ಸಾಧಕರ ಮನಸ್ಸನ್ನು ಗೆದ್ದು ಅವರನ್ನು ಸಾಧನೆಗೆ ಪ್ರೋತ್ಸಾಹಿಸುವ ಕರ್ನಾಟಕದ ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡ (೪೭ ವರ್ಷ) !

ಪೂ. ರಮಾನಂದ ಗೌಡ

‘೨.೧೧.೨೦೨೩ ರಂದು ಪನವೇಲ್‌ನ ದೇವದನಲ್ಲಿ ಸನಾತನ ಆಶ್ರಮದಲ್ಲಿ ನನಗೆ ಪೂ. ರಮಾನಂದ ಗೌಡ (ಪೂ. ಅಣ್ಣ, ಸನಾತನದ ೭೫ ನೇ (ಸಮಷ್ಟಿ) ಸಂತರು) ಇವರ ಸತ್ಸಂಗ ಲಭಿಸಿತು. ಅವರ ಜೊತೆಗೆ ಸಾಧನೆ ಮತ್ತು ಸೇವೆಯನ್ನು ಕಲಿಯಲು ಬಂದಿದ್ದ ಕೆಲವು ಸಾಧಕರು ನನಗೆ, ”ಈಗ ನಾವು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ವ್ಯಷ್ಟಿ ಸಾಧನೆಯಲ್ಲಿ ಆನಂದ ಸಿಗುತ್ತಿರುವುದರಿಂದ ನಮಗೆ ಅದರಿಂದ ಸಮಷ್ಟಿ ಸೇವೆಯಲ್ಲಿ ಲಾಭವಾಗುತ್ತಿದೆ’’, ಎಂದು ಹೇಳಿದರು. ಈ ಬಗ್ಗೆ ಜಿಜ್ಞಾಸೆಯೆಂದು ನಾನು ಪೂ. ಅಣ್ಣ ಮತ್ತು ಸಾಧಕರಲ್ಲಿ ಕೇಳಿದಾಗ ನನಗೆ ಪೂ. ರಮಾನಂದ ಗೌಡ ಇವರಿಂದ ಮುಂದಿನ ಅಂಶಗಳು ಕಲಿಯಲು ಸಿಕ್ಕಿದವು.

ಪೂ. ಶಿವಾಜಿ ವಟಕರ

೧. ಪೂ. ರಮಾನಂದ ಗೌಡ ಇವರು ಮಾರ್ಗದರ್ಶನದಿಂದ ಜಿಜ್ಞಾಸುಗಳನ್ನು ಸಂಸ್ಥೆಯೊಂದಿಗೆ ಜೋಡಿಸುವುದು

೧ ಅ. ಪೂ. ರಮಾನಂದ ಗೌಡ ಇವರ ಅಹಂಶೂನ್ಯತೆ : ಮಾರ್ಗದರ್ಶನದ ಆರಂಭದಲ್ಲಿ ಪೂ. ರಮಾನಂದ ಗೌಡ ಇವರು, ”ನನಗೆ ಏನೂ ಬರುವುದಿಲ್ಲ. ನಾನು ಗುರ್ವಾಜ್ಞೆಯೆಂದು ಮಾರ್ಗದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ಗುರುಗಳೇ ನನ್ನಿಂದ ಆವಶ್ಯಕವಾಗಿರುವುದನ್ನು ಮಾತನಾಡಿಸಿಕೊಳ್ಳುತ್ತಾರೆ’’, ಎನ್ನುತ್ತಾರೆ. ಇದರಿಂದ ಕೇಳುವವರಿಗೆ ಅವರ ಅಹಂಶೂನ್ಯತೆ ಗಮನಕ್ಕೆ ಬಂದು ಅವರು ಪೂ. ಅಣ್ಣನವರ ಹತ್ತಿರದವರಾಗುತ್ತಾರೆ. ಕೇಳುವವರು ಅವರ ಮಾರ್ಗದರ್ಶನವನ್ನು ಮನಸ್ಸುಕೊಟ್ಟು, ಏಕಾಗ್ರತೆಯಿಂದ ಮತ್ತು ಜಿಜ್ಞಾಸೆಯಿಂದ ಕೇಳುತ್ತಾರೆ.

೧ ಆ. ತಮ್ಮ ಸ್ವಂತದ ಅನುಭೂತಿಗಳನ್ನು ಹೇಳುವುದರಿಂದ ಕೇಳುವವರ ಭಾವಜಾಗೃತಿಯಾಗುವುದು : ಮಾರ್ಗದರ್ಶನದಲ್ಲಿ ಪೂ. ಅಣ್ಣನವರು ತಮ್ಮ ಜೀವನದಲ್ಲಾದ ೧-೨ ಕಠಿಣ ಪ್ರಸಂಗಗಳನ್ನು ಹೇಳುತ್ತಾರೆ. ‘ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಅವರ ಪ್ರಾರಬ್ಧವನ್ನು ಮುಗಿಸಿ ಅವರಿಗೆ ಹೇಗೆ ಸಹಾಯ ಮಾಡಿದರು ?’, ಈ ಬಗೆಗಿನ ಅನುಭೂತಿಯನ್ನು ಅವರು ಭಾವಪೂರ್ಣವಾಗಿ ಹೇಳುತ್ತಾರೆ. ಆ ಸಮಯದಲ್ಲಿ ಅವರ ಕಣ್ಣುಗಳಿಂದ ಭಾವಾಶ್ರುಗಳು ಹರಿಯುತ್ತಿರುತ್ತವೆ. ಇದರಿಂದ ಸಾಧಕರು, ಜಿಜ್ಞಾಸುಗಳು ಮತ್ತು ಹಿಂದೂ ಧರ್ಮಾಭಿಮಾನಿಗಳ ಭಾವಜಾಗೃತವಾಗುತ್ತದೆ.

೧ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಕೇಳುವವರಲ್ಲಿ ಶ್ರದ್ಧೆ ಮೂಡುವುದು : ಪೂ. ಅಣ್ಣ ಅನುಭೂತಿಗಳನ್ನು ಹೇಳಿದುದರಿಂದ ಕೇಳುವವರಲ್ಲಿ (ಸಾಧಕರು, ಜಿಜ್ಞಾಸುಗಳು ಮತ್ತು ಧರ್ಮಪ್ರೇಮಿಗಳ) ಗುರುಗಳ ಬಗೆಗಿನ ಶ್ರದ್ಧೆ ಹೆಚ್ಚಾಗುತ್ತದೆ ಮತ್ತು ‘ಗುರುಗಳು ಹೇಳಿದ ಸಾಧನೆ ಮಾಡುವುದು ಎಷ್ಟು ಮಹತ್ವದ್ದಾಗಿದೆ ?’, ಎಂಬುದು ಅವರ ಅಂತರ್ಮನಕ್ಕೆ ಮನವರಿಕೆಯಾಗುತ್ತದೆ. ‘ಇಂತಹ ಮಹಾನ ಗುರುದೇವರು ಯಾರು ಮತ್ತು ಅವರ ಕಲಿಕೆ (ಬೋಧನೆ) ಎಷ್ಟು ಶ್ರೇಷ್ಠವಾಗಿದೆ !’, ಎಂದು ಕೇಳುವವರಿಗೆ ಅನಿಸುತ್ತದೆ. ‘ಪರಾತ್ಪರ ಗುರು ಡಾ. ಆಠವಲೆಯವರು ಗುರುರೂಪದಲ್ಲಿನ ಈಶ್ವರರಾಗಿದ್ದಾರೆ’, ಎಂದು ಸಮಾಜದ ವ್ಯಕ್ತಿಗಳಿಗೂ ಅನಿಸುತ್ತದೆ. ಇದರಿಂದ ಹೊಸಬರ ಮನಸ್ಸಿನಲ್ಲಿ ಇಂತಹ ಗುರುಗಳ ದರ್ಶನ ಪಡೆಯುವ ಮತ್ತು ಅವರ ಮಾರ್ಗದರ್ಶನ ಕೇಳುವ ಸೆಳೆತ ಉತ್ಪನ್ನವಾಗುತ್ತದೆ. ‘ಪೂ. ಅಣ್ಣ ಇಷ್ಟು ಶ್ರೇಷ್ಠರಿದ್ದಾರೆ ಹೀಗಿರುವಾಗ, ಅವರ ಗುರುಗಳು ಇನ್ನೆಷ್ಟು ಶ್ರೇಷ್ಠರಾಗಿರಬಹುದು ?’, ಎಂಬ ಬಗ್ಗೆ ಕೇಳುವವರ ಮನಸ್ಸಿನಲ್ಲಿ ಜಿಜ್ಞಾಸೆ ಹುಟ್ಟುತ್ತದೆ.

೧ ಈ. ನಮ್ರತೆಯಿಂದ ಮತ್ತು ಆತ್ಮೀಯತೆಯಿಂದ ಮಾರ್ಗದರ್ಶನ ಮಾಡಿ ಜಿಜ್ಞಾಸುಗಳನ್ನು ಮತ್ತು ಸಮಾಜದ ವ್ಯಕ್ತಿಗಳನ್ನು ಸನಾತನ ಸಂಸ್ಥೆಯ ಕಾರ್ಯದೊಂದಿಗೆ ಜೋಡಿಸುವುದು : ಪೂ. ಅಣ್ಣನವರು ಬಹಳ ಆತ್ಮೀಯತೆಯಿಂದ ಮಾರ್ಗದರ್ಶನ ಮಾಡುತ್ತಾರೆ. ಆದುದರಿಂದ ಅವರ ಪ್ರತಿಯೊಂದು ಶಬ್ದದಿಂದ ಕೇಳುವವರ ಅಂತರ್ಮನದಲ್ಲಿ ಸಂಸ್ಕಾರವಾಗುತ್ತದೆ ಮತ್ತು ಅದಕ್ಕನುಸಾರ ಅವರಿಗೆ ವಿಚಾರ ಮತ್ತು ಕೃತಿ ಮಾಡಲು ಪ್ರೋತ್ಸಾಹ ಸಿಗುತ್ತದೆ. ಪೂ. ಅಣ್ಣನವರು ಎಲ್ಲರೊಂದಿಗೆ ಬಹಳ ನಮ್ರತೆಯಿಂದ ಮತ್ತು ಪ್ರೇಮದಿಂದ ಮಾತನಾಡುತ್ತಾರೆ. ಆದುದರಿಂದ ಅವರು ಕೇಳುವವರ ಮನಸ್ಸನ್ನು ಗೆಲ್ಲುತ್ತಾರೆ. ಕೇಳುವವರಿಗೂ ಅವರು ಹೇಳಿದ್ದನ್ನು ಕೇಳಿ ಆ ರೀತಿ ಕೃತಿ ಮಾಡಲು ಪ್ರೇರಣೆ ಸಿಗುತ್ತದೆ.

ಪೂ. ಅಣ್ಣನವರು ಸಮಾಜದ ಧರ್ಮಪ್ರೇಮಿಗಳು, ವೈದ್ಯರು, ನ್ಯಾಯವಾದಿಗಳು ಮುಂತಾದವರಿಗೆ ಮಾರ್ಗದರ್ಶನ ಮಾಡು ತ್ತಾರೆ ಮತ್ತು ಸಾಧನೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು ಅವರಲ್ಲಿ ಸಾಧನೆಯ ಬಗೆಗಿನ ಒಲವನ್ನು ಮೂಡಿಸುತ್ತಾರೆ. ಅವರು ಸಮಾಜದಲ್ಲಿನ ವ್ಯಕ್ತಿಗಳನ್ನು ಸನಾತನ ಸಂಸ್ಥೆಯೊಂದಿಗೆ ಜೋಡಿಸುತ್ತಾರೆ. ಅನಂತರ ಇಂತಹ ವ್ಯಕ್ತಿಗಳು ವ್ಯಷ್ಟಿ ಮತ್ತು ಸಮಷ್ಟಿ ಸೇವೆಯನ್ನು ತಳಮಳದಿಂದ ಮಾಡತೊಡಗುತ್ತಾರೆ.

೨. ಸಾಧಕರೊಂದಿಗೆ ಆತ್ಮೀಯತೆ ಸಾಧಿಸಿ ಅವರನ್ನು ಧ್ಯೇಯದ ವರೆಗೆ ಕರೆದೊಯ್ಯುವ ಪೂ. ರಮಾನಂದಣ್ಣ !

೨ ಅ. ಸಾಧಕರೊಂದಿಗೆ ಆತ್ಮೀಯತೆಯನ್ನು ಬೆಳೆಸಿದ್ದರಿಂದ ಸಾಧಕರು ಮನಮುಕ್ತವಾಗಿ ತಮ್ಮ ಸಾಧನೆಯ ಸ್ಥಿತಿಯನ್ನು ಹೇಳುವುದು : ಪೂ. ಅಣ್ಣನವರು ಮಾರ್ಗದರ್ಶನ ಮಾಡುವಾಗ ಸಾಧಕ ರೊಂದಿಗೆ ಆತ್ಮೀಯತೆಯನ್ನು ಬೆಳೆಸುತ್ತಾರೆ. ಆದುದರಿಂದ ಸಾಧಕರು ಮನಮುಕ್ತವಾಗಿ ಅವರಿಗೆ ತಮ್ಮ ಮನಸ್ಸಿನ ಸ್ಥಿತಿ ಹಾಗೂ ಸಾಧನೆಯ ಸ್ಥಿತಿಯನ್ನು ಮತ್ತು ಸಾಧನೆಯಲ್ಲಿನ ಅಡಚಣೆಗಳನ್ನೂ ಹೇಳುತ್ತಾರೆ. ಇದರಿಂದ ‘ಸಾಧಕನು ಯಾವ ಹಂತದಲ್ಲಿ ಮತ್ತು ಯಾವ ವಿಷಯದಲ್ಲಿ ಸಿಲುಕಿದ್ದಾನೆ ಮತ್ತು ಅವನು ಏನು ಮಾಡಬೇಕು ?’, ಎಂದು ಪೂ. ಅಣ್ಣನವರ ಗಮನಕ್ಕೆ ಬರುತ್ತದೆ. ಅದಕ್ಕನುಸಾರ ಅವರು ಸಾಧಕರಿಗೆ ಮಾರ್ಗ ದರ್ಶನ ಮಾಡುತ್ತಾರೆ.

೨ ಆ. ಸಾಧಕರ ಸ್ಥೂಲ ಮತ್ತು ಸೂಕ್ಷ್ಮ ಸ್ತರದ ಅಧ್ಯಯನ ಮಾಡಿ ಮಾರ್ಗದರ್ಶನ ಮಾಡುವುದು : ಪೂ. ಅಣ್ಣನವರು ಸಾಧಕರ ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ಅಧ್ಯಯನ ಮಾಡುತ್ತಾರೆ. ಗುರುಕೃಪೆಯಿಂದ ಪೂ. ಅಣ್ಣನವರಿಗೆ ಎದುರಿನ ವ್ಯಕ್ತಿಯ ಮನಸ್ಸಿನಲ್ಲಿನ ಸಾಧನೆಯ ಬಗೆಗಿನ ವಿಚಾರ ಮತ್ತು ಅವನ ಸಾಧನೆಯ ಬಗೆಗಿನ ಸ್ಥಿತಿ ಗಮನಕ್ಕೆ ಬರುತ್ತದೆ. ಆದುದರಿಂದ ಅವರು ಸಾಧಕರಿಗೆ ಯೋಗ್ಯ ಮಾರ್ಗದರ್ಶನ ಮಾಡಿ ಮುಂದಿನ ಹಂತಕ್ಕೆ ಹೋಗಲು ಸಹಾಯ ಮಾಡುತ್ತಾರೆ. ಇದರಿಂದ ‘ಸಂತರ ಚೈತನ್ಯ ಮತ್ತು ಸಂತರ ಕಾರ್ಯವು ಸೂಕ್ಷ್ಮ ಸ್ತರದಲ್ಲಿ ಹೇಗೆ ನಡೆಯುತ್ತದೆ ?’, ಎಂಬುದು ಕಲಿಯಲು ಸಿಗುತ್ತದೆ.

೨ ಇ. ಸಾಧಕರ ಮನಸ್ಸಿನಲ್ಲಿ ವ್ಯಷ್ಟಿ ಸಾಧನೆಯ ಮಹತ್ವವನ್ನು ಬಿಂಬಿಸುವುದು : ಪೂ. ಅಣ್ಣನವರು ‘ನಮ್ಮ ಜೀವನದ ಮಹತ್ವ ಮತ್ತು ಧ್ಯೇಯ ಏನಿದೆ ? ಜೀವನದಲ್ಲಿ ಸಾಧನೆಯ ಮಹತ್ವವೇನು ? ಗುರುಕೃಪಾಯೋಗದ ಅಂತರ್ಗತ ಸಾಧನೆಯಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯಲ್ಲಿ ಆನಂದವನ್ನು ಹೇಗೆ ಪಡೆಯಬೇಕು ?’, ಇದನ್ನೆಲ್ಲ ಸಾಧಕರ ಮನಸ್ಸಿನಲ್ಲಿ ಸಹಜವಾಗಿ ಬಿಂಬಿಸುತ್ತಾರೆ. ಇದರಿಂದ ಸಾಧಕರು ಕೂಡಲೇ ‘ದಿನದಲ್ಲಿ ೪ ಬಾರಿ ಪಟ್ಟಿ ಬರೆಯುವುದು, ಕಡಿಮೆಯೆಂದರೂ ೧೦ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು, ಸಮಷ್ಟಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು’, ಇತ್ಯಾದಿ ಪ್ರಯತ್ನಗಳನ್ನು ಬೇಗನೇ ಆರಂಭಿಸುತ್ತಾರೆ.

೨ ಈ. ಕಲಿಯಲು ಬಂದ ಸಾಧಕರನ್ನು ಸಿದ್ಧಪಡಿಸುವುದು : ಪೂ. ಅಣ್ಣ್ಣ ಇವರ ಮಾರ್ಗದರ್ಶನ ಪ್ರವಾಸದ ಸಮಯದಲ್ಲಿ ಅವರ ಜೊತೆಗೆ ಕೆಲವು (೧೦ ರಿಂದ ೧೫) ಸಾಧಕರು ಕಲಿಯಲು ಇರುತ್ತಾರೆ. ಪೂ. ಅಣ್ಣನವರು ಅವರ ಸಾಧನೆಯನ್ನು ಸುವ್ಯವಸ್ಥಿತಗೊಳಿಸುತ್ತಾರೆ. ಪ್ರತಿ ದಿನ ಅವರು ಸಾಧಕರಿಗೆ ಸಮಷ್ಟಿ ಸೇವೆಯನ್ನು ನೀಡಿ ಅದರ ವರದಿ ಯನ್ನು ತೆಗೆದುಕೊಳ್ಳುತ್ತಾರೆ. ಅವರು ‘ಸಾಧಕರು ಸಂಪೂರ್ಣ ದಿನದಲ್ಲಿ ಸಾಧನೆಗಾಗಿ ಎಷ್ಟು ಪ್ರಯತ್ನ ಮಾಡಿದರು ? ಅವರು ಎಲ್ಲಿ ಕಡಿಮೆ ಬಿದ್ದರು ? ಅವರಿಂದ ಯಾವ ತಪ್ಪುಗಳಾದವು ? ಇತರರ ನಿರೀಕ್ಷಣೆ ಮಾಡಿ ಅವರಿಗೇನು ಕಲಿಯಲು ಸಿಕ್ಕಿತು ?’, ಈ ರೀತಿಯಲ್ಲಿ ಅವರ ಸಂಪೂರ್ಣ ದಿನದ ವರದಿಯನ್ನು ರಾತ್ರಿ ತೆಗೆದುಕೊಳ್ಳುತ್ತಾರೆ. ಇದರಿಂದ ಅವರ ಜೊತೆಗೆ ಕಲಿಯಲು ಇರುವ ಸಾಧಕರು ಸಿದ್ಧರಾಗುತ್ತಾರೆ.

೨ ಉ. ಸಾಧಕರು ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗಲು ಸಾಧನೆಯ ಧ್ಯೇಯವನ್ನು ತೆಗೆದುಕೊಂಡು ಆ ರೀತಿ ಪ್ರಯತ್ನಿಸಲು ಆರಂಭಿಸುವುದು : ಪೂ. ಅಣ್ಣನವರು ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ (ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗುವ) ಧ್ಯೇಯವನ್ನು ಇಟ್ಟುಕೊಳ್ಳುವ ಬಗ್ಗೆ ಕೇಳುತ್ತಾರೆ. ಆ ಸಮಯದಲ್ಲಿ ಬಹಳಷ್ಟು ಸಾಧಕರು ಈ ಧ್ಯೇಯವನ್ನು ಇಟ್ಟುಕೊಳ್ಳಲು ನಿರ್ಧರಿಸುತ್ತಾರೆ. ಈ ಧ್ಯೇಯವನ್ನು ಇಟ್ಟುಕೊಂಡರೆ, ‘ಸಾಧಕರು ಯಾವ ಸಾಧನೆಯನ್ನು ಮಾಡಬೇಕು ?’ ಎಂಬುದರ ಬಗ್ಗೆ ಪೂ. ಅಣ್ಣನವರು ಮಾರ್ಗದರ್ಶನ ಮಾಡುತ್ತಾರೆ, ಉದಾ. ಸಮಷ್ಟಿ ಸೇವೆಗಾಗಿ ಸಮಯ ನೀಡುವುದು, ಗುರುಗಳ ಬಗ್ಗೆ ಭಾವವಿರುವುದು, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸುವುದು. ಇದರ ಪರಿಣಾಮವಾಗಿ ಸಾಧಕರು ತಾವಾಗಿಯೇ ಧ್ಯೇಯವಿರಿಸಿ ಅದನ್ನು ಪೂರ್ಣಗೊಳಿಸಲು ತಳಮಳದಿಂದ ಸಾಧನೆಯನ್ನು ಆರಂಭಿಸುತ್ತಾರೆ.

ಪೂ. ಅಣ್ಣನವರ ಸತ್ಸಂಗದಿಂದ ನನಗೆ ‘ಸಮಾಜದಲ್ಲಿನ ವ್ಯಕ್ತಿಗಳು, ಜಿಜ್ಞಾಸುಗಳು, ಧರ್ಮಾಭಿಮಾನಿ ಮತ್ತು ಸಾಧಕರೊಂದಿಗೆ ಸುಸಂವಾದ ಸಾಧಿಸಿ ಅವರಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಒಲವನ್ನು ಹೇಗೆ ಮೂಡಿಸಬೇಕು ?’, ಎಂಬುದು ಕಲಿಯಲು ಸಿಕ್ಕಿತು. ‘ಸಾಧಕರಿಗೆ ಮಾರ್ಗದರ್ಶನ ಮಾಡಿ ಮತ್ತು ಸಾಧಕರ ಮನಸ್ಸನ್ನು ಗೆದ್ದು ಅವರಲ್ಲಿ ಸಾಧನೆಯ ಆಸಕ್ತಿಯನ್ನು ಹೇಗೆ ಬೆಳೆಸ ಬೇಕು ?’ ಎಂದು ಕಲಿಯಲು ಸಿಕ್ಕಿತು. ‘ಸಾಧಕರಿಗೆ ಮಾರ್ಗದರ್ಶನ ಮಾಡಿ ಮತ್ತು ಸಾಧಕರ ಮನಸ್ಸನ್ನು ಗೆದ್ದು ಅವರನ್ನು ಸಾಧನೆಗೆ ಪ್ರೋತ್ಸಾಹಿಸುವ ಪೂ. ರಮಾನಂದ ಗೌಡ ಮತ್ತು ಅವರನ್ನು ತಯಾರಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ನಾನು ಕೋಟಿಶಃ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

– (ಪೂ.) ಶಿವಾಜಿ ವಟಕರ (ಸನಾತನದ ೧೦೨ ನೇ (ಸಮಷ್ಟಿ) ಸಂತ, ೭೭ ವರ್ಷ), ಸನಾತನ ಆಶ್ರಮ, ದೇವದ, ಪನವೇಲ. (೧೨.೧೧.೨೦೨೨)