ಕಾನ್ಪುರದಲ್ಲಿ (ಉತ್ತರಪ್ರದೇಶ) ಕಾಂಗ್ರೆಸ್ ನಿಂದ ಫಲಕಗಳ ಮೂಲಕ ಹಿಂದೂದೇವತೆಗಳ ವಿಡಂಬನೆ !

ರಾಹುಲ್‌ಗಾಂಧಿಯನ್ನು ಶ್ರೀಕೃಷ್ಣ ಹಾಗೂ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷರನ್ನು ಅರ್ಜುನನ ರೂಪದಲ್ಲಿ ತೋರಿಸಿದರು !

ಕಾನ್ಪುರ (ಉತ್ತರಪ್ರದೇಶ) – ಕಾಂಗ್ರೆಸ್ಸಿನ ನಾಯಕ ರಾಹುಲ್‌ಗಾಂಧಿ ಫೆಬ್ರವರಿ ೨೧ ರಂದು ಅವರ ‘ಭಾರತ್ ಜೋಡೋ ನ್ಯಾಯಯಾತ್ರೆ‘ ಹಿನ್ನಲೆಯಲ್ಲಿ ಕಾನ್ಪುರಕ್ಕೆ ತಲುಪಿದರು. ಅವರ ಸ್ವಾಗತಕ್ಕಾಗಿ ಸಂಪೂರ್ಣ ನಗರದಲ್ಲಿ ದೊಡ್ಡ ಫಲಕ ಮತ್ತು ಜಾಹಿರಾತುಗಳನ್ನು ಹಾಕಲಾಗಿತ್ತು. ರಾಹುಲ್‌ಗಾಂಧಿ ಅವರ ಸಭೆ ಘಂಟಾಘರ ಚೌಕದಲ್ಲಿ ನಡೆಯುವುದಿತ್ತು. ಅದಕ್ಕಾಗಿ ಹಾಕಲಾಗಿದ್ದ ದೊಡ್ಡ ಫಲಕದಲ್ಲಿ ಕಾಂಗ್ರೆಸ ನಾಯಕ ರಾಹುಲ್‌ಗಾಂಧಿಯನ್ನು ಭಗವಾನ್ ಶ್ರೀಕೃಷ್ಣ ಹಾಗೂ ಉತ್ತರಪ್ರದೇಶ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ಅಜಯ ರಾಯರನ್ನು ಅರ್ಜುನನ ರೂಪದಲ್ಲಿ ತೋರಿಸಲಾಗಿದೆ. ರಾಹುಲ್‌ಗಾಂಧಿ ಮಹಾಭಾರತದ ಶ್ರೀಕೃಷ್ಣನಂತೆ ಸಾರಥಿಯಾಗಿದ್ದಾನೆ ಹಾಗೂ ಅಜಯ ರಾಯ ಅರ್ಜುನನ ರೂಪದಲ್ಲಿ ಬಿಲ್ಲುಬಾಣ ಹಿಡಿದು ಹಿಂದೆ ಕುಳಿತಿದ್ದಾನೆ. ಕಾಂಗ್ರೆಸ್ಸಿನ ಸ್ಥಳೀಯ ನಾಯಕ ಸಂದೀಪ ಶುಕ್ಲಾ ಇವರು ಈ ಫಲಕ ಹಾಕಿದ್ದಾರೆ. ಸಂದೀಪ ಶುಕ್ಲಾ ಮಾತನಾಡಿ, “ಯಾವರೀತಿ ಶ್ರೀಕೃಷ್ಣನು ಅರ್ಜುನನನ್ನು ಮಹಾಭಾರತದಲ್ಲಿ ಗೆಲ್ಲಿಸಿದನೋ, ಅದೇರೀತಿ ರಾಹುಲ್‌ಗಾಂಧಿಯು ಭಾಜಪ ವಿರುದ್ಧ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಉತ್ತರಪ್ರದೇಶದಲ್ಲಿ ಅವರು ಅಜಯ ರಾಯರವರ ಸಾರಥಿಯಾಗಿದ್ದಾರೆ” ಎಂದರು. (ಹಿಂದೂದ್ವೇಷಿ ಕಾಂಗ್ರೆಸ್ಸಿಗೆ ಚುನಾವಣೆ ಹತ್ತಿರ ಬಂದಾಗ, ರಾಮಾಯಣ ಇಲ್ಲವೇ ಮಹಾಭಾರತ ನೆನಪಾಗುತ್ತದೆ ಇದನ್ನು ಗಮನದಲ್ಲಿಡಿ ! – ಸಂಪಾದಕರು)

(ಮೇಲೆ ತೋರಿಸಿರುವ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)

ಸಂಪಾದಕೀಯ ನಿಲುವು

ಕಾಂಗ್ರೆಸ್ ಅದರ ಸ್ಥಾಪನೆಯಾದಾಗಿನಿಂದಲೂ ಹಿಂದೂಧರ್ಮ, ಹಿಂದೂ ದೇವತೆಗಳು ಮತ್ತು ಸಂಪ್ರದಾಯಗಳನ್ನು ವಿವಿಧ ಮಾಧ್ಯಮಗಳ ಮೂಲಕ ಅಪಹಾಸ್ಯ ಮಾಡುತ್ತಿದೆ. ಈ ಪಕ್ಷದ ರಾಜಕೀಯ ಅಸ್ತಿತ್ವವನ್ನು ಈಗ ಹಿಂದೂಗಳು ಕೊನೆಗೊಳಿಸುತ್ತಾರೆ !