ ಸ್ಪರ್ಧೆ ಮಾಡುತ್ತಿದೆ. ಎಲ್ಲಿ ಗುಡ್ಡಗಳು ಇದೆ ಅಲ್ಲಿ ನಾವು ಇದ್ದೇವೆ ಮತ್ತು ಎಲ್ಲಿ ರಸ್ತೆ ಇದೆ ಅಲ್ಲಿ ಕೂಡ ನಾವು ಉಪಸ್ಥಿತರಿದ್ದೇವೆ.
೨. ಯಾವಾಗ ನಮಗೆ ಬೆಂಬಲದ ಅವಶ್ಯಕತೆ ಇದೆ ಆಗ ಅಮೇರಿಕಾ ಇರುತ್ತದೆ ಎಂದು ನಮಗೆ ಸಂಪೂರ್ಣ ನಂಬಿಕೆ ಇದೆ. (ಇಲ್ಲಿಯವರೆಗಿನ ಇತಿಹಾಸ ನೋಡಿದರೆ ಅಮೇರಿಕಾ ಎಂದು ಸಹಾಯಕ್ಕಾಗಿ ಬಂದಿಲ್ಲ. ಆದ್ದರಿಂದ ಚೀನಾದ ಜೊತೆಗೆ ಹೋರಾಡಲು ಭಾರತ ಆತ್ಮ ನಿರ್ಭರವಾಗುವುದು ಅವಶ್ಯಕವಾಗಿದೆ ! – ಸಂಪಾದಕರು)
೩. ಜೂನ್ ೨೦೨೦ ರಲ್ಲಿ ಗಲವಾನದಲ್ಲಿ ಚೀನಾದ ಜೊತೆಗೆ ನಡೆದಿರುವ ಸಂಘರ್ಷದ ನಂತರ ಅಮೇರಿಕಾದಿಂದ ಬೇಹುಗಾರಿಕೆಯ ಮಾಹಿತಿ ಮತ್ತು ಉಪಕರಣಗಳ ಮೂಲಕ ನಮಗೆ ಬಹಳ ಸಹಾಯವಾಗಿದೆ. ಇದಕ್ಕಾಗಿ ನಾವು ಅವರ ಆಭಾರ ಮನ್ನಿಸುತ್ತೇವೆ. ೨೦೨೦ ರಂತಹ ಪರಿಸ್ಥಿತಿಯನ್ನು ನಾವು ಮತ್ತೊಮ್ಮೆ ಎದುರಿಸಬೇಕಾಗುವ ಸಾಧ್ಯತೆ ಇದೆ. ಇಂಡೋ ಪ್ಯಾಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಮತ್ತು ಶಾಂತಿ ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ.
ಚೀನಾ ಡೆಪಸಾಂಗ್-ಡೇಮಚೋಕ ಇಲ್ಲಿಯ ಸೈನ್ಯ ತೆರವುಗೊಳಿಸುವ ಬೇಡಿಕೆ ತಿರಸ್ಕರಿಸಿದೆ
ಈ ಹಿಂದೆ ಫೆಬ್ರುವರಿ ೧೯ ರಂದು ಲಡಖ್‌ನಲ್ಲಿ ಚುಶುಲ್ ಮೊಲ್ಡ್ ಗಡಿಯಲ್ಲಿ ಭಾರತ ಮತ್ತು ಚೀನಾ ಇವರಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿನ ಚರ್ಚೆಯ ೨೧ ನೆಯ ಸುತ್ತು ನಡೆದಿದೆ. ೪ ತಿಂಗಳ ನಂತರ ನಡೆದಿರುವ ಈ ಸಭೆಯಲ್ಲಿ ಚೀನಾ ಮತ್ತೊಮ್ಮೆ ಒತ್ತಡ ಕಡಿಮೆ ಮಾಡಲು ಮತ್ತು ಡೇಪಸಾಂಗ್ ಮತ್ತು ಡೇಮಚೋಕ ಇಲ್ಲಿಯ ಸೈನ್ಯ ತೆರವುಗೊಳಿಸುವ ಭಾರತದ ಬೇಡಿಕೆಯನ್ನು ತಳ್ಳಿ ಹಾಕಿದೆ.
ಹೊಸ ಅಂಕಿಅಂಶಗಳ ಪ್ರಕಾರ ಚೀನಾದಿಂದ ಪಶ್ಚಿಮದಕಡೆ ಲಡಾಖ್‌ನಲ್ಲಿ ಹಾಗೂ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಇಲ್ಲಿಯ ಗಡಿಯಲ್ಲಿ ೫೦ ರಿಂದ ೬೦ ಸಾವಿರ ಸೈನಿಕರನ್ನು ನೇಮಕಗೊಳಿಸಿದೆ. ಇದಲ್ಲದೆ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ಕೂಡ ೯೦ ಸಾವಿರ ಸೈನಿಕರನ್ನು ನೇಮಕಗೊಳಿಸಿದೆ. ಅವರನ್ನು ಎದುರಿಸಲು ಭಾರತವು ಅಲ್ಲಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿದೆ.
ಗಲವಾನ ಇಲ್ಲಿಯ ಕಾರ್ಯಾಚರಣೆ ಏನು ?
ಜೂನ್ ೨೦೨೦ ರಲ್ಲಿ ಭಾರತ ಚೀನಾ ಗಡಿಯಲ್ಲಿ ಗಲವಾನ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರು ಎದುರುಬದರು ಬಂದಿದ್ದರು. ಆ ಸಮಯದಲ್ಲಿ ಭಾರತದ ೨೦ ಸೈನಿಕರು ವೀರಗತಿ ಪಡೆದಿದ್ದರೂ ಮತ್ತು ಚೀನಾದ ೧೦೦ ಸೈನಿಕರು ಹತರಾಗಿದ್ದರು ಎಂದು ಹೇಳಲಾಗಿತ್ತು.
#BreakingNews: Following the Galwan Clash in 2020, Indian army incorporates martial arts, Ghtaka, Khukri dance into the training routine; @kaidensharmaa shares more with @Sriya_Kundu #GalwanClash #IndianArmy #LAC pic.twitter.com/9kegX7qCb9
— News18 (@CNNnews18) February 18, 2024