ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರು ನಿವೃತ್ತಿಯಾದ 5 ತಿಂಗಳ ನಂತರ ನೀಡಿದ ತೀರ್ಪು ಸುಪ್ರೀಂ ಕೋರ್ಟ್ ನಿಂದ ಅಸಿಂಧು !

ಪ್ರಕರಣದ ಕಡತವನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರುವುದು ಅನ್ಯಾಯ ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರು ತಮ್ಮ ನಿವೃತ್ತಿಯ ೫ ತಿಂಗಳ ನಂತರ ಪ್ರಕರಣವೊಂದರಲ್ಲಿ ತೀರ್ಪು ನೀಡಿರುವುದನ್ನು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸರ್ವೋಚ್ಚ ನ್ಯಾಯಾಲಯವು, ಅಧಿಕಾರ ತೊರೆದ ನಂತರ ೫ ತಿಂಗಳ ಕಾಲ ಪ್ರಕರಣದ ಕಡತವನ್ನು ಇಟ್ಟುಕೊಳ್ಳುವುದು ತೀರಾ ಅನ್ಯಾಯ ಎಂದು ಹೇಳಿದೆ. ನ್ಯಾಯಾಧೀಶರು ನಿರ್ಧಾರ ತೆಗೆದುಕೊಳ್ಳಲು ೫ ವಾರಗಳ ಕಾಲಾವಕಾಶ ಇತ್ತು; ಆದರೆ ಅವರು ಮಾಡಲಿಲ್ಲ. ಮದ್ರಾಸ್ ಹೈಕೋರ್ಟ್ ಈಗ ಮತ್ತೊಮ್ಮೆ ಈ ಪ್ರಕರಣವನ್ನು ಆಲಿಸಿ ತೀರ್ಪು ನೀಡಬೇಕು.

ಸರ್ವೋಚ್ಚ ನ್ಯಾಯಾಲಯವು ಇಂಗ್ಲೆಂಡಿನ ಮೊದಲ ಮುಖ್ಯ ನ್ಯಾಯಮೂರ್ತಿ ಲಾರ್ಡ್ ಹೆವಾರ್ಟ್ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಾ, ಅವರು ನ್ಯಾಯ ಕೇವಲ ಮಾಡುವುದಲ್ಲ ಅದು ಕಾಣಲು ಸಿಗಬೇಕು ಎಂದು ಹೇಳಿದರು. ಮದ್ರಾಸ್ ಹೈಕೋರ್ಟ್‌ನಲ್ಲಿ ಮಾಡಿರುವುದು ಹೇವರ್ಟ್ ಅವರ ಹೇಳಿಕೆಗೆ ವಿರುದ್ಧವಾಗಿದೆ. ಇಂತಹ ಅನ್ಯಾಯದ ಆಚರಣೆಗಳನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ನಿವೃತ್ತ ನ್ಯಾಯಾಧೀಶರ ನಿರ್ಧಾರವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.